ಹಾಸನ ; ಲಾಕ್ ಡೌನ್ ಸಂಬಂಧ ಸರಕಾರ ಹಾಗೂ ಪೊಲೀಸ್ ಇಲಾಖೆ ಎಷ್ಟೇ ಕಠಿಣ ಕ್ರಮ ಕೈಗೊಂಡರು ಪುಂಡ ಯುವಕರು ಪ್ರತಿದಿನ ರಸ್ತೆಗಿಳಿಯುವುದು ಸಾಮಾನ್ಯವಾಗಿದೆ. ಇವರಿಗೆ ಇಂದು ವಿಶೇಷ ರೀತಿಯಲ್ಲಿ ಹಾಸನ ನಗರದ ಪೊಲೀಸರು ಶಿಕ್ಷೆ ವಿಧಿಸಿದರು.
ನಗರದ ಡೈರಿ ವೃತ್ತದಲ್ಲಿ ಯಾವುದೇ ಪಾಸ್ ಹಾಗೂ ಅನುಮತಿ ಇಲ್ಲದೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಯುವ ಸವಾರರಿಗೆ ಬಸ್ಕಿ ಹೊಡೆಸಿದ ಪೊಲೀಸರು ದಂಡ ವಿಧಿಸಿ ವಾಹನ ವಶಕ್ಕೆ ಪಡೆದು ಮನೆಗೆ ಕಳುಹಿಸಿದ್ದಾರೆ.
ಹಾಸನ ನಗರದ ಬಹುತೇಕ ಕಡೆ ಬ್ಯಾರಿಕೆಡ್ ನಿರ್ಮಾಣ ಮಾಡಿದ್ದು ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನ ಸವಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ .
ಆದರೂ ಸಹ ಬಹುತೇಕ ಮಂದಿ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಗೆ ಇಳಿಯುತ್ತಿದ್ದು ಇದರಿಂದ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ.