Breaking News

ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ರೆ ಸಿಂಗಾಪುರದಲ್ಲಿ 6 ತಿಂಗಳು ಜೈಲು

Spread the love

ಸಿಂಗಾಪುರ: ಕೊರೊನಾ ವೈರಸ್ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದರೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸಿಂಗಾಪುರ ಸರ್ಕಾರ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.

ಜನತೆ ಕಡ್ಡಾಯವಾಗಿ 1 ಮೀಟರ್(3.2 ಅಡಿ) ಅಂತರ ಕಾಯ್ದುಕೊಳ್ಳಬೇಕು. ಶಾಲೆ ಅಥವಾ ಕಂಪನಿಯಲ್ಲಿ 10ಕ್ಕಿಂತ ಹೆಚ್ಚು ಜನ ಸೇರಿದರೆ 10 ಸಾವಿರ ಸಿಂಗಾಪುರ ಡಾಲರ್(ಅಂದಾಜು 5.24 ಲಕ್ಷ ರೂ.) ದಂಡ ಅಥವಾ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಮನೆಯಲ್ಲೇ ಇರಿ ಎಂದು ಸೂಚನೆ ನೀಡಿದರೂ ಕೆಲವರು ಮನೆಯಿಂದ ಹೊರ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕಠಿಣ ನಿಯಮ ಜಾರಿ ಮಾಡಿದೆ. ಬುಧವಾರ ಒಂದೇ ದಿನ 73 ಹೊಸ ಕೊರೊನಾ ಪ್ರಕರಣಗಳು ದಾಖಲಾದ ಬೆನ್ನಲ್ಲೇ ಸರ್ಕಾರ ನಿಯಮಗಳನ್ನು ಬಿಗಿಗೊಳಿಸಿದೆ.

ಸಿಂಗಾಪುರದಲ್ಲಿ 732 ಕೊರೊನಾ ಪ್ರಕರಗಳು ಪತ್ತೆಯಾಗಿದ್ದು, 2 ಮಂದಿ ಮೃತಪಟ್ಟಿದ್ದಾರೆ. 547 ಮಂದಿ ಕೊರೊನಾದಿಂದ ಬಳಲುತ್ತಿದ್ದರೆ 183 ಮಂದಿ ಗುಣಮುಖರಾಗಿದ್ದಾರೆ.


Spread the love

About Laxminews 24x7

Check Also

ಸಿಎಂ ಸ್ಥಾನ ಖಾಲಿಯಿಲ್ಲ, ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದುವರೆಯುತ್ತಿದ್ದೇವೆ,

Spread the loveಚಾಮರಾಜನಗರ: “ಸಿಎಂ ಸ್ಥಾನ ಖಾಲಿಯಿಲ್ಲ, ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಐದು ವರ್ಷ ಮುಂದುವರಿಯುತ್ತೇವೆ” ಎಂದು ಅರಣ್ಯ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ