Breaking News

ನೀವೆಲ್ಲ ಗಲಾಟೆ ಮಾಡೋಕೆ ಬಂದಿದ್ದೀರಾ? – ಶ್ರೇಯಸ್‌ ಪಟೇಲ್ ಬೆಂಬಲಿಗರ ಮೇಲೆ ಶಿವಲಿಂಗೇಗೌಡ ಗರಂ

Spread the love

ಹಾಸನ: ಸಂಸದ ಶ್ರೇಯಸ್‌ ಪಟೇಲ್‌ ಅವರ ಬೆಂಬಲಿಗರು ಕಾಂಗ್ರೆಸ್‌ನ  ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಗಲಾಟೆ ಮಾಡಿದ್ದಕ್ಕೆ ಸಚಿವ ಶಿವಲಿಂಗೇಗೌಡ  ಅವರು ಗರಂ ಆಗಿದ್ದಾರೆ. ನೀವೆಲ್ಲ ಇಲ್ಲಿಗೆ ಗಲಾಟೆ ಮಾಡಲು ಬಂದಿದ್ದೀರಾ? ನಾನು ಇಂತಹದ್ದನ್ನು ತುಂಬಾ ನೋಡಿದ್ದೀನಿ ಸುಮ್ಮನೆ ಕುಳಿತುಕೊಳ್ಳಿ ಎಂದು ಸಿಟ್ಟನ್ನು ಹೊರಹಾಕಿದ್ದಾರೆ.

ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ನೂತನ ಜಿಲ್ಲಾಧ್ಯಕ್ಷ ಜಿ.ಬಿ.ಶಶಿಧರ್ ಅವರ ಪ್ರದಗ್ರಹಣ ಸಮಾರಂಭದಲ್ಲಿ ಈ ಜಟಾಪಟಿ ನಡೆದಿದೆ. ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್‌ ಪಟೇಲ್ ಹೆಸರನ್ನು ಹೇಳದಿರುವುದಕ್ಕೆ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಶ್ರೇಯಸ್‌ಪಟೇಲ್ ಕಾರ್ಯಕ್ರಮಕ್ಕೆ ಬರುವವರೆಗೂ ಉದ್ಘಾಟನೆ ಮಾಡದಂತೆ ಪಟ್ಟು ಹಿಡಿದ ಕಾರ್ಯಕರ್ತರು ಕಾರ್ಯಕ್ರಮ ಉದ್ಘಾಟನೆಗೆ ಅಡ್ಡಿಪಡಿಸಿದ್ದಾರೆ.

ಸಂಸದರ ಬೆಂಬಲಿಗರನ್ನು ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ಸಮಾಧಪಡಿಸಲು ಯತ್ನಿಸಿದರು. ನೀವೆಲ್ಲಾ ಗಲಾಟೆ ಮಾಡಲು ಬಂದಿದ್ದೀರಾ, ನಾನು ಇಂತಹದ್ದನ್ನೆಲ್ಲಾ ತುಂಬಾ ನೋಡಿದ್ದೀನಿ ಸುಮ್ಮನೆ ಕುಳಿತುಕೊಳ್ಳಿ, ನೀವೇ ಹೋಗಿ ಶ್ರೇಯಸ್‌ ಪಟೇಲ್ ಅವರನ್ನು ಕರೆದು ತನ್ನಿ. ಆಮೇಲೆ ಕಾರ್ಯಕ್ರಮ ಉದ್ಘಾಟನೆ ಮಾಡೋಣ ಎಂದು ಹೇಳಿ ಕುಳಿತರು.

ಕಾರ್ಯಕರ್ತರ ಅಸಮಾಧಾನ ಸ್ಪೋಟದ ನಡುವೆ ಸಚಿವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕವೂ ಗಲಾಟೆ ಜೋರಾದ್ದರಿಂದ ಕೆಲಕಾಲ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿತ್ತು.


Spread the love

About Laxminews 24x7

Check Also

ಕಸ ವಿಂಗಡನೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು – ತುಂಡು ತುಂಡಾದ ದೇಹ

Spread the loveಚಿಕ್ಕಬಳ್ಳಾಪುರ: ಕಸ ವಿಂಗಡನೆ ಯಂತ್ರಕ್ಕೆ  ಸಿಲುಕಿ ಮಹಿಳೆ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದ ಎಂಎಸ್‌ಜಿಪಿ ಘಟಕದಲ್ಲಿ ನಡೆದಿದೆ. ಕಾಡತಿಪ್ಪೂರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ