Home / ಜಿಲ್ಲೆ / ಡಿಎಲ್/ಎಲ್‍ಎಲ್ ಪರೀಕ್ಷೆಗೆ ಕಾಯುತ್ತಿರುವ ಮಂದಿಗೆ ಗುಡ್‍ನ್ಯೂಸ್. ಮೇ 7ರ ಗುರುವಾರದಿಂದ ಹಸಿರು ವಲಯದಲ್ಲಿ ಈ ಪರೀಕ್ಷೆಗಳು ಆರಂಭ

ಡಿಎಲ್/ಎಲ್‍ಎಲ್ ಪರೀಕ್ಷೆಗೆ ಕಾಯುತ್ತಿರುವ ಮಂದಿಗೆ ಗುಡ್‍ನ್ಯೂಸ್. ಮೇ 7ರ ಗುರುವಾರದಿಂದ ಹಸಿರು ವಲಯದಲ್ಲಿ ಈ ಪರೀಕ್ಷೆಗಳು ಆರಂಭ

Spread the love

ಬೆಂಗಳೂರು: ಡಿಎಲ್/ಎಲ್‍ಎಲ್ ಪರೀಕ್ಷೆಗೆ ಕಾಯುತ್ತಿರುವ ಮಂದಿಗೆ ಗುಡ್‍ನ್ಯೂಸ್. ಮೇ 7ರ ಗುರುವಾರದಿಂದ ಹಸಿರು ವಲಯದಲ್ಲಿ ಈ ಪರೀಕ್ಷೆಗಳು ಆರಂಭವಾಗಲಿದೆ.

ಡಿಎಲ್/ ಎಲ್‍ಎಲ್ ಲೈಸೆನ್ಸ್ ಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಈ ಪರೀಕ್ಷೆ ನಡೆಯಲಿದೆ. ಪ್ರತಿದಿನ ಶೇ.50 ರಷ್ಟು ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ದಿನಾಂಕವನ್ನು ಆರ್‌ಟಿಒ ಅಭ್ಯರ್ಥಿಗಳ ಮೊಬೈಲ್‍ಗೆ ಸಂದೇಶ ಕಳುಹಿಸಿದೆ.

ಹಸಿರು ವಲಯದಲ್ಲಿರುವ 14 ಜಿಲ್ಲೆಗಳಲ್ಲಿ ಮಾತ್ರ ಈ ಪರೀಕ್ಷೆ ನಡೆಯಲಿದ್ದು, ಉಳಿದ ಕಿತ್ತಳೆ ಮತ್ತು ಕೆಂಪು ವಲಯದಲ್ಲಿ ಲೈಸೆನ್ಸ್ ಹೊರತು ಪಡಿಸಿ ವಾಹನ್-4 ತಂತ್ರಾಶದ ಅಡಿಯಲ್ಲಿ ವಾಹನಗಳ ನೋಂದಣಿ, ವಾಹನದ ವರ್ಗಾವಣೆ ಅರ್ಹತಾ ಪತ್ರ ನವೀಕರಣ ಇತ್ಯಾದಿ ಸೇವೆಗಳು ಲಭ್ಯವಾಗಲಿದೆ ಎಂದು ಸಾರಿಗೆ ಮತ್ತು ಸುರಕ್ಷತೆ ಆಯುಕ್ತರು ಆದೇಶ ಪ್ರಕಟಿಸಿದ್ದಾರೆ.

ಕಚೇರಿಗೆ ಹಾಜರಾಗುವ ಸಂದರ್ಭದಲ್ಲಿ ಕೋವಿಡ್ 19 ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಒಳಪಡಬೇಕಾಗುತ್ತದೆ


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ