Breaking News

ಸೋನಿಯಾ ಗಾಂಧಿ ದೇಹದಲ್ಲಿ ಇಟಲಿ ರಕ್ತ ಹರಿಯುತ್ತಿದೆ – ಹೆಚ್‌ಡಿಕೆ ಕಿಡಿ

Spread the love

ಹಾಸನ: ಸೋನಿಯಾ ಗಾಂಧಿ ನಮ್ಮ ದೇಶದವರಾ? ಅವರು ಮದುವೆಯಾಗಿ ಭಾರತಕ್ಕೆ ವಲಸೆ ಬಂದವರು. ಸ್ವಾಭಾವಿಕವಾಗಿ ಅವರ ರಕ್ತದಲ್ಲಿ ಇಟಾಲಿಯನ್ ರಕ್ತ ಹರಿಯುತ್ತದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಅವರು ಕಿಡಿಕಾರಿದ್ದಾರೆ.

ಹಾಸನದಲ್ಲಿ ಮಾಧ್ಯಮದವರೊಂದಿಗೆ ಸೋನಿಯಾ ಗಾಂಧಿ ಅವರಿಂದ ವಂದೇ ಮಾತರಂ ಗೀತೆಗೆ ಅವಮಾನ ವಿಚಾರದ ಕುರಿತು ಮಾತನಾಡಿದ ಅವರು, ಸರ್ಕಾರಿ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಗೆ ಸಮಾನವಾಗಿ ವಂದೇ ಮಾತರಂ ಗೌರವಿಸಲು ಕೇಂದ್ರ ಸರ್ಕಾರದಿಂದ ಕಾನೂನು ಆಗಿದೆ. ಇದನ್ನು ಗೌರವಿಸಬೇಕು ಎನ್ನೋದು ಎಲ್ಲರ ಅಭಿಪ್ರಾಯ. ಹಾಗಾಗಿ ಎಲ್ಲಾ ಪಕ್ಷಗಳು ಗೌರವಿಸಬೇಕಿರುವುದು ಕರ್ತವ್ಯ. ಕಾಂಗ್ರೆಸ್ ನಾಯಕರು ಇದರಲ್ಲಿ ಸಣ್ಣತನ ತೋರಿಸುವ ಅಗತ್ಯ ಇಲ್ಲ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಂದ ನೀವೇನು ಬಯಸಲು ಸಾಧ್ಯ? ಅವರು ನಮ್ಮ ದೇಶದವರಾ? ಅವರು ಮದುವೆಯಾಗಿ ಭಾರತಕ್ಕೆ ಬಂದವರು. ಆದರೆ ಅವರಲ್ಲಿರುವುದು ಇಟಲಿ ರಕ್ತವೇ ಅಲ್ಲವೇ ಎಂದು ಆಕ್ರೋಶ ಹೊರಹಾಕಿದ್ದಾರೆ

ಆರಂಭದಲ್ಲಿ ಮಹಾತ್ಮ ಗಾಂಧಿಯವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಸಭೆಯಲ್ಲೇ ಈ ಗೀತೆಯನ್ನು ಅಳವಡಿಸಿಕೊಳ್ಳಲಾಗಿತ್ತು. ಕಾಂಗ್ರೆಸ್ ನಾಯಕರ ಸಣ್ಣತನದಿಂದ ನಿಮ್ಮ ಬಗ್ಗೆ ಜನರಲ್ಲಿ ಏನು ಅಭಿಪ್ರಾಯ ಮೂಡುತ್ತಿದೆ? ಅದನ್ನು ಇನ್ನು ದೊಡ್ಡಮಟ್ಟದಲ್ಲಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಮೊನ್ನೆ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರö್ಯ ದಿನಾಚರಣೆ ವೇಳೆ ಸನ್ನೆ ಮಾಡಿ, ಬಳಿಕ ಖುರ್ಚಿ ಹಾಕಲು ಸನ್ನೆ ಮಾಡಿದ್ದರು ಎಂದು ಕಾರಣ ಕೊಡ್ತಾ ಇದ್ದಾರೆ. ಸತ್ಯಾಸತ್ಯತೆ ಜನ ನೋಡ್ತಾರೆ. ಸುಳ್ಳು ಹೇಳಿ ತಪ್ಪಿಸಿಕೊಳ್ಳೋದು ಅಷ್ಟು ಸುಲಭ ಅಲ್ಲ ಎಂದಿದ್ದಾರೆ.


Spread the love

About Laxminews 24x7

Check Also

ತುಮಕೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಅರೆಸ್ಟ್

Spread the loveತುಮಕೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊಡಿಗೇನಹಳ್ಳಿ ಪೊಲೀಸರು  ಬಂಧಿಸಿರುವ ಘಟನೆ ಮಧುಗಿರಿ ತಾಲೂಕಿನ ಕಸಿನಾಯಕನಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ