Breaking News

ಒಬ್ಬ ಅಮೆರಿಕ ಸೈನಿಕನ ಕೊಂದರೆ 28.63 ಲಕ್ಷ ಬಹುಮಾನ: ಇರಾನ್‌ ಘೋಷಣೆ

Spread the love

ಟೆಹ್ರಾನ್: ಅಮೆರಿಕದ ಒಬ್ಬ ಸೈನಿಕನನ್ನು ಕೊಂದರೆ 30,000 ಡಾಲರ್ (ಅಂದಾಜು 28.63 ಲಕ್ಷ ರೂ.) ಬಹುಮಾನ ನೀಡಲಾಗುವುದು. ಮಹಿಳೆಯರು ಈ ಕೆಲಸ ಮಾಡಿದರೆ ಡಬಲ್‌ ಬಹುಮಾನ ಕೊಡಲಾಗುವುದು ಎಂದು ಇರಾನ್‌ ಘೋಷಿಸಿದೆ.

ಸೈನಿಕರನ್ನು ಸೆರೆಹಿಡಿಯುವವರಿಗೂ 30,000 ಡಾಲರ್ ಬಹುಮಾನ ನೀಡುವುದಾಗಿ ಇರಾನ್ ಸೇನಾ ಮುಖ್ಯಸ್ಥ ಅಮೀರ್ ಹತಾಮಿ ಘೋಷಿಸಿದ್ದಾರೆ.

ಯಾರಾದರೂ ಆಕ್ರಮಣಕಾರಿ ಅಮೆರಿಕನ್ ಮಿಲಿಟರಿ ಸಿಬ್ಬಂದಿಯನ್ನು ಕೊಂದು ಅಥವಾ ಸೆರೆಹಿಡಿದು ಹಸ್ತಾಂತರಿಸಿದರೆ, ಅವರಿಗೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸೈನ್ಯದಿಂದ 30,000 ಡಾಲರ್ ಅಥವಾ 5 ಬಿಲಿಯನ್ ಟೋಮನ್‌ಗಳಿಗೆ ಸಮಾನವಾದ ಬಹುಮಾನ ಸಿಗುತ್ತದೆ ಎಂದು ಹಟಾಮಿ ತಿಳಿಸಿದ್ದಾರೆ. ಆದರೆ ಅಮೆರಿಕದ ಸೈನಿಕರ ಹತ್ಯೆ ಅಥವಾ ಸೆರೆಹಿಡಿಯುವಿಕೆ ಯಾವಾಗ ಅಥವಾ ಎಲ್ಲಿ ನಡೆಯುತ್ತದೆ ಎಂಬುದರ ವಿವರಗಳನ್ನು ನೀಡಿಲ್ಲ.

ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ ದೇಶದ ಒಬ್ಬ ವಾಯುಪಡೆಯ ಸಿಬ್ಬಂದಿ ಕೆಳಗೆ ಬಿದ್ದಿದ್ದನ್ನು ಹೊರತುಪಡಿಸಿ, ಅಮೆರಿಕದ ಪಡೆಗಳ ನಿಯೋಜನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಅಮೆರಿಕ ಸೈನಿಕರನ್ನು ಸದೆಬಡಿಯುವ ಧೈರ್ಯಶಾಲಿ ಇರಾನಿನ ಮಹಿಳೆಯರಿಗೆ ದುಪ್ಪಟ್ಟು ಬಹುಮಾನ ಸಿಗುತ್ತದೆ ಎಂದು ಬಹುಮಾನದ ಬಗ್ಗೆ ಮಾತನಾಡುತ್ತಾ ಹಟಾಮಿ ತಿಳಿಸಿದ್ದಾರೆ. ಅಮೆರಿಕದ ಸೈನಿಕನನ್ನು ಕೊಲ್ಲಲು ಬಳಸುವ ಆಯುಧವನ್ನು ದುಪ್ಪಟ್ಟು ಬೆಲೆಗೆ ಖರೀದಿಸಲಾಗುವುದು. ಆ ವ್ಯಕ್ತಿಗೆ ಹೊಸ ಆಯುಧವನ್ನು ನೀಡಲಾಗುವುದು. ವ್ಯಕ್ತಿಯ ಆಯುಧವನ್ನು ವಸ್ತುಸಂಗ್ರಹಾಲಯದಲ್ಲಿ ಇಡಲಾಗುವುದು ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ