Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ನಾನು ಅಜ್ಜನಾದೆ ಎಂದು ಖುಷಿಯಲ್ಲಿ ತೆಲಾಡಿದ ಲಖನ್ ಜಾರಕಿಹೊಳಿ.

ನಾನು ಅಜ್ಜನಾದೆ ಎಂದು ಖುಷಿಯಲ್ಲಿ ತೆಲಾಡಿದ ಲಖನ್ ಜಾರಕಿಹೊಳಿ.

Spread the love

ನಾನು ಅಜ್ಜನಾದೆ ಎಂದು ಖುಷಿಯಲ್ಲಿ ತೇಲಾಡಿದ ಲಖನ್ ಜಾರಕಿಹೊಳಿ..!!

ಜಾರಕಿಹೊಳಿ ಕುಟುಂಬದ ನಾಲ್ಕನೇ ಕುಡಿ ಆಗಮನ/ಹಿರಿಯ ಮೊಮಗನನ್ನು ನೊಡಲು ಓಡೋಡಿ  ಬಂದ ಕಿರಿಯ ಅಜ್ಜ/ ಮೊಮ್ಮಗನ ರೂಪದಲ್ಲಿ ತಂದೆಯನ್ನು ನೊಡಿ  ಖುಷಿಯಲ್ಲಿ ತೆಲಾಡಿದ

ರಕ್ತ ಸಂಭಂದಗಳು,ಬಂಧುಗಳು ,ನೆಂಟರು ಇವೆಲ್ಲಾ ಮಾನವ ಜೀವನದ ಪ್ರಮುಖ ಮತ್ತು ಬಹು ಮುಖ್ಯ ಕೊಂಡಿಗಳು.ಈ ಸಂಬಂಧಗಳಲ್ಲಿ ಸ್ವಲ್ಪ ಏರುಪೇರಾದರೂ ಎಷ್ಟೇ ಗಟ್ಟಿಯಾಗಿ ಬೆಸೆದುಕೊಂಡಿರುವ ಕೊಂಡಿಗಳಾದರೂ ಕಳಚಿ ದಿಕ್ಕಾಪಾಲಾಗುತ್ತವೆ.ಆದ್ದರಿಂದ ನಾವು ಸಂಬಂಧಗಳಿಗೆ ಮೊದಲ ಆದ್ಯತೆ ನೀಡುತ್ತೇವೆ.ಇದಕ್ಕೆ ರಾಜಕಾರಣಿಗಳು ಸಹ ಹೊರತಲ್ಲ.ನಮ್ಮ ನಿಮ್ಮ ಹಾಗೆ ರಾಜಕಾರಣಿಗಳು ಕೂಡ ಸಂಬಂಧಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ರಾಜಕೀಯದಲ್ಲಿ ಏನೇ ಕಲಹ ಇದ್ದರೂ ಅವುಗಳನ್ನೆಲ್ಲ ಬದಿಗಿಟ್ಟು ಕಷ್ಟ ಸುಖಗಳಲ್ಲಿ ಭಾಗಿ ಆಗಲು ಧಾವಿಸುತ್ತಾರೆ.ಇದರಿಂದ ಸಂಬಂಧಗಳ ಮಹತ್ವ ಹೆಚ್ಚುವುದಲ್ಲದೆ ಮನುಷ್ಯತ್ವದ ಬೆಲೆ ಎಲ್ಲದಕ್ಕಿಂತ ಮಿಗಿಲಾಗಿದೆ ಎಂಬ ಸಂದೇಶ ರವಾನೆ ಆಗುತ್ತದೆ. ಇಂತಹದೇ ಒಂದು ಘಟನೆ ರಾಜ್ಯ ರಾಜಕಾರಣದಲ್ಲಿ ಹೆಸರುವಾಸಿಯಾದ ಗೋಕಾಕ ನಗರದಲ್ಲಿಂದು ನಡೆದಿದೆ.

 

ಹೌದು..!! ನಿನ್ನೆಯ ದಿನ ಜಾರಕಿಹೊಳಿ ಕುಟುಂಬದಲ್ಲಿ ಅತಿ ಪ್ರಮುಖ ದಿನವಾಗಿತ್ತು.ಜಾರಕಿಹೊಳಿ ಕುಟುಂಬದ ನಾಲ್ಕನೆಯ ಕುಡಿ ಹಾಗೂ ರಮೇಶ ಜಾರಕಿಹೊಳಿ ಅವರ ಹಿರಿಯ ಸುಪುತ್ರ ಸಂತೋಷ ಮತ್ತು ಅವರ ಶ್ರೀಮತಿ ಅಂಬಿಕಾ ದಂಪತಿಯ ಮುದ್ದು ಮಗನ ಜನ್ಮ ದಿನವಾಗಿತ್ತು.ದಿ.ಶ್ರೀಮತಿ ಭೀಮವ್ವಾ ಹಾಗೂ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಅವರ ಮೊದಲನೇ ಮರಿ ಮೊಮ್ಮಗನ ಆಗಮನದಿಂದ ಜಾರಕಿಹೊಳಿ ಕುಟುಂಬದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿತ್ತು.ಈ ಸಂತೋಷದ ಸಂಭ್ರಮದಲ್ಲಿ ಭಾಗಿಯಾಗಲು ಜಾರಕಿಹೊಳಿ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಹೆರಿಗೆಯಾದ ಆಸ್ಪತ್ರೆಯ ಕಡೆ ಧಾವಿಸಿದ್ದರು.ಜಾರಕಿಹೊಳಿ ಕುಟುಂಬದ ನಾಲ್ಕನೇ ಕುಡಿಯನ್ನು ನೋಡಿ ಆನಂದಿಸಿದ್ದರು.ಎಲ್ಲರ ಬಾಯಲ್ಲಿ ಅಜ್ಜನೇ ಹುಟ್ಟಿ ಬಂದ ಎಂಬ ಸಂತೋಷದ ನುಡಿಗಳು ಉದುರುತ್ತಿದ್ದವು

.

ಜಾರಕಿಹೊಳಿ ಸಹೋದರರ ಮೊದಲನೇ ಮೊಮ್ಮಗನನ್ನು ನೊಡಲು ಓಡಿ ಬಂದ ಚಿಕ್ಕ ಅಜ್ಜ:

ಜಾರಕಿಹೊಳಿ ಸಹೋದರರಲ್ಲಿ ಒಬ್ಬರಾದ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಅವರು ತಾನು ಅಜ್ಜನಾದೆ ಎಂಬ ಸುದ್ದಿ ಕೇಳಿ ಇಂದು ಆಸ್ಪತ್ರೆಯ ಕಡೆ ಧಾವಿಸಿದರು.ಕೈಲಾಸವಾಸಿಯಾದ ತನ್ನ ತಂದೆಯನ್ನು ಮೊಮ್ಮಗನ ರೂಪದಲ್ಲಿ ನೊಡುವ ಕಾತುರ ಅವರಿಗೆ ಎಳೆದು ಬರುವ ಹಾಗೆ ಮಾಡಿದರೆ ತಾನು ತಾತನಾದೆ ಎಂಬ ಸಂತೋಷ ಅವರಿಗೆ ಖುಷಿಯ ಸಾಗರದಲ್ಲಿ ತೆಲಾಡಿಸಿತು.ಕಂದಮ್ಮನನ್ನು ತನ್ನ ಮಡಲಿನಲ್ಲಿ ಇಟ್ಟುಕೊಂಡು ಒಂದು ಕ್ಷಣ ಬಾಂಧವ್ಯದ ಲೋಕದಲ್ಲಿ ಮಗ್ನರಾದರು.ನಾನು ತಾತನಾದೆ ನನಗೂ ತಾತ ಅಂತ ಕರೆಯಲು ಒಬ್ಬ ಮೊಮ್ಮಗ ಬಂದನೆಂದು ಸಂತೋಷದಿಂದ ಎಲ್ಲರಲ್ಲಿ ಹೇಳಿಕೊಂಡಾಗ ಅಲ್ಲಿದ್ದ ಜಾರಕಿಹೊಳಿ ಕುಟುಂಬದ ಸದಸ್ಯರ ಕಣ್ಣುಗಳಲ್ಲಿ ಆನಂದಬಾಷ್ಪ ಹರಿದು ಬಂದಿತು.

ಒಟ್ಟಿನಲ್ಲಿ ನಾವೂ ನೀವೆಲ್ಲಾ ಜೀವಿಸುತ್ತಿರುವ ಈ ಪ್ರಪಂಚದಲ್ಲಿ ಎಲ್ಲರೂ ಬಾಂಧವ್ಯದ ಸುಳಿಯಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸಿಲುಕಿಕೊಂಡೇ ಇರುತ್ತೆವೆ. ಕೆಲಮೊಮ್ಮೆಎಷ್ಟೆ ವೈರತ್ವ ನಮ್ಮಲ್ಲಿ ಇದ್ರೂ ಕೂಡ ಅದನ್ನು ಬದಿಗಿಟ್ಟು ಸಂಬಂಧಗಳಿಗೆ ಬೆಲೆ ಕೊಡಲೇಬೇಕಾಗುತ್ತದೆ ಅನ್ನೋದಕ್ಕೆ ಮತ್ತೊಂದು ಸಾಕ್ಷಿಯೇ ಈ ಸನ್ನಿವೇಶಗಳು.


Spread the love

About Laxminews 24x7

Check Also

ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಕ್ಯಾ. ಪ್ರಾಂಜಲ್​ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಸಹಾಯಾರ್ಥವಾಗಿ ಚೆಕ್​ ವಿತರಣೆ

Spread the love ಆನೇಕಲ್: ದೇಶಕ್ಕಾಗಿ ಉಗ್ರರ ವಿರುದ್ಧದ ಹೋರಾಟದಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಕೊಟ್ಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ