ಬಾಗಲಕೋಟೆ: ನಗರದ ಬಿ.ವಿ.ವಿ. ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಜು. 21ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾಲೇಜಿನ ಸಭಾಭವನದಲ್ಲಿ ಬೆಳಿಗ್ಗೆ 10ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ವಿಜಯ ಕರ್ನಾಟಕ ದಿನಪತ್ರಿಕೆಯ ಹುಬ್ಬಳ್ಳಿಯ ಕಚೇರಿಯ ಸ್ಥಾನಿಕ ಸಂಪಾದಕರಾದ ಬಂಡು ಕುಲಕರ್ಣಿ ಉದ್ಘಾಟಿಸಿ ಕೃತಕ ಬುದ್ಧಿಮತ್ತೆ ಮತ್ತು ಭವಿಷ್ಯದ ಪತ್ರಿಕೋದ್ಯಮ ವಿಷಯದ ಕುರಿತು ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಾಗಲಕೋಟೆಯ ಹಿರಿಯ ಪತ್ರಕರ್ತರಾದ ಸುಶೀಲೇಂದ್ರ ಕುಂದರಗಿ ಪತ್ರಿಕೋದ್ಯಮದಲ್ಲಿ ವ್ಯಾಕರಣದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಭಾವಿ ಅಧ್ಯಕ್ಷತೆ ವಹಿಸುವರು, ಪ್ರಾಚಾರ್ಯರಾದ ಎಸ್.ಆರ್.ಮೂಗನೂರಮಠ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಇದೆ ಸಂದರ್ಭದಲ್ಲಿ
ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರಬಂಧ ಬರವಣಿಗೆ, ಸುದ್ದಿ ಬರವಣಿಗೆ, ಆಶುಭಾಷಣ, ಪೀಸ್ ಟು ಕ್ಯಾಮೆರಾ, ಛಾಯಾಗ್ರಹಣ ಹಾಗೂ ಕೋಲ್ಯಾಜ್ ಸೇರಿದಂತೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಇರಲಿದೆ ಎಂದು ಐಕ್ಯೂಎಸಿ ಸಂಯೋಜಕರಾದ ಡಾ. ಎ.ಯು. ರಾಠೋಡ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಐ.ಬಿ. ಚಿಕ್ಕಮಠ, ಕಾರ್ಯಕ್ರಮದ ಸಂಯೋಜಕರಾದ ಮಹಾಂತೇಶ ದೊಡವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Laxmi News 24×7