Breaking News

ಧಾರವಾಡ | ಕೊರಿಯನ್ ಗೇಮ್‍ ಗೀಳಿಗೆ ಯುವಕ ಬಲಿ

Spread the love

ಧಾರವಾಡ: ಕೊರಿಯನ್ ಗೇಮ್‍ ಗೀಳಿಗೆ ಯುವಕನೊಬ್ಬ ಬಲಿಯಾದ ಘಟನೆ ಧಾರವಾಡ ನಗರದ ಮಂಗಳಗಟ್ಟಿ ಪ್ಲಾಟ್‍ನಲ್ಲಿ ನಡೆದಿದೆ.

ನೇಣಿಗೆ ಶರಣಾದ ಯುವಕನನ್ನು ವಿಕಾಸ್ (20) ಎಂದು ಗುರುತಿಸಲಾಗಿದೆ. ಫೆ.6 ರಂದು ಯುವಕ ಶರಣಾಗಿದ್ದ. ಸಾವಿನ ನಂತರ ಮೊಬೈಲ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮೊಬೈಲ್ ಪರಿಶೀಲನೆ ವೇಳೆ ಕೊರಿಯನ್ ಗೆಮ್ಸ್ ಪತ್ತೆಯಾಗಿದೆ.

ಕೊರಿಯನ್ ಗೆಮ್ಸ್‌ಗೆ ವಿಕಾಸ್ ಅಡಿಕ್ಟ್ ಆಗಿದ್ದ‌ ಎಂಬ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ಪಿಯುಸಿ ಸೈನ್ಸ್ ಮುಗಿಸಿ ಮನೆಯಲ್ಲೇ ಇದ್ದ ವಿಕಾಸ್ ಯಾರಿಗೂ ಗೊತ್ತಿಲ್ಲದೇ ಗೆಮ್ಸ್ ಆಡುತಿದ್ದ. ಇನ್ನೂ ಸಾವಿಗೂ ಮುನ್ನ ನನ್ನ ಸಾವಿಗೆ ನಾನೇ ಕಾರಣ ಎಂದು ಸೆಲ್ಫ್ ಮೆಸೇಜ್ ಮಾಡಿ‌ ಸಾವಿಗೀಡಾಗಿದ್ದ. ಈ ಸಂಬಂಧ ಅಸಹಜ ಸಾವು ಎಂದು ದೂರು ದಾಖಲಾಗಿತ್ತು.


Spread the love

About Laxminews 24x7

Check Also

ಧಾರವಾಡದಲ್ಲಿ ಹೋರಾಟಕ್ಕೆ ಮುಂದಾಗಿದ್ದ ಉದ್ಯೋಗಾಕಾಂಕ್ಷಿಗಳು ಪೊಲೀಸರ ವಶಕ್ಕೆ

Spread the loveಧಾರವಾಡ: ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಅಂಬೇಡ್ಕರ್‌ ಜಯಂತಿ ದಿನವಾದ ಇಂದು ಧಾರವಾಡದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ