Home / ಜಿಲ್ಲೆ / – ತಾಳ್ಮೆಯಿಲ್ಲದೆ ಆವೇಶ ಭರಿತರಾಗಿ ಮಾತನಾಡಿದ್ದರಿಂದಾಗಿ ಡಿವೈಎಸ್‍ಪಿ ಗಣಪತಿ ಪ್ರಕರಣವನ್ನು ಮೈ ಮೇಲೆ ಎಳೆದುಕೊಂಡರುಜಾರ್ಜ್:.

– ತಾಳ್ಮೆಯಿಲ್ಲದೆ ಆವೇಶ ಭರಿತರಾಗಿ ಮಾತನಾಡಿದ್ದರಿಂದಾಗಿ ಡಿವೈಎಸ್‍ಪಿ ಗಣಪತಿ ಪ್ರಕರಣವನ್ನು ಮೈ ಮೇಲೆ ಎಳೆದುಕೊಂಡರುಜಾರ್ಜ್:.

Spread the love

ಬೆಂಗಳೂರು, ಫೆ.19- ತಾಳ್ಮೆಯಿಲ್ಲದೆ ಆವೇಶ ಭರಿತರಾಗಿ ಮಾತನಾಡಿದ್ದರಿಂದಾಗಿಯೇ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರು ಐಎಎಸ್ ಅಧಿಕಾರಿ ಡಿ.ಕೆ.ರವಿ ಮತ್ತು ಡಿವೈಎಸ್‍ಪಿ ಗಣಪತಿ ಪ್ರಕರಣವನ್ನು ಮೈ ಮೇಲೆ ಎಳೆದುಕೊಂಡರು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನಸಭೆಯಲ್ಲಿಂದು ಮಂಗಳೂರು ಗಲಭೆ ಪ್ರಕರಣದ ಕುರಿತು ಚರ್ಚೆ ನಡೆಯುತ್ತಿದ್ದಾಗ ಸಚಿವ ಸುರೇಶ್‍ಕುಮಾರ್ ಪೊಲೀಸರ ನೈತಿಕತೆ ಕುಗ್ಗಿಸುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.

ಆಗ ಮಧ್ಯ ಪ್ರವೇಶಿಸಿದ ಕೆ.ಜೆ.ಜಾರ್ಜ್ ಅವರು, ಬಿಜೆಪಿ ಆಡಳಿತ ವಿದ್ದಾಗ ಒಂದು ರೀತಿ ವಿರೋಧ ಪಕ್ಷದಲ್ಲಿದ್ದಾಗ ಮತ್ತೊಂದು ರೀತಿಯ ನಿಲುವುಗಳನ್ನು ಅನುಸರಿಸುತ್ತದೆ. ಡಿ.ಕೆ.ರವಿ ಮತ್ತು ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ಪೊಲೀಸರು ತನಿಖೆ ನಡೆಸಿ ನೀಡಿದ್ದ ವರದಿಯನ್ನು ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಒಪ್ಪಿಕೊಂಡಿರಲಿಲ್ಲ. ಕೊನೆಗೆ ಸಿಬಿಐ ತನಿಖೆಯಲ್ಲೂ ಸಿಐಡಿ ತನಿಖೆಯಲ್ಲಿ ಹೇಳಿದ್ದ ಅಂಶಗಳೇ ಸಾಬೀತಾಗಿವೆ.

ವಿರೋಧ ಪಕ್ಷದಲ್ಲಿದ್ದಾಗ ಪೊಲೀಸರನ್ನು ಒಪ್ಪಿಕೊಳ್ಳದ ಬಿಜೆಪಿ, ಆಡಳಿತ ಪಕ್ಷದಲ್ಲಿದ್ದಾಗ ವಿಭಿನ್ನ ನಿಲುವು ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಅದಕ್ಕೆ ಸ್ಪಷ್ಟನೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ನಾವೀಗ ಸಿಐಡಿ ತನಿಖೆಯನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳುತ್ತಿದ್ದಂತೆ ಎದ್ದು ನಿಂತ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಒಪ್ಪಿಕೊಳ್ಳಲೇಬೇಕು ಬೇರೆ ಗತಿ ಇಲ್ಲ ಎಂದು ತಿರುಗೇಟು ನೀಡಿದರು.

ಆಗ ಬಿಜೆಪಿಯವರು ಗಲಾಟೆ ಮಾಡಿದ್ದರಿಂದ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕಾಯಿತು. ಈಗ ಮಂಗಳೂರು ಗಲಾಟೆ ಪ್ರಕರಣದ ಹೊಣೆ ಯಾರು ಹೊತ್ತಿಕೊಳ್ಳುತ್ತಾರೆ. ಅದರ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ದಿನೇಶ್‍ಗುಂಡೂರಾವ್ ಹೇಳಿದರು.

ಜಾರ್ಜ್ ಅವರು ತಾಳ್ಮೆಯಿಂದ ವರ್ತಿಸಬೇಕು. ಆವೇಶ ಭರಿತರಾಗಿ ಮಾತನಾಡಿದ್ದರಿಂದ ಅವರಿಗೆ ಪ್ರಕರಣಗಳು ಬೆನ್ನತ್ತಿದವು ಎಂದರು. ಮಂಗಳೂರಿನಲ್ಲಿ ಪೊಲೀಸರು ಬೇರೆಯವರ ಆದೇಶದ ಅನುಸಾರ ಕೆಲಸ ಮಾಡುತ್ತಾರೆ ಎಂದು ನಿರಾಧಾರವಾಗಿ ಮಾತನಾಡಬಾರದು ಎಂದು ಬೊಮ್ಮಾಯಿ ಸಲಹೆ ಮಾಡಿದರು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ