Home / ರಾಜಕೀಯ / ಮಂಗಳೂರು: ಸಂಚಾರ ಪೊಲೀಸರಿಗೆ ಬಾಡಿ ಕ್ಯಾಮರಾ ಅಳವಡಿಕೆ

ಮಂಗಳೂರು: ಸಂಚಾರ ಪೊಲೀಸರಿಗೆ ಬಾಡಿ ಕ್ಯಾಮರಾ ಅಳವಡಿಕೆ

Spread the love

ಮಂಗಳೂರು, ಅ.11: ಸಾರ್ವಜನಿಕರ ಮೇಲೆ ಪೊಲೀಸರು ಹರಿ ಹಾಯ್ದು ಹೋಗುವುದು ಅಥವಾ ಪೊಲೀಸರ ಜೊತೆ ಸಾರ್ವಜನಿಕರು ಒರಟಾಗಿ ವರ್ತಿಸುವುದನ್ನು ತಪ್ಪಿಸುವ ಸಲುವಾಗಿ ಮಂಗಳೂರು ನಗರ ಸಂಚಾರ ಪೊಲೀಸರು ‘ಬಾಡಿ ಕ್ಯಾಮರಾ’ ಅಳವಡಿಕೆ ಪ್ರಕ್ರಿಯೆ ಆರಂಭಿಸಿದ್ದಾರೆ. ಅಹಿತಕರ ಘಟನೆಗಳ ಸಂದರ್ಭ ಸತ್ಯಾಸತ್ಯತೆಯನ್ನು ಅರಿಯಲು ಇದು ಸಹಕಾರಿ ಎಂದು ಹೇಳಲಾಗುತ್ತಿದೆ.

ವಾಹನಗಳ ತಪಾಸಣೆಯ ವೇಳೆ ಪೊಲೀಸರು ಮತ್ತು ಸಾರ್ವ ಜನಿಕರ ಮಧ್ಯೆ ಮಾತಿನ ಚಕಮಕಿ ನಡೆಯುವುದು ಸಾಮಾನ್ಯವಾಗಿದೆ. ಆವಾಗ ‘ಬಾಡಿ ಕ್ಯಾಮರಾ’ ಸೂಕ್ತ ‘ರಕ್ಷಣೆ’ ಒದಗಿಸಲಿದೆ ಎಂಬ ವಿಶ್ವಾಸದೊಂದಿಗೆ ಮಂಗಳೂರು ಸಂಚಾರ ಪೊಲೀಸರು ‘ಬಾಡಿ ಕ್ಯಾಮರಾ’ ಅಳವಡಿಸತೊಡಗಿದ್ದಾರೆ.

ಕೆಲವು ಸಂದರ್ಭ ಸಾರ್ವಜನಿಕರು ಅಥವಾ ಪೊಲೀಸರು ಆಕ್ರೋಶಭರಿತರಾಗುವುದು, ದರ್ಪ ತೋರುವುದು, ಒರಟಾಗಿ ವರ್ತಿಸುವುದು, ಮಾತಿನ ಚಕಮಕಿಗಿಳಿಯುವುದು, ಸಂಘರ್ಷದ ವಾತಾವರಣ ಸೃಷ್ಟಿಸುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭ ‘ಬಾಡಿ ಕ್ಯಾಮರಾ’ ಅಳವಡಿಸಿದರೆ ವಾಸ್ತವಾಂಶ ತಿಳಿಯಬಹುದಾಗಿದೆ. ಈಗಾಗಲೆ ಮಂಗಳೂರಿನ ಕೆಲವೇ ಪೊಲೀಸರ ಬಳಿ ‘ಬಾಡಿ ಕ್ಯಾಮರಾ’ ಇದ್ದು, ಇನ್ನಷ್ಟು ಪೊಲೀಸರಿಗೆ ಅಳವಡಿಸಲು ಇಲಾಖೆ ಚಿಂತನೆ ನಡೆಸಿದೆ.ಈ ‘ಬಾಡಿ ಕ್ಯಾಮರಾ’ಗಳು ಧ್ವನಿ ಮತ್ತು ದೃಶ್ಯ ಎರಡನ್ನೂ ಚಿತ್ರೀಕರಿಸಿಕೊಳ್ಳುತ್ತವೆ. ಸಾರ್ವಜನಿಕರು ಅಥವಾ ಕರ್ತವ್ಯದಲ್ಲಿರುವ ಪೊಲೀಸರು ದುರ್ವರ್ತನೆ ತೋರಿದಾಗ ‘ಬಾಡಿ ಕ್ಯಾಮರಾ’ದಲ್ಲಿ ದಾಖಲಾಗುವುದರಿಂದ ಅಗತ್ಯ ಬಿದ್ದಾಗ ಪರಿಶೀಲಿಸಬಹುದಾಗಿದೆ.ಹಾಗಾಗಿ ಯಾರೇ ತಪ್ಪು ಮಾಡಿದರು ಅದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಸಂಯಮದಿಂದ ವರ್ತಿಸುವಂತೆ ಸಂಚಾರ ಪೊಲೀಸರಿಗೂ ಸೂಚನೆ ನೀಡಲಾಗಿದೆ. ಸಾರ್ವಜನಿಕರ ಸಹಕಾರವೂ ಅಗತ್ಯವಿದೆ. ಕೆಲವೊಮ್ಮೆ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಗಳಿರುವುದರಿಂದ ‘ಬಾಡಿ ಕ್ಯಾಮರಾ’ಗಳನ್ನು ಬಳಸುವುದು ಅನಿವಾರ್ಯವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ವಾಹನಗಳ ತಪಾಸಣೆ, ಸಂಚಾರ ನಿಯಮಗಳನ್ನು ಉಲ್ಲಂಘಿ ಸುವುದು, ಟೋಯಿಂಗ್ ಸಂದರ್ಭ ಕೆಲವರು ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದ ಘಟನೆಗಳಾಗಿದ್ದವು. ಇದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಕ್ರಿಯೆಗಳಾಗಿರುತ್ತದೆ. ಈ ಮಧ್ಯೆ ಪೊಲೀಸರು ಸಂಯಮ ಕಳೆದುಕೊಂಡು ವರ್ತಿಸಿರುವ ಬಗ್ಗೆಯೂ ದೂರುಗಳು ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ‘ಬಾಡಿ ಕ್ಯಾಮರಾ’ ಅಳವಡಿಕೆ ಅನಿವಾರ್ಯವಾಗಿದೆ.ಕೆಲವು ಪಾಯಿಂಟ್‌ಗಳಲ್ಲಿ ಒಬ್ಬೊಬ್ಬರೇ ಕೆಲಸ ಮಾಡು ವಾಗ ಮೊಬೈಲ್‌ನಿಂದ ರೆಕಾರ್ಡ್ ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಆವಾಗ ‘ಬಾಡಿ ಕ್ಯಾಮರಾ’ ತುಂಬಾ ಉಪಯೋಗಕ್ಕೆ ಬರುತ್ತದೆ. ಕರ್ತವ್ಯಕ್ಕೆ ಅಡ್ಡಿ ಪಡಿಸುವವರ ದೃಶ್ಯ ದಾಖಲಾಗುವುದರಿಂದ ನಮಗೆ ಸಾಕ್ಷಿ ದೊರೆಯುತ್ತದೆ ಎಂದು ಸಂಚಾರ ಪೊಲೀಸರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸಂಚಾರ ವಿಭಾಗದ ಪ್ರತಿ ಪೊಲೀಸ್ ಠಾಣೆಗೆ 2ರಿಂದ 4 ‘ಬಾಡಿ ಕ್ಯಾಮರಾ’ ನೀಡಲಾಗಿದೆ. ಈಗ ಪ್ರಮುಖ ಸ್ಥಳಗಳಲ್ಲಿ ಮಾತ್ರ ಇವುಗಳನ್ನು ಬಳಸಲಾಗುತ್ತಿದೆ. ವಾಹನಗಳ ಸಂಖ್ಯೆ, ತಪಾಸಣೆ ಹೆಚ್ಚುತ್ತಿರುವುದರಿಂದ ‘ಬಾಡಿ ಕ್ಯಾಮರಾ’ಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಬೇಕು ಎಂಬುದು ಸಂಚಾರ ಪೊಲೀಸರ ಬೇಡಿಕೆಯಾಗಿದೆ.

‘ಬಾಡಿ ಕ್ಯಾಮರಾ’ಗಳ ಅಗತ್ಯದ ಬಗ್ಗೆ ಸರಕಾರ ಮತ್ತು ನ್ಯಾಯಾಲಯಗಳು ಕೂಡ ತಿಳಿಸಿವೆ. ನಗರದಲ್ಲಿ ಬಾಡಿ ಕ್ಯಾಮರಾಗಳ ಸಂಖ್ಯೆ ಹೆಚ್ಚೇನು ಇಲ್ಲ. ಸುರಕ್ಷತೆಯ ದೃಷ್ಟಿಯಿಂದ ‘ಬಾಡಿ ಕ್ಯಾಮರಾ’ ನೀಡಬೇಕು ಎಂಬ ಬೇಡಿಕೆ ಪೊಲೀಸರಿಂದ ಕೇಳಿ ಬಂದಿದೆ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.

ಎಂ.ಎ.ನಟರಾಜ್,

ಎಸಿಪಿ, ಸಂಚಾರ ಉಪವಿಭಾಗ, ಮಂಗಳೂರು


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ