Breaking News
Home / ರಾಜ್ಯ / 1-5ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು (ಅ.25) ಆರಂಭ ಮಾರ್ಗಸೂಚಿಗಳೇನು?

1-5ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು (ಅ.25) ಆರಂಭ ಮಾರ್ಗಸೂಚಿಗಳೇನು?

Spread the love

ಬೆಂಗಳೂರು: ಕೋವಿಡ್‌ದಿಂದಾಗಿ ಒಂದೂವರೆ ವರ್ಷದಿಂದ ಬಾಕಿಯಾಗಿದ್ದ 1-5ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಸೋಮವಾರ (ಅ.25) ಆರಂಭವಾಗುತ್ತಿವೆ.

ಮಕ್ಕಳು ಕೋವಿಡ್‌ ಸುರಕ್ಷಾಕ್ರಮಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಕ್ಕಳಲ್ಲಿ ಕೋವಿಡ್‌ ಕುರಿತು ಜಾಗೃತಿ ಮೂಡಿಸಲು ಕೋವಿಡ್‌ ಸೋಂಕಿನ ಕುರಿತು ತರಗತಿ ಅವಧಿಯಲ್ಲಿ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಮಾರ್ಗಸೂಚಿಗಳೇನು?
ಭೌತಿಕ ಹಾಜರಾತಿ ಕಡ್ಡಾಯವಲ್ಲ. ಆದರೆ, ಹಾಜರಾಗುವವರು ಪಾಲಕರಿಂದ ಅನುಮತಿ ಪತ್ರ ತರುವುದು ಕಡ್ಡಾಯವಾಗಿದೆ. ಎರಡು ಡೋಸ್‌ ಲಸಿಕೆ ಪಡೆದ ಶಿಕ್ಷಕರು, ಶಿಕ್ಷಕೇತರ ಸಿಬಂದಿ ಮಾತ್ರ ಶಾಲೆಗೆ ಬರಬೇಕು. ಸಾಮಾಜಿಕ ಅಂತರ, ಮಾಸ್ಕ್, ವಿದ್ಯಾರ್ಥಿಗಳ ಉಷ್ಣಾಂಶ ಪರೀಕ್ಷೆ ಇತ್ಯಾದಿ ನಿತ್ಯವೂ ಮಾಡಬೇಕು. ಶೌಚಾಲಯ ಹಾಗೂ ತರಗತಿ ಕೊಠಡಿಯನ್ನು ನಿತ್ಯವೂ ಸ್ವತ್ಛ ಮಾಡಬೇಕು. ಶೇ.50ರಷ್ಟು ಮಕ್ಕಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ಅ.25ರಿಂದ 30ರ ಅರ್ಧದಿನ ಮಾತ್ರ ಶಾಲೆಗಳನ್ನು ನಡೆಸಲಾಗುತ್ತದೆ. ಹೀಗಾಗಿ, ಬಿಸಿಯೂಟದ ವ್ಯವಸ್ಥೆ ಇರುವುದಿಲ್ಲ. ನ.2ರಿಂದ ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯುವುದರಿಂದ ಬಿಸಿಯೂಟ ವ್ಯವಸ್ಥೆ ಇರಲಿದೆ.

ತರಗತಿಗಳ ಸಮಯ
ಸೋಮವಾರದಿಂದ ಶುಕ್ರವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 1ರ ವರೆಗೆ ಮತ್ತು ಶನಿವಾರ ಬೆಳಗ್ಗೆ 8.30ರಿಂದ 11.40ರ ವರೆಗೆ ತರಗತಿಗಳು ನಡೆಯಲಿವೆ. ನ.2ರಿಂದ ಬೆಳಗ್ಗೆ 10ರಿಂದ ಸಂಜೆ 4.30ರ ವರೆಗೆ ತರಗತಿಗಳು ನಡೆಯಲಿವೆ.


Spread the love

About Laxminews 24x7

Check Also

ಕೇಂದ್ರ ಸರ್ಕಾರ ರಾಜ್ಯಕ್ಕೆ 2.30 ಲಕ್ಷ ಸಾವಿರ ಕೋಟಿ ರೂ. ನೀಡಿದೆ;ಜೋಶಿ

Spread the loveಕರ್ನಾಟಕದಲ್ಲಿ ಬರಗಾಲ ಆವರಿಸಿದ್ದು, ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಇನ್ನೂ ಕೂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ