Breaking News

ಕುಂದಾನಗರಿಯಲ್ಲಿ ಮೊಳಗಿದ ಕಪೂರ್ ಕುಟುಂಬದ ಎವರ್‌ಗ್ರೀನ್ ಗೀತೆಗಳು

Spread the love

ಕುಂದಾನಗರಿಯಲ್ಲಿ ಮೊಳಗಿದ ಕಪೂರ್ ಕುಟುಂಬದ ಎವರ್‌ಗ್ರೀನ್ ಗೀತೆಗಳು: ಕಲಾವಿದರ ಸುಶ್ರಾವ್ಯ ಗಾಯನಕ್ಕೆ ಬೆಳಗಾವಿ ಫಿದಾ

ಸ್ಪಂದನ ಮೆಲೋಡಿಸ್’ನ ವತಿಯಿಂದ ಜಾನೆ ಕಹಾ ಗಯೇ ವೋ ದಿನ್ ಕಾರ್ಯಕ್ರಮ

ಬೆಳಗಾವಿಯ ಲಿಂಗಾಯಿತ ಮಹಿಳಾ ಸಮಾಜ ಮತ್ತು ಕನ್ನಡ ಭವನದ ಸಹಯೋಗದಲ್ಲಿ “ಸ್ಪಂದನ ಮೆಲೋಡಿಸ್’ನ ವತಿಯಿಂದ ಜಾನೆ ಕಹಾ ಗಯೇ ವೋ ದಿನ್ ಕಪೂರ್ ಕುಟುಂಬದ ಚಲನಚಿತ್ರಗಳ ಗೀತೆಗಳ ಗಾಯನ ಸ್ಪರ್ಧೆ ನಡೆಯಿತು.

ಬೆಳಗಾವಿಯ ಲಿಂಗಾಯಿತ ಮಹಿಳಾ ಸಮಾಜ ಮತ್ತು ಕನ್ನಡ ಭವನದ ಸಹಯೋಗದಲ್ಲಿ “ಸ್ಪಂದನ ಮೆಲೋಡಿಸ್’ನ ವತಿಯಿಂದ ಜಾನೆ ಕಹಾ ಗಯೇ ವೋ ದಿನ್ ಕಪೂರ್ ಕುಟುಂಬದ ಚಲನಚಿತ್ರಗಳ ಗೀತೆಗಳ ಗಾಯನ ಸ್ಪರ್ಧೆ ನಡೆಯಿತು. ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಕೆ.ಎಲ್.ಇ ಸ್ಕೂಲ್ ಆಫ್ ಮ್ಯೂಜಿಕ್’ನ ಕೋ-ಆರ್ಡಿನೇಟರ್ ಡಾ. ರಾಜೇಂದ್ರ ಭಾಂಡನಕರ, ವಿಡೋರಿ ಗಾರ್ಡನ್ ಸ್ಟುಡಿಯೋ ಸಂಸ್ಥಾಪಕರಾದ ಬೀನಾ ಸಂಬರಗಿಮಠ, ರತ್ನಪ್ರಭಾ ಬೆಲ್ಲದ, ಶೈಲಜಾ ಭಿಂಗೆ, ಶಾಂತಾ ಆಚಾರ್ಯ ಉಪಸ್ಥಿತರಿದ್ಧರು. ಗಣ್ಯರಿಂದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಕೆ.ಎಲ್.ಇ ಸ್ಕೂಲ್ ಆಫ್ ಮ್ಯೂಜಿಕ್’ನ ಕೋ-ಆರ್ಡಿನೇಟರ್ ಡಾ. ರಾಜೇಂದ್ರ ಭಾಂಡನಕರ ಅವರು ವೃತ್ತಿಯೊಂದಿಗೆ ಬೇರೆ ವಿಷಯಗಳಲ್ಲಿಯೂ ತಮ್ಮನ್ನ ತಾವು ತೊಡಗಿಸಿಕೊಳ್ಳುವುದು ಸುಲಭದ ಮಾತಲ್ಲ. ಲಿಂಗಾಯಿತ ಮಹಿಳಾ ವೇದಿಕೆಯೂ ಯುವ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ಅವರ ಕಲೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು. ಬೈಟ್

ಇನ್ನು ವಿಡೋರಿ ಗಾರ್ಡನ್ ಸ್ಟುಡಿಯೋ ಸಂಸ್ಥಾಪಕರಾದ ಬೀನಾ ಸಂಬರಗಿಮಠ ಅವರು ಮೊದಲಿನ ದಿನಗಳನ್ನು ನೆನಪಿಸಿದ ಅವರು ಶಾಂತಾ ಆಚಾರ್ಯ ಮತ್ತು ತಂಡ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದರು. ಮನೋರಂಜನೆ ಅಷ್ಟೇ ಅಲ್ಲದೇ ಅವರು ಕಲ್ಯಾಣಕಾರಿ ಕೆಲಸವನ್ನು ಮಾಡುತ್ತಿದ್ದಾರೆಂದು ಶ್ಲಾಘಿಸಿದರು. ಬೈಟ್

ನಂತರ ಕಪೂರ್ ಕುಟುಂಬದ ಚಲನಚಿತ್ರಗಳ ಸೂಪರ್ ಹಿಟ್ ಗೀತೆಗಳನ್ನು ಕಲಾವಿದರು ಸುಶ್ರಾವ್ಯವಾಗಿ ಸಾದರಪಡಿಸಿದರು. ಇವರ ಗೀತೆಗಳಿಗೆ ತಕ್ಕಂತೆ ನರ್ತಿಸಿದ ಕಲಾವಿದರ ಪ್ರಸ್ತುತಿಯೂ ನೆರೆದವರ ಮನಸೂರೆಗೊಂಡಿತು. (ಫ್ಲೋ)

ಕಲಾವಿದರಾದ ವಿಶ್ವಾ ದೇಸಾಯಿ, ಬಜರಂಗ ಪರೀಟ್, ಮಹೇಶ್ ಕುಲಕರ್ಣಿ, ಕವೀತಾ ಜಾಧವ್, ಡಾ. ಮಾಲತೇಸ್ ಪಾಟೀಲ್, ಅಶ್ವಿನಿ, ರಾಘವೇಂದ್ರ, ಮನೋಜ್ ಮಾಲಗತ್ತಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.


Spread the love

About Laxminews 24x7

Check Also

ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ವಿಭಾಗೀಯ ಪೀಠ ಷರತ್ತುಬದ್ಧ ಅನುಮತಿ

Spread the loveಕಲಬುರಗಿ/ಬೀದರ್: ಜೂನ್ 28ರಂದು ಬೀದರ್‌ನ ಬಸವಕಲ್ಯಾಣದಲ್ಲಿ ನಡೆಯಲಿರುವ ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ಕರ್ನಾಟಕ ಹೈಕೋರ್ಟ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ