Breaking News

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ವಾರ್ಷಿಕ ಅಂದಾಜು 100 ಕೋಟಿ ರೂ.ಆದಾಯದೊಂದಿಗೆ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ.

Spread the love

ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವಂತಹ ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ ದೇವಾಲಯಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಪ್ರಮುಖ 10 ದೇವಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿಯು ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ವಾರ್ಷಿಕ ಅಂದಾಜು 100 ಕೋಟಿ ರೂ. ಆದಾಯದೊಂದಿಗೆ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ.

ಉಳಿದಂತೆ 90 ರಿಂದ 92 ಕೋಟಿ ರೂ. ಆದಾಯದೊಂದಿಗೆ ಉಡುಪಿಯ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ 2ನೇಸ್ಥಾನ, 40 ರಿಂದ 42 ಕೋಟಿ ರೂ. ಆದಾಯದೊಂದಿಗೆ ಕಟೀಲು ದುರ್ಗಾಪರಮೇಶ್ವರಿ 3ನೇ ಸ್ಥಾನ, 30 ರಿಂದ 33 ಕೋಟಿ ರೂ. ಆದಾಯದೊಂದಿಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ 4ನೇ ಸ್ಥಾನ, 15 ರಿಂದ 20 ಕೋಟಿ ರೂ. ಆದಾಯದೊಂದಿಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ 5ನೇ ಸ್ಥಾನ, 15 ರಿಂದ 17 ಕೋಟಿ ರೂ. ಆದಾಯದೊಂದಿಗೆ ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಸ್ಥಾನ 6ನೇ ಸ್ಥಾನ, 10 ರಿಂದ 12 ಕೋಟಿ ರೂ. ಆದಾಯದಿಂದ ಶ್ರೀ ಮಂದಾರ್ತಿ ದೇವಸ್ಥಾನ 7ನೇ ಸ್ಥಾನ ಪಡೆದುಕೊಂಡಿದೆ.

ಕೊಪ್ಪಳದ ಗುಳ್ಳಗಮ್ಮನ ದೇವಸ್ಥಾನ, ಬೆಂಗಳೂರಿನ ಬನಶಂಕರಿ ದೇವಸ್ಥಾನ ಮತ್ತು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ 8 ರಿಂದ 10 ಕೋಟಿ ರೂ. ಆದಾಯದೊಂದಿಗೆ ಕೊನೆಯ ಮೂರು ಸ್ಥಾನವನ್ನು ಪಡೆದುಕೊಂಡಿದೆ.


Spread the love

About Laxminews 24x7

Check Also

ಚಾಲಕ ಇಳಿದು ಹೋಗುತ್ತಿದ್ದಂತೆ ಆತನ ಹಿಂದೆಯೇ ಚಲಿಸಿ ಅಂಗಡಿಗೆ ನುಗ್ಗಿದ ಡೀಸೆಲ್ ಟ್ಯಾಂಕರ್!

Spread the loveಕಲಬುರಗಿ, ಫೆಬ್ರವರಿ 14: ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಭಂಕೂರು ಗ್ರಾಮದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಡಿಸೆಲ್ ಟ್ಯಾಂಕರ್ ಅಂಗಡಿಯೊಂದಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ