Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಪುಣ್ಯಸ್ಮರಣೆ ನಿಮಿತ್ಯ ತಂದೆ-ತಾಯಿಯ ಸಮಾಧಿಗೆ ಪೂಜೆ ಸಲ್ಲಿಸಿದ ಜಾರಕಿಹೊಳಿ ಸಹೋದರರು..!

ಪುಣ್ಯಸ್ಮರಣೆ ನಿಮಿತ್ಯ ತಂದೆ-ತಾಯಿಯ ಸಮಾಧಿಗೆ ಪೂಜೆ ಸಲ್ಲಿಸಿದ ಜಾರಕಿಹೊಳಿ ಸಹೋದರರು..!

Spread the love

ಕೈ.ವಾ.ಶ್ರೀ ಲಕ್ಷ್ಮಣರಾವ. ರಾ. ಜಾರಕಿಹೊಳಿ ಮತ್ತು ಕೈ.ವಾ.ಶ್ರೀಮತಿ ಭೀಮವ್ವ. ಲ.ಜಾರಕಿಹೊಳಿ ಅವರ 8 ನೇ ಪುಣ್ಯಸ್ಮರಣೆ ಕಾರ್ಯಕ್ರಮ/ ಸಮಾದಿ ಸ್ಥಳಕ್ಕೆ ಪೂಜೆ ಸಲ್ಲಿಸಿದ ಜಾರಕಿಹೊಳಿ ಕುಟುಂಬ/ಕಾರ್ಯಕ್ರಮದಲ್ಲಿ ಭಾಗಿಯಾದ ಬಂಧು-ಬಳಗ ಹಾಗೂ ಜಾರಕಿಹೊಳಿ ಅಭಿಮಾನಿಗಳು.

 

 

ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ರಮೇಶ ಜಾರಕಿಹೊಳಿ,ಸತೀಶ ಜಾರಕಿಹೊಳಿ,ಬಾಲಚಂದ್ರ ಜಾರಕಿಹೊಳಿ,ಹಾಗೂ ಲಕ್ಷ್ಮೀ ಎಜುಕೇಷನ್‌ ಟ್ರಸ್ಟ್ ಚೆರಮನ್ ಭೀಮಶಿ ಜಾರಕಿಹೊಳಿ,ಮಯೂರ ಸ್ಕೂಲ್ ಚೆರಮನ್ ಲಖನ ಜಾರಕಿಹೊಳಿ ಅವರ ತಂದೆ

ಕೈ.ವಾ.ಶ್ರೀ ಲಕ್ಷ್ಮಣರಾವ. ರಾ. ಜಾರಕಿಹೊಳಿ ಮತ್ತು ತಾಯಿ ಕೈ.ವಾ.ಶ್ರೀಮತಿ ಭೀಮವ್ವ. ಲ.ಜಾರಕಿಹೊಳಿ ಅವರ 8 ನೇ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಗುರುವಾರ ದಂದು ಗೋಕಾಕದ ತೋಟದಲ್ಲಿರುವ ಪೂಜ್ಯರ ಸಮಾಧಿ ಸ್ಥಳದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 

ಶಾಸಕ ರಮೇಶ ಜಾರಕಿಹೊಳಿ ಹಾಗೂ ಲಖನ ಜಾರಕಿಹೊಳಿ ಅವರು ಕುಟುಂಬ ಸಮೇತ ತಂದೆ-ತಾಯಿಯ ಸಮಾದಿ ಸ್ಥಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.ಕೆ.ಎಮ್.ಎಫ್ ಅಧ್ಯಕ್ಷರು ಹಾಗೂ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮನ ಸಲ್ಲಿಸಿದರು

 

 

.ಈ ಸಂದರ್ಭದಲ್ಲಿ ಕೈ.ವಾ.ಶ್ರೀ ಲಕ್ಷ್ಮಣರಾವ. ರಾ. ಜಾರಕಿಹೊಳಿ ಮತ್ತು ಕೈ.ವಾ.ಶ್ರೀಮತಿ ಭೀಮವ್ವ. ಲ.ಜಾರಕಿಹೊಳಿ ಅವರ ಪುತ್ರಿಯರು, ಸೊಸೆಯಂದಿರರು, ಮೊಮ್ಮಕ್ಕಳು ಹಾಗೂ ಸಂಬಂಧಿಕರಾದ ಲೋಕಸಭಾ ಸದಸ್ಯ ವಾಯ್.ದೇವೆಂದ್ರಪ್ಪ.ಅಳಿಯಂದಿರಾದ ಸಿದ್ದಲಿಂಗಪ್ಪ ಸಾಯಣ್ಣವರ,ಮಾಜಿ ಸಂಸದ ಭಗವಂತ ನಾಯಕ,ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ ಜಂಟಿ ಆಯುಕ್ತರಾದ ಡಾ.ವಾಯ್ ಮಂಜುನಾಥ. ಸೇರಿದಂತೆ ಅಪಾರ ಬಂಧು ಬಳಗ ಹಾಗೂ ಜಾರಕಿಹೊಳಿ ಕುಟುಂಬದ ಅಭಿಮಾನಿಗಳು ಭಾಗವಹಿಸಿದ್ದರು.

 

 

 

 


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..

Spread the love! ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ