Breaking News

ನಗರದ ಶಹರ ಪೋಲಿಸ್ ಠಾಣೆ ಆವರಣದಲ್ಲಿ ಪಿಎಸ್ಐ ಕೆ ವಾಲಿಕಾರ ಅವರು ಶಾಂತಿ ಸಭೆ

Spread the love

ಶಾಂತಿ ಸಭೆ ; ಗೋಕಾಕದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ : PSI ಕೆ ವಾಲಿಕಾರ

ಗೋಕಾಕ : ನಗರದ ಶಹರ ಪೋಲಿಸ್ ಠಾಣೆ ಆವರಣದಲ್ಲಿ ಪಿಎಸ್ಐ ಕೆ ವಾಲಿಕಾರ ಅವರು ಶಾಂತಿ ಸಭೆ ಹಮ್ಮಿಕೊಂಡಿದ್ದರು.

ಈ ಸಭೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ಪ್ರಚೋದನಕಾರಿ ಅಥವಾ ವಿವಾದಾತ್ಮಕ ಪೋಸ್ಟ್‌ಗಳನ್ನು ಹಾಕುವುದು, ಲೈಕ್ ಮಾಡುವುದು ಮತ್ತು ಶೇರ್ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು‌ ಎಂದು ಪಿಎಸ್ಐ ಕೆ ವಾಲಿಕಾರ ತಿಳಿಸಿದ್ದಾರೆ.

ಜಾತಿ, ಮತ, ಧರ್ಮದ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಜಗಳ ನಡೆಯಬಾರದು ಮತ್ತು ಹಿಂಸಾಚಾರಕ್ಕೆ ಆಸ್ಪದ ಆಗಬಾರದು ಎಂಬ ಕಾರಣಕ್ಕೆ ತೀವ್ರ ನಿಗಾ ವಹಿಸಲಾಗಿದೆ. ಸಂಶಯಾಸ್ಪದ ನಡವಳಿಕೆ ಕಂಡು ಬಂದಲ್ಲಿ, ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅವರು ತಿಳಿಹೇಳಿದ್ದಾರೆ.

ಈ ಸಂದರ್ಭದಲ್ಲಿ ನಗರದ ಹಿರಿಯ ಮುಖಂಡರು ಯುವಕರು ಉಪಸ್ಥಿತರಿದ್ದರು


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ