Breaking News
Home / ಜಿಲ್ಲೆ / ಕೂಡ್ಲಿಗಿ ತಾಂಡಾಗಳಲ್ಲಿ ಜಾಗೃತಿ:ಕೊರೋನಾ ಭಯ ಬಿಡಿ,ಮುಂಜಾಗೃತ ಕ್ರಮಗಳನ್ನು ಪಾಲಿಸಿ-ಸ್ವರೂಪಾನಂದ

ಕೂಡ್ಲಿಗಿ ತಾಂಡಾಗಳಲ್ಲಿ ಜಾಗೃತಿ:ಕೊರೋನಾ ಭಯ ಬಿಡಿ,ಮುಂಜಾಗೃತ ಕ್ರಮಗಳನ್ನು ಪಾಲಿಸಿ-ಸ್ವರೂಪಾನಂದ

Spread the love

ಕೂಡ್ಲಿಗಿ ತಾಂಡಾಗಳಲ್ಲಿ ಜಾಗೃತಿ:ಕೊರೋನಾ ಭಯ ಬಿಡಿ,ಮುಂಜಾಗೃತ ಕ್ರಮಗಳನ್ನು ಪಾಲಿಸಿ-ಸ್ವರೂಪಾನಂದ ಎಮ್.<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಿ.ಬಿ.ತಾಂಡಾ ಹಾಗು ದೂಪದಳ್ಳಿ ತಾಂಡಾಗಳಲ್ಲಿ ಜನತೆಗೆ ಆರೋಗ್ಯ ಇಲಾಖೆ.ಪೊಲೀಸ್ ಇಲಾಖೆ ಸಹಯೋಗದೊಂದಿಗೆ ತಾಲೂಕು ಆಡಳಿತ ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಯಿತು. ಕೊರೋನಾ ಕುರಿತು ಬರಹಗಾರ ಹಾಗು ಪೊಲೀಸ್ ಪೇದೆ ಸ್ವರೂಪನಂದ ಎಮ್.ಕೊಟ್ಟೂರು ಮಾತನಾಡಿದರು.ರೋಗದ ಬಗ್ಗೆ ಅನಗತ್ಯ ಆತಂಕ ಭಯ ಪಡಬಾರದು.ಅಗತ್ಯ ಮುಂಜಾಗೃತ ಕ್ರಮಗಳನ್ನು ಎಲ್ಲರೂ ಪಾಲಿಸಲೇಬೇಕು ಅಂದಾಗ ರೋಗದ ವಿರುದ್ಧ ಜಯ ಸಾಧಿಸಲು ಸಾಧ್ಯ ಎಂದರು.ವೈಯುಕ್ತಿಕ, ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಕೋವೇಡ್-19ನ್ನು ತಡೆಗಟ್ಟಲು ಸಾಧ್ಯವಿದೆ.ಕೋವೇಡ್-19 ಬಗ್ಗೆ ಭಯ ಬೀಳುವ ಅಗತ್ಯ ಇಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಇದನ್ನು ನಿರ್ಬಂಧಿಸಲು ಸಾಧ್ಯವಿದೆ. ಆಗಿದ್ದಾಂಗೆ ಕೈ ತೊಳೆಯುತ್ತಿರಿ. ಶುಭ್ರ ಬಟ್ಟೆಗಳನ್ನು ಧರಿಸಿ, ಸ್ವಚ್ಛತೆಗೆ ಹೆಚ್ಚಿನ ಹೊತ್ತು ಕೊಡಿ. ಶೀತ, ಕೆಮ್ಮು,ವಿಪರೀತ ಜ್ವರ. ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.ಅನಗತ್ಯವಾಗಿ ಓಡಾಡ ಬೇಡಿ.ಒಬ್ಬರನ್ನು ಭೇಟಿ ಆದರೆ ಅಂತರ ಕಾಯ್ದುಕೊಂಡು ಮಾತನಾಡಿ.ಎಲ್ಲರ ಒಳಿತಿಗಾಗಿ ಎಲ್ಲರೂ ಲಾಕ್ ಡೌನ್ ಗೆ ಸಹಕರಿಸಿ ಎಂದರು. ರಾಪಿಡ್ ರೆಸ್ಪಾನ್ಸ್ ಟೀಂ- ಕೊರೋನ ವೈರೇಸ್ ಹರಡದಂತೆ ಮುಂಜಾಗ್ರತಾ ಕ್ರಮವನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ.‌ಈ ಸಂಬಂಧ ತಾಲ್ಲೂಕು ಮಟ್ಟದಲ್ಲಿ ರಾಪಿಡ್ ರೆಸ್ಪಾನ್ಸ್ ಟೀಂನ್ನು ರಚಿಸಿಲಾಗಿದೆ.ಕೊಟ್ಟೂರು ಮತ್ತು ಕೂಡ್ಲಿಗಿ ಭಾಗದಲ್ಲಿನ ತಂಡದಲ್ಲಿ ತಿಮ್ಮಲಾಪುರ ಸರಕಾರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಹೆಚ್ ದೇವೇಂದ್ರ.ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಮಾರುತಿ.ಕಂದಾಯ ಇಲಾಖೆಯ ಸಿಬ್ಬಂದಿ ಕುಮಾರಸ್ವಾಮಿ ಭಾಗವಹಿಸಿದ್ದರು.ಗ್ರಾಮಸ್ಥರು. ಹಿರಿಯರು.ಯುವಕರು.ಮಹಿಳೆಯರು ಮುಂತಾದವರು ಉಪಸ್ಥಿತರಿದ್ದರು


Spread the love

About Laxminews 24x7

Check Also

SSLC ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಮಾರಾಮಾರಿ:

Spread the loveಬೆಂಗಳೂರು, ಮಾ.28: ಎಸ್‌ಎಸ್‌ಎಲ್​ಸಿ(SSLC) ಪರೀಕ್ಷೆ ವೇಳೆ ಅಪ್ರಾಪ್ತ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದು, ಮೂವರು ವಿದ್ಯಾರ್ಥಿಗಳಿಗೆ ಚಾಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ