ಧಾರವಾಡ: ಹೆಂಡತಿ ದಪ್ಪಗಿದ್ದಾಳೆ ಎಂದು ಪಾಪಿ ಪತಿ ಕತ್ತು ಹಿಸುಕಿ ಕೊಲೆಗೈದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದಿದೆ.
ಪ್ರಿಯಾಂಕ್ ಕಮಲಾಕರ್ (29) ಕೊಲೆಯಾದ ಮಹಿಳೆ . ಬಸವರಾಜ್ ವಡ್ಡರ್ ಕೊಲೆ ಮಾಡಿದ ಪತಿ. 2024 ರಲ್ಲಿ ಪ್ರಿಯಾಂಕ್‌ಳನ್ನ ಮದುವೆಯಾಗಿದ್ದ ಬಸವರಾಜ್ ಮದುವೆಯಾದ ಒಂದೇ ವರ್ಷದಲ್ಲಿ ಬಂಗಾರ ತರುವಂತೆ ಕಿರುಕುಳ ನೀಡುತಿದ್ದ. ತವರು ಮನೆಯಿಂದ ಬಂಗಾರ, ಹಣ ತರುವಂತೆ ಕಿರುಕುಳ ನೀಡಿದ್ದಲ್ಲದೇ ನೀನು ದಪ್ಪ ಇದ್ದಿ, ಗರ್ಭಿಣಿ ಆಗಲ್ಲ ಅಂತ ಕೊಲೆಗೈದಿದ್ದಾನೆ.
ಕಳೆದ ಎರಡು ದಿನಗಳ ಹಿಂದೆ (ಜೂನ್ 29) ಈ ಘಟನೆ ನಡೆದಿತ್ತು. ಮಂಗಳವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ನಂತರ ಕೊಲೆಯಾದ ಮಹಿಳೆಯ ಪೋಷಕರಿಗೆ ಈ ಮಾಹಿತಿ ನೀಡಲಾಗಿದೆ. ಅವರು ಕಲಬುರಗಿಯಿಂದ ಮಂಗಳವಾರ ತಡರಾತ್ರಿ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಬಸವರಾಜ್, ರೇಣವ್ವ, ಸುಭಾಷ್, ಸಿದ್ದರಾಮೇಶ್ ಬಂಧಿಸಿದ್ದಾರೆ.
Laxmi News 24×7