Breaking News
Home / Uncategorized / ಹುಬ್ಬಳ್ಳಿ: ಕೊವಿಡ್ ಬಳಿಕ ಮಕ್ಕಳನ್ನು ಕಾಡುತ್ತಿದೆ ನ್ಯುಮೋನಿಯಾ; ಒಂದೇ ವಾರದಲ್ಲಿ 7 ಮಕ್ಕಳು ಬಲಿ

ಹುಬ್ಬಳ್ಳಿ: ಕೊವಿಡ್ ಬಳಿಕ ಮಕ್ಕಳನ್ನು ಕಾಡುತ್ತಿದೆ ನ್ಯುಮೋನಿಯಾ; ಒಂದೇ ವಾರದಲ್ಲಿ 7 ಮಕ್ಕಳು ಬಲಿ

Spread the love

ಹುಬ್ಬಳ್ಳಿ: ಕೊವಿಡ್ ಬಳಿಕ ಮಕ್ಕಳನ್ನು ನ್ಯುಮೋನಿಯಾ ಕಾಡುತ್ತಿದ್ದು, ಒಂದೇ ವಾರದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 7 ಮಕ್ಕಳು ಸಾವನ್ನಪ್ಪಿದ್ದಾರೆ. ನ್ಯಮೋನಿಯಾದಿಂದ ಬಳಲುತ್ತಿರುವ 163 ಮಕ್ಕಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿಲಾಗುತ್ತಿದೆ.

ಸದ್ಯ ಕಿಮ್ಸ್‌ನ ಮಕ್ಕಳ ವಿಭಾಗದ ಬೆಡ್‌ಗಳು ಸಂಪೂರ್ಣ ಭರ್ತಿಯಾಗಿದ್ದು, 1 ವರ್ಷದ 95 ಮಕ್ಕಳಿಗೆ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 23 ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಸಿರಾಟದ ತೊಂದರೆಯಿಂದ ಚಿಕ್ಕಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಕೆಮ್ಮು, ನೆಗಡಿ, ಕಫ ಮತ್ತು ಜ್ವರ ಬಂದರೆ ನಿಷ್ಕಾಳಜಿ ತೋರದಂತೆ ವೈದ್ಯರು ಸೂಚನೆ ನೀಡಿದ್ದಾರೆ.


Spread the love

About Laxminews 24x7

Check Also

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Spread the love ಹೊಸದಿಲ್ಲಿ: ಮತದಾನ ಮಾಡಲು ಅರ್ಹರಾಗಿದ್ದೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ ದಾನ ಮಾಡದೇ ಹೋದರೆ ಅಂಥವರ ಬ್ಯಾಂಕ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ