Breaking News

ಸವುಳು- ಜವಳಿಗೆ: ಪ್ಯಾಕೇಜ್‌ ನೀಡಿ

Spread the love

ಅಥಣಿ: ಒಂದು ಕಾಲದಲ್ಲಿ ಫಲವತ್ತಾದ ಭೂಮಿಯಾಗಿದ್ದ ಅಥಣಿ ತಾಲ್ಲೂಕು ಈಗ ಸವುಳು- ಜವಳ ಮಣ್ಣಾಗಿದೆ. ಕೆಲವೆಡೆ ದ್ರಾಕ್ಷಿಯ ಹೊರತಾಗಿ ಮತ್ಯಾವ ಬೆಳೆಯನ್ನೂ ಬೆಳೆಯಲು ಈ ಮಣ್ಣು ಯೋಗ್ಯವಾಗಿಲ್ಲ.

ಇಂಥ ಮಣ್ಣಿಗೆ ಮತ್ತೆ ಮರುಜೀವ ನೀಡುವ ಯೋಜನೆ ರಾಜ್ಯ ಸರ್ಕಾರದಲ್ಲಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಕಾರ್ಯಗತವಾಗಿಲ್ಲ. ಅಥಣಿ ತಾಲ್ಲೂಕನ್ನು ಈ ಬಾರಿಯ ಬಜೆಟ್‌ನಲ್ಲಿ ವಿಶೇಷವಾಗಿ ಪರಿಗಣಿಸಬೇಕು ಎಂಬುದು ಜನರ ಆಗ್ರಹ. ಸವುಳು-ಜವುಳು ಜಮೀನಿಗೆ ಹಿಪ್ಪರಗಿ ಅಣೆಕಟ್ಟೆ ಕಾರಣವೆಂದು ಕೆಲ ರೈತರು ಹೇಳುತ್ತಾರೆ. ನಂದೇಶ್ವರದ ಬೆಂಚಿ ಹೊಲಗಳಿಂದ ಜನವಾಡದ ಕಡೆಗೆ ನೀರು ಹರಿದು ಹೋಗಲು ತೋಡಿರುವ ತಗ್ಗು ಕೆಲ ವರ್ಷಗಳಿಂದ ಹೂಳು ಹುಲ್ಲು-ಕಡ್ಡಿಗಳಿಂದ ತುಂಬಿದೆ.

ಕಾಲುವೆ ಸ್ವಚ್ಛಗೊಳಿಸಿದರೆ ಮಾತ್ರ ಹೊಲಗಳಲ್ಲಿ ಸಂಗ್ರಹವಾಗಿರುವ ನೀರು ಹೊರಗೆ ಹೋಗುತ್ತದೆ ಎನ್ನುತ್ತಾರೆ ರೈತರು. ಅಂದಾಜು 20 ಸಾವಿರ ಹೆಕ್ಟೇರ್‌ ಈ ರೀತಿಯ ಸಮಸ್ಯೆ ಎದುರಿಸುತ್ತಿದೆ. ಕೆಲ ರೈತರೆ ಒಂದುಗೂಡಿ ಸ್ವಂತ ಖರ್ಚಿನಿಂದ ಸವುಳು- ಜವಳು ಜಮೀನಿನಲ್ಲಿನ ನೀರು ಹೊರಹಾಕಲು ಪೈಪ್‌ಲೈನ್ ಅಳವಡಿಸಿಕೊಂಡಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಇದು ಸಾಧ್ಯವಿಲ್ಲ. ಅವರಿಗಾಗಿ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ ನೀಡಬೇಕು ಎಂಬುದು ಮುಖಂಡ ರಮೇಶಗೌಡ ಪಾಟೀಲ ಆಗ್ರಹ

 


Spread the love

About Laxminews 24x7

Check Also

ತಾಳ್ಮೆಯಿಂದ ಪರೀಕ್ಷೆ ಎದುರಿಸಬೇಕು

Spread the loveಅಥಣಿ: ಸತತ ಪರಿಶ್ರಮದೊಂದಿಗೆ ತಾಳ್ಮೆಯಿಂದ ಪರೀಕ್ಷೆ ಎದುರಿಸಬೇಕು ಎಂದು ಸ್ಥಳೀಯ ಕೆಎಲ್‌ಇ ಸಂಸ್ಥೆಯ ಸಿ.ಎಸ್.ಕಿತ್ತೂರ ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್.ಜಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ