Breaking News

ಮಹಿಳಾ-ಯುವಕ ಮಂಡಳದಿಂದ ಅಗಲಿದ ಅಪ್ಪುಗೆ ಶ್ರದ್ಧಾಂಜಲಿ

Spread the love

ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನಕ್ಕೆ ಎಲ್ಲರೂ ಮಮ್ಮಲ ಮರಗುತ್ತಿದ್ದಾರೆ. ಈ ಸಾವು ನ್ಯಾಯವೇ ಎನ್ನುತ್ತಿದ್ದಾರೆ. ಇನ್ನು ನಾಡಿನ ಮೂಲೆ ಮೂಲೆಯಲ್ಲಿ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಅದೇ ರೀತಿ ಬೆಳಗಾವಿಯ ಕಪಿಲೇಶ್ವರ ಮಹಿಳಾ ಮಂಡಳ ಮತ್ತು ಯುವಕ ಮಂಡಳ ವತಿಯಿಂದಲೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬೆಳಗಾವಿಯ ಕಪಿಲೇಶ್ವರ ಏರಿಯಾದಲ್ಲಿ ಕಪಿಲೇಶ್ವರ ಮಹಿಳಾ ಮಂಡಳ ಮತ್ತು ಯುವಕ ಮಂಡಳದ ಪದಾಧಿಕಾರಿಗಳು ಅಗಲಿದ ಕನ್ನಡದ ಕಣ್ಮನಿ, ಯುವರತ್ನ, ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರ ಇರುವ ಬ್ಯಾನರ್‍ಗೆ ಪೂಜೆ ಸಲ್ಲಿಸಿ, ದೀಪ ಬೆಳಗಿಸಿ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಜ್ಯೋತಿ ಶೆಟ್ಟಿ, ಬಾಹುಬಲಿ ದೊಡ್ಡನ್ನವರ ಪುನೀತ್ ರಾಜ್‍ಕುಮಾರ್ ಅವರು ನಮ್ಮ ನಾಡಿನ ಅದ್ಭುತ ಚಿತ್ರನಟರಾಗಿದ್ದರು.

ತಮ್ಮ ಸದಭಿರುಚಿ ಚಿತ್ರಗಳ ಮೂಲಕ ಸಮಾಜದಲ್ಲಿ ಸಾಕಷ್ಟು ಬದಲಾವಣೆಗೆ ನಾಂದಿ ಹಾಡಿದ್ದರು. ಇವರ ಅಕಾಲಿಕ ಮರಣ ಎಲ್ಲರ ಮನಸ್ಸನ್ನು ಘಾಸಿಗೊಳಿಸಿದೆ ಎಂದು ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ ಪುಷ್ಪಾ ದೇವರ, ಲಕ್ಷ್ಮೀ ನಾಯಿಕ್, ಈಶ್ವರಿ ದೇವರ, ಗೀತಾ, ಮನಿಶಾ ಮೆಣಸೆ, ರಾಘು ನಾಯಿಕ್, ರಮೇಶ ದೇವರ, ಗಣೇಶ, ಸಂತೋಷ ದೇವರ, ರಾಹುಲ್ ಕಾಕತ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ