Breaking News

ಬಿಜೆಪಿ ನಾಯಕರ ಮೇಲೆ FIR; ಡಿಜಿ-ಐಜಿಪಿ ಭೇಟಿಯಾದ ಬಿಎಸ್‌ವೈ, ಬಿವೈವಿ, ಅಶೋಕ್ ನಿಯೋಗ

Spread the love

ಬೆಂಗಳೂರು: ಫಾರ್ಮ್-7 ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ಮುಂದುವರಿದಿದೆ. ರಾಜ್ಯಾದ್ಯಂತ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆ ಡಿಜಿ-ಐಜಿಪಿಯನ್ನು ಬಿಜೆಪಿ ನಿಯೋಗ  ಭೇಟಿಯಾಗಿದೆ.

ಕಾಂಗ್ರೆಸ್ ಕಾರ್ಯಕರ್ತರ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಡಿಜಿ-ಐಜಿಪಿ ಸಲೀಂ ಅವರನ್ನು ಭೇಟಿ ಬಿಜೆಪಿ ನಿಯೋಗ ಭೇಟಿಯಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ.ಮೋಹನ್, ಶಾಸಕರಾದ ಅಶ್ವಥ್ ನಾರಾಯಣ, ಎಸ್.ಆರ್.ವಿಶ್ವನಾಥ್, ಎಸ್.ರಘು, ಬೈರತಿ ಬಸವರಾಜು ಇತರರು ಡಿಜಿ-ಐಜಿಪಿ ಕಚೇರಿಗೆ ತೆರಳಿ ಕೇಸ್‌ಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಮನವಿ ಮಾಡಿದೆ.

ಅನಾವಶ್ಯಕವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ದೂರು ದಾಖಲು ಸರಿಯಲ್ಲ. ಕೂಡಲೇ ಪೊಲೀಸ್ ಇಲಾಖೆಗೆ ಸೂಚನೆ ನೀಡುವಂತೆ ಬಿಜೆಪಿ ನಾಯಕರು ಮನವಿ ಸಲ್ಲಿಸಿದ್ದಾರೆ.

ಫಾರ್ಮ್-7 ಆರೋಪ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರ ಮೇಲೆ ಕೇಸ್‌ಗಳು ದಾಖಲಾಗಿವೆ. ಕೇಸ್‌ಗಳನ್ನು ವಾಪಸ್ ಪಡೆದು, ಎಫ್‌ಐಆರ್ ರದ್ದು ಮಾಡಲು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಡಿಜಿಪಿ ಭೇಟಿ ಬಳಿಕ ವಿಜಯೇಂದ್ರ ಮಾತನಾಡಿ, ಸಿಎಂ, ಸಚಿವರು ಚುನಾವಣಾ ಆಯೋಗದ ಮುಂದೆ ಧರಣಿ ಮಾಡಿದ್ರು. ನಂತರ ಪೊಲೀಸರ ಮೇಲೆ ಒತ್ತಡ ತಂದು ಫಾರ್ಮ್-7 ಹಾಕಿದ ನಮ್ಮ ಕಾರ್ಯಕರ್ತರ ಮೇಲೆ ಎಫ್‌ಐಆರ್ ಹಾಕಿದ್ದಾರೆ. ಎಫ್‌ಐಆರ್‌ನಲ್ಲಿ ಫಾರ್ಮ್-7 ಹಾಕೋದು ಚುನಾವಣಾ ಆಯೋಗ ನಮಗೆ ಕೊಟ್ಟ ಹಕ್ಕು. ಯಾರೇ ಆಗಲಿ ಫಾರ್ಮ್-7 ಮೂಲಕ ಅನರ್ಹರ ವಿರುದ್ಧ ಅರ್ಜಿ ಕೊಡಬಹುದು. ಅರ್ಜಿ ಸರಿ ಇದ್ರೆ ಒಪ್ಕೋತಾರೆ, ಇಲ್ಲಾಂದ್ರೆ ತಿರಸ್ಕರಿಸ್ತಾರೆ. ಆದ್ರೆ ಸರ್ಕಾರ ಬಿಎನ್‌ಎಸ್ ಕಾಯ್ದೆ ದುರುಪಯೋಗ ಪಡಿಸಿಕೊಂಡು ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಿದೆ. ನಾವು ಸುಮ್ನೆ ಇರಲ್ಲ, ಹೋರಾಟ ಮಾಡ್ತೇವೆ. ನಮ್ಮ ಕಾರ್ಯಕರ್ತರ ರಕ್ಷಣೆಗೆ ಯಾವ ಹಂತಕ್ಕೂ ಬೇಕಾದರೂ ಹೋಗ್ತೇವೆ. ಪೊಲೀಸ್ ಠಾಣೆಗಳ ಮೇಲೆ ಮುತ್ತಿಗೆ ಹಾಕ್ತೇವೆ. ಕೇಸ್‌ಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಆರ್.ಅಶೋಕ್ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಬಂಧಿಸಿದರೆ ನಾವು ಸುಮ್ನಿರಲ್ಲ. ಫಾರ್ಮ್-7 ವಿಚಾರಕ್ಕೂ ಬಿಎನ್‌ಎಸ್ ಕಾಯ್ದೆಗೂ ಸಂಬಂಧ ಇಲ್ಲ. ಬಂಧಿಸಿದರೆ ಬೀದಿಗಿಳಿದು ಪ್ರತಿಭಟನೆ ಮಾಡ್ತೇವೆ. ಸ್ಟೇಷನ್ ಮುತ್ತಿಗೆ ಹಾಕ್ತೇವೆ. 25 ಲಕ್ಷ ಬಾಂಗ್ಲಾ ಅಕ್ರಮ ನಿವಾಸಿಗಳನ್ನು ವೋಟರ್ ಲಿಸ್ಟ್‌ನಲ್ಲಿ ಸೇರಿಸಲು ಸಂಚು ನಡೀತಿದೆ. ಇದಕ್ಕೆ ನಾವು ಅವಕಾಶ ಕೊಡಲ್ಲ. ಕಾನೂನು ಕೈಗೆ ತಗೋಬೇಡಿ ಎಂದು ಎಚ್ಚರಿಸಿದರು.


Spread the love

About Laxminews 24x7

Check Also

ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ

Spread the loveಬೆಂಗಳೂರು: ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ. ಕೊನೆಯ ರೈಲು ಹೊರಡುವ ಸಮಯ ವಿಸ್ತರಣೆಯಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ