Breaking News

ಭಾರತ್ ಬಂದ್ ವೇಳೆ ಪೊಲೀಸರ ವಾಕಿಟಾಕಿಯೇ ಕಳವು

Spread the love

ಬೆಂಗಳೂರು: ಸೆಪ್ಟೆಂಬರ್ 27 ರಂದು ಕೃಷಿ ಕಾಯ್ದೆ ವಿರೋಧಿಸಿ ನಡೆದ ಭಾರತ್ ಬಂದ್ ವೇಳೆ ಪೊಲೀಸ್ ಇನ್ಸ್​ಪೆಕ್ಟರ್ ಒಬ್ಬರ ವಾಕಿಟಾಕಿ ಕಳ್ಳತನವಾಗಿದೆ. ಟೌನ್ ಹಾಲ್ ಮುಂಭಾಗ ಘಟನೆ ನಡೆದಿದೆ.

ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಹಲವು ಸಂಘಟನೆಗಳು ಭಾರತ್ ಬಂದ್ ನಡೆಸಿದ್ದವು. ಈ ವೇಳೆ ಟೌನ್ ಹಾಲ್ ಬಳಿ ರೈತರು ಪ್ರತಿಭಟನಾ ಜಾಥಾ ನಡೆಸಿದ್ದರು. ಈ ವೇಳೆ ಟೌನ್ ಹಾಲ್ ಬಳಿ ಕರ್ತವ್ಯಕ್ಕೆ ಎಸ್ ಜೆ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್ ನಿಯೋಜನೆಯಾಗಿದ್ದರು. ಇನ್ಸ್‌ಪೆಕ್ಟರ್ ಶಿವಕುಮಾರ್ ಬಳಿಯಿದ್ದ ಎಲೆಕ್ಟ್ರಾನಿಕ್‌ ವಾಕಿಟಾಕಿ ಮಿಸ್ ಆಗಿದೆ.

ಟೌನ್ ಹಾಲ್ ಮುಂಭಾಗ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಸಂಘಟನೆಗಳವರು ಸೇರಿದ್ದರು. ರಸ್ತೆ ತಡೆಗೆ ಮುಂದಾಗಿದ್ದ ವೇಳೆ ಗುಂಪುನ್ನ ತಡೆಯಲು ಪೊಲೀಸರು ಯತ್ನಿಸಿದ್ದರು. ಈ ವೇಳೆ ಕಂಟ್ರೋಲ್ ರೂಮ್​ಗೆ ಮಾಹಿತಿ ನೀಡಲು ಬೆಲ್ಟ್​ಗೆ ಸಿಕ್ಕಿಸಿದ‌ ವಾಕಿಟಾಕಿ ಹುಡುಕಿದಾಗ ಮಿಸ್ ಆಗಿರುವುದು ಗೊತ್ತಾಗಿದೆ.

ಪತ್ರಿಭಟನೆ ಬಳಿಕ ವಾಕಿಟಾಕಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಎಲ್ಲೂ ವಾಕಿಟಾಕಿ ಪತ್ತೆಯಾಗದ ಹಿನ್ನೆಯಲ್ಲಿ ದೂರು ನೀಡಲಾಗಿದೆ. ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಶಿವಕುಮಾರ್ ದೂರು ನೀಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ