Breaking News

ಕೊರೊನಾ ಅಟ್ಟಹಾಸಕ್ಕೆ ವಿಶ್ವಾದ್ಯಂತ 1.70 ಲಕ್ಷ ಜನ ಬಲಿ..!

Spread the love

ವಾಷ್ಟಿಂಗ್ಟನ್/ರೋಮ್/ಮ್ಯಾಡ್ರಿಡ್, ಏ.21- ವಿನಾಶಕಾರಿ ಕೊರೊನಾ ಇಡೀ ಲೋಕಕ್ಕೆ ಕಂಟಕವಾಗಿಯೇ ಮುಂದುವರಿದಿದ್ದು, ಈ ದುಷ್ಟಶಕ್ತಿಯ ಅಟ್ಟಹಾಸಕ್ಕೆ ಯಾವ ದೇಶವು ಲೆಕ್ಕಕ್ಕಿಲ್ಲದಂತಾಗಿದೆ. ಈ ಹೆಮ್ಮಾರಿಯ ದಾಳಿಗೆ 220ಕ್ಕೂ ಹೆಚ್ಚು ದೇಶಗಳು ಕಂಗೆಟ್ಟಿವೆ. ಜಗತ್ತಿನಾದ್ಯಂತ ವ್ಯಾಪಕ ಸಾವು ಮತ್ತು ಸೋಂಕು ಪ್ರಕರಣಗಳು ದಿನನಿತ್ಯದ ಸುದ್ದಿಯಾಗುತ್ತಿದೆ.

ಈವರೆಗೆ ಸುಮಾರು 1,70 ಲಕ್ಷ ಜನರನ್ನು ವೈರಸ್ ನುಂಗಿದೆ. ಅಲ್ಲದೆ, ಸೋಂಕಿರ ಸಂಖ್ಯೆ 25 ಲಕ್ಷ ದಾಟುತ್ತಿದೆ. ಅಮೆರಿಕದಲ್ಲಿ ಈಗಾಗಲೇ ಸುಮಾರು 43,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಕಿಲ್ಲರ್ ಕೊರೊನಾ ಯೂರೋಪ್ ಖಂಡದಲ್ಲಿಯೂ ರಣಕೇಕೆ ಮುಂದುವರಿಸಿವೆ.

ಯುರೋಪ್ ಖಂಡದ ಬಹುತೇಕ ಎಲ್ಲ ರಾಷ್ಟ್ರಗಳು ಕೋವಿಡ್-19 ಹಾವಳಿಯಿಂದ ಬಾಧಿತವಾಗಿದ್ದು, ಸುಮಾರು 69,000 ಮಂದಿ ಬಲಿಯಾಗಿದ್ದು, 13.50 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಇಟಲಿಯಲ್ಲಿ ಸತ್ತವರ ಸಂಖ್ಯೆ 24,000 ದಾಟಿರುವುದು ಆತಂಕದ ಸಂಗತಿಯಾಗಿದೆ.

ಯೂರೋಪ್ ಖಂಡದಲ್ಲಿ ಇಟಲಿ ನಂತರ ಸ್ಪೇನ್ ಸಾವು ಮತ್ತು ಸೋಂಕಿನಲ್ಲಿ ಎರಡನೆ ಸ್ಥಾನದಲ್ಲಿದೆ. ಅಲ್ಲಿ ಈವರೆಗೆ 23,500ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇಂಗ್ಲೆಂಡ್, ಜರ್ಮನಿ, ನೆದರ್ಲೆಂಡ್ ಮತ್ತಿತರ ದೇಶಗಳಲ್ಲಿಯೂ ಸಾವು ಮತ್ತು ಸೋಂಕಿ ಪ್ರಮಾಣ ಹೆಚ್ಚಾಗುತ್ತಿದೆ.

ವಿಶ್ವದ ಯಾವ ಖಂಡಗಳೂ ಕೊರೊನಾ ಕಬಂಧ ಬಾಹುಗಳಿಗೆ ಮುಕ್ತವಾಗಿಲ್ಲ. ಬಹುತೇಕ ದೇಶಗಳಲ್ಲಿಯೂ ಹೊಸ ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಲೇ ಇವೆ.


Spread the love

About Laxminews 24x7

Check Also

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಫ್ಯಾಷನ್‌ ಶೋ”

Spread the love    ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಇದೇ ಮೊದಲ ಬಾರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ