Breaking News

ಯತೀಂದ್ರಗೆ ಆರೋಗ್ಯ ಇಲಾಖೆ? – ವಕ್ಫ್ ಖಾತೆಗೆ ಖಾದರ್‌ ಬೇಡಿಕೆ

Spread the love

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಸಚಿವರ ಖಾತೆ ಹಂಚಿಕೆಗೆ ತೀವ್ರ ಕುತೂಹಲ ಮೂಡಿದ್ದು, ಕಡೆಗಳಿಗೆಯಲ್ಲಿ ಪ್ರಮುಖ ಖಾತೆಗಳಿಗಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಸಚಿವ ಯು.ಟಿ. ಖಾದರ್ ಅವರ ಬಳಿ ಇರುವ ಆರೋಗ್ಯ ಇಲಾಖೆಯನ್ನು ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ವಹಿಸುವ ಸಾಧ್ಯತೆಗಳಿವೆ. ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯನ್ನು ತಮಗೆ ನೀಡಿದರೆ, ಆರೋಗ್ಯ ಇಲಾಖೆಯನ್ನು ಬಿಟ್ಟುಕೊಡಲು ಯು.ಟಿ. ಖಾದರ್ ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಈಗ ಜಮೀರ್ ಅಹಮದ್ ಖಾನ್ ಅವರಿಗೆ ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಖಾತೆ ಹಂಚಿಕೆಯಾಗಿದೆ. ಯು.ಟಿ. ಖಾದರ್ ಅವರ ಬೇಡಿಕೆಗೆ ಸ್ಪಂದಿಸಿದರೆ ಜಮೀರ್‌ ಅಹಮದ್‌ ವಸತಿ ಖಾತೆಯನ್ನು ಮಾತ್ರ ನೋಡಿಕೊಳ್ಳಬೇಕಾಗುತ್ತದೆ.
ಈ ಕಾರಣಕ್ಕೆ ಡಿಕೆಶಿ ಸಂಪುಟದಲ್ಲಿ ಕಡೆಗಳಿಗೆಯಲ್ಲಿ ಯು.ಟಿ. ಖಾದರ್, ಯತೀಂದ್ರ, ಜಮೀರ್‌ ಮಧ್ಯೆ ಆರೋಗ್ಯ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.

ಸಚಿವರ ಖಾತೆ ಹಂಚಿಕೆ ಈಗಾಗಲೇ ಅಂತಿಮಗೊಂಡಿದ್ದರೂ, ಎಲ್ಲಾ ಇಲಾಖೆಗಳ ಅಧಿಕೃತ ಮಾಹಿತಿ ಲಭ್ಯವಾದ ನಂತರವೇ ಅಂತಿಮ ಪಟ್ಟಿಯನ್ನು ಲೋಕಭವನಕ್ಕೆ ರವಾನಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ.


Spread the love

About Laxminews 24x7

Check Also

ಬರಪೀಡಿತ ಎಂದು ಘೋಷಿಸದ್ದಕ್ಕೆ ರಾಜೀನಾಮೆ ಸಲ್ಲಿಸಿದೆ – ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ: ಯಶವಂತರಾಯಗೌಡ

Spread the loveವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ