Breaking News

ಆಟೋ ಚಾಲಕರಿಗೆ ಸಿಹಿ ಸುದ್ದಿ: ಎಲ್‌ಪಿಜಿ ದರ ಬರೋಬ್ಬರಿ 10 ರೂ. ಇಳಿಕೆ

Spread the love

ಬೆಂಗಳೂರು: ನಿರಂತರ ಎಲ್‌ಪಿಜಿ (LPG) ದರ ಏರಿಕೆಯಿಂದ ಕಂಗಾಲಾಗಿದ್ದ ಆಟೋ ಚಾಲಕರಿಗೆ ಕೊನೆಗೂ ದೊಡ್ಡ ನಿರಾಳ ಸಿಕ್ಕಿದೆ. ಪ್ರಮುಖ ಇಂಧನ ವಿತರಕ ಸಂಸ್ಥೆಯಾದ ಟೋಟಲ್ ಗ್ಯಾಸ್ತನ್ನ ಬಂಕ್‌ಗಳಲ್ಲಿ ಆಟೋ ಎಲ್‌ಪಿಜಿ ದರವನ್ನು (Auto LPG Price) ಪ್ರತಿ ಲೀಟರ್‌ಗೆ ಭರ್ಜರಿ 10 ರೂಪಾಯಿಗಳಷ್ಟು ಕಡಿತಗೊಳಿಸಿದೆ.

ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಅಮೆರಿಕ, ಇಸ್ರೇಲ್‌ ಮತ್ತು ಇರಾನ್‌ ನಡುವಿನ ಭೀಕರ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಪೂರೈಕೆ ಏರುಪೇರಾಗಿತ್ತು. ಇದರ ನೇರ ಪರಿಣಾಮವಾಗಿ ಆಟೋ ಎಲ್‌ಪಿಜಿ ದರವು ಸಾರ್ವಕಾಲಿಕ ದಾಖಲೆಯ ಬರೋಬ್ಬರಿ 100 ರೂಪಾಯಿಗಳ ಗಡಿಯನ್ನು ದಾಟಿತ್ತು. ಇದು ದೈನಂದಿನ ಜೀವನಕ್ಕಾಗಿ ಆಟೋ ಬಾಡಿಗೆಯನ್ನೇ ನಂಬಿಕೊಂಡಿದ್ದ ಲಕ್ಷಾಂತರ ಚಾಲಕರ ಜೇಬಿಗೆ ಕತ್ತರಿ ಹಾಕಿತ್ತು.

ಈಗ ಜಾಗತಿಕ ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ ಇತ್ತೀಚೆಗಷ್ಟೇ ಹಂತ-ಹಂತವಾಗಿ 95 ರೂಪಾಯಿಗಳಿಗೆ ಇಳಿಕೆಯಾಗಿದ್ದ ದರ ಇದೀಗ ಮತ್ತೊಂದು ದೊಡ್ಡ ಕುಸಿತ ಕಂಡಿದೆ. ಪ್ರಸ್ತುತ 95 ರೂಪಾಯಿಗಳಿಂದ ನೇರವಾಗಿ 85 ರೂಪಾಯಿಗಳಿಗೆ ಇಳಿಕೆ (ಸಾಗಣೆ ವೆಚ್ಚಗಳಿಂದ ಈ ದರ ನಗರದಿಂದ ನಗರಕ್ಕೆ ಬದಲಾಗುತ್ತದೆ) ಮಾಡಲಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ಸರಬರಾಜು ಮತ್ತು ಪೂರೈಕೆ ವ್ಯವಸ್ಥೆ ಸುಧಾರಿಸಿರುವುದು ಹಾಗೂ ಮಾರುಕಟ್ಟೆಯಲ್ಲಿ ಇಂಧನದ ಲಭ್ಯತೆ ಹೆಚ್ಚಾಗಿರುವುದೇ ಈ ಬೆಲೆ ಇಳಿಕೆಗೆ ಮುಖ್ಯ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.

ಆಟೋ ಚಾಲಕರಲ್ಲಿ ಸಂತಸ:
ದಿನಕ್ಕೆ ದುಡಿಯುವ ಹಣದಲ್ಲಿ ಅರ್ಧಕ್ಕರ್ಧ ಗ್ಯಾಸ್‌ಗೆ ಖರ್ಚಾಗುತ್ತಿತ್ತು. ಬಾಡಿಗೆ ದರ ಹೆಚ್ಚಿಸಿದರೆ ಗ್ರಾಹಕರು ಬರುತ್ತಿರಲಿಲ್ಲ. ಈಗ ಲೀಟರ್‌ಗೆ 10 ರೂಪಾಯಿ ಕಡಿಮೆಯಾಗಿರುವುದು ದೊಡ್ಡ ರಿಲೀಫ್‌ ಸಿಕ್ಕಿದೆ. ಎಂದು ಆಟೋ ಚಾಲಕರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬೆಲೆ ಇಳಿಕೆಯಿಂದಾಗಿ ಸಾರ್ವಜನಿಕ ಸಾರಿಗೆಯ ಮೇಲಿನ ದರಗಳ ಒತ್ತಡವೂ ಕೊಂಚ ಕಡಿಮೆಯಾಗುವ ನಿರೀಕ್ಷೆಯಿದೆ


Spread the love

About Laxminews 24x7

Check Also

ಬಿಡದಿ ಟೌನ್‌ಶಿಪ್, ನೈಸ್ ವಿರುದ್ಧ ದಳಪತಿ ಕಹಳೆ – ಸರ್ಕಾರದ ವಿರುದ್ಧ ಜೆಡಿಎಸ್ ನಾಯಕರು ಕೆಂಡ

Spread the loveಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ, ನೈಸ್ ರೋಡ್ ಟೋಲ್ ವಿರೋಧಿಸಿ ಫ್ರೀಡಂಪಾರ್ಕ್‌ನಲ್ಲಿ  ಇಂದು (ಆ.18) ಜೆಡಿಎಸ್  ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ