Breaking News
Home / ರಾಜ್ಯ / ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಕೊರೊನಾ ಟೆಸ್ಟ್‍ಗೆ ಒಳಾಗಿದ್ದಾರೆ.

ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಕೊರೊನಾ ಟೆಸ್ಟ್‍ಗೆ ಒಳಾಗಿದ್ದಾರೆ.

Spread the love

ಮುಂಬೈ: ಕ್ರಿಕೆಟ್‍ನಿಂದ ಸಲ್ಪ ಸಮಯ ದೂರ ಉಳಿದಿದ್ದ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಕೊರೊನಾ ಟೆಸ್ಟ್‍ಗೆ ಒಳಾಗಿದ್ದಾರೆ.

ಕೊರೊನಾ ವೈರಸ್ ಕಾರಣದಿಂದ ಮುಂದಕ್ಕೆ ಹೋಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿಯನ್ನು ಸೆಪ್ಟೆಂಬರ್ 19ರಿಂದ ಪ್ರಾರಂಭ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನ ಮಾಡಿದೆ. ಭಾರತದಲ್ಲಿ ಸೋಂಕು ಹಿಡಿತಕ್ಕೆ ಬಾರದ ಕಾರಣ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. ಈ ನಡುವೆ ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುತ್ತಿವೆ.2019ರ ಜುಲೈನಿಂದ ಕ್ರಿಕೆಟ್‍ನಿಂದ ದೂರವಾಗಿದ್ದ ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಅವರು ಪ್ರಸ್ತುತ ರಾಂಚಿಯಲ್ಲಿದ್ದಾರೆ. ಜೊತೆಗೆ ಐಪಿಎಲ್ ಆಡಲು ತಯಾರಿ ಕೂಡ ಮಾಡುತ್ತಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳ ವರದಿಯಂತೆ ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ತಂಡದ ಆಟಗಾರ ಮೋನು ಕುಮಾರ್ ಅವರು ಬುಧವಾರ ತಮ್ಮ ಗಂಟಲು ದ್ರವದ ಮಾದರಿಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

ಗುರುನಾನಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಭಾಗವಾಗಿರುವ ಮೈಕ್ರೊಪ್ರಾಕ್ಸಿಸ್ ಲ್ಯಾಬ್ಸ್‍ನ ಹಿರಿಯ ಕಾರ್ಯನಿರ್ವಾಹಕರು ಧೋನಿ ಅವರ ತೋಟದ ಮನೆಗೆ ಬಂದು ಗಂಟಲು ದ್ರವದ ಮಾದರಿ ಸಂಗ್ರಹಿಸಿದ್ದಾರೆ. ಧೋನಿ ಮತ್ತು ಮೋನು ಕುಮಾರ್ ಇಬ್ಬರೂ ಕೊರೊನಾ ವರದಿ ನೆಗೆಟಿವ್ ಬಂದರೆ, ಆಗಸ್ಟ್ 14ರಂದು ಚೆನ್ನೈಗೆ ತೆರಳಲಿದ್ದಾರೆ. ಚೆನ್ನೈ ಜೊತೆಗೆ ಸೂಪರ್ ಕಿಂಗ್ಸ್ ಆಗಸ್ಟ್ 22 ರಂದು ಯುಎಇಗೆ ತೆರಳುವ ನಿರೀಕ್ಷೆಯಿದೆ.

ಕಳೆದ ಎರಡು ವಾರಗಳಲ್ಲಿ ಐಪಿಎಲ್ ಫ್ರಾಂಚೈಸಿಗಳಲ್ಲಿ ನಡೆದ ಕೊರೊನಾ ಪರೀಕ್ಷೆಯಲ್ಲಿ, ಆಗಸ್ಟ್ 12ರಂದು ರಾಜಸ್ಥಾನ್ ರಾಯಲ್ಸ್ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಜೊತೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‍ಮನ್ ಕರುಣ್ ನಾಯರ್ ಸಹ ವೈರಸ್‍ಗೆ ತುತ್ತಾಗಿದ್ದರು. ಆದರೆ ಅವರು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಬಿಸಿಸಿಐ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಐಪಿಎಲ್‍ನಲ್ಲಿ ಭಾಗವಹಿಸುವ ಎಲ್ಲ ಆಟಗಾರರು ಕೊರೊನಾ ಟೆಸ್ಟ್‍ಗೆ ಒಳಪಡಬೇಕು. ವರದಿಯಲ್ಲಿ ನೆಗೆಟಿವ್ ಬಂದವರು ಮಾತ್ರ ಟೂರ್ನಿಯಲ್ಲಿ ಭಾಗವಹಿಸಬಹುದಾಗಿದೆ.


Spread the love

About Laxminews 24x7

Check Also

ಬಡತನದಲ್ಲೂ ಅಪೂರ್ವ ಸಾಧನೆ

Spread the love ಮೂಡಲಗಿ: ತಾಲ್ಲೂಕಿನ ಅವರಾದಿ ಗ್ರಾಮದ ಕೂಲಿ ಮಾಡುವ ದಂಪತಿಯ ಮಗಳು ಲಕ್ಷ್ಮೀ ಗುರುನಾಥ ಹರಿಜನ ದ್ವಿತೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ