Home / ಕ್ರೀಡೆ / ಲಾಕ್‍ಡೌನ್ ಸಮಯವನ್ನು ಎಂಎಸ್ ಧೋನಿ ಅವರು, ಅವರ ಮಗಳು ಮತ್ತು ಪತ್ನಿ ಸಾಕ್ಷಿ ಜೊತೆ ಎಂಜಾಯ್

ಲಾಕ್‍ಡೌನ್ ಸಮಯವನ್ನು ಎಂಎಸ್ ಧೋನಿ ಅವರು, ಅವರ ಮಗಳು ಮತ್ತು ಪತ್ನಿ ಸಾಕ್ಷಿ ಜೊತೆ ಎಂಜಾಯ್

Spread the love

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿಯವರ ಪತ್ನಿ ಸಾಕ್ಷಿ, ಧೋನಿ ಅವರ ಕಾಲು ಕಚ್ಚಿದ್ದಾರೆ.

ಕೊರೊನಾ ಭಯದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಕ್ರಿಕೆಟ್, ಸಿನಿಮಾ ಕೈಗಾರಿಕೆ ಎಲ್ಲವೂ ಬಂದ್ ಆಗಿದ್ದು, ಕ್ರೀಡಾಪಟುಗಳು ಮತ್ತು ನಟ-ನಟಿಯರು ಮನೆಯಲ್ಲೇ ಬಂಧಿಯಾಗಿದ್ದಾರೆ. ಅಂತೆಯೇ ಕೊರೊನಾ ಲಾಕ್‍ಡೌನ್ ಸಮಯವನ್ನು ಎಂಎಸ್ ಧೋನಿ ಅವರು, ಅವರ ಮಗಳು ಮತ್ತು ಪತ್ನಿ ಸಾಕ್ಷಿ ಜೊತೆ ಎಂಜಾಯ್ ಮಾಡುತ್ತಿದ್ದಾರೆ

ಹೀಗೆ ಮನೆಯಲ್ಲೇ ಇರುವ ಧೋನಿ ಅವರನ್ನು ಹೆಚ್ಚು ವಿಡಿಯೋ ಗೇಮ್‍ಗಳಲ್ಲಿ ಬ್ಯುಸಿಯಾಗಿದ್ದು, ಅವರ ಗಮನವನ್ನು ತನ್ನತ್ತ ಸೆಳೆಯುವ ಸಲುವಾಗಿ ಅವರ ಪತ್ನಿ ಸಾಕ್ಷಿ ಧೋನಿ ಕಾಲು ಕಚ್ಚಿದ್ದಾರೆ. ಕಾಲು ಕಚ್ಚುತ್ತಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಸಾಕ್ಷಿ, ಮಿಸ್ಟರ್ ಸ್ವೀಟಿಯ ಗಮನ ಸೆಳೆಯುವ ಸಮಯದಲ್ಲಿ, ವಿಡಿಯೋ ಗೇಮ್ ವರ್ಸಸ್ ವೈಫ್ ಎಂದು ಫನ್ನಿಯಾಗಿ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇರುವ ಸಾಕ್ಷಿಯವರು ಆಗಾಗ ತಮ್ಮ ಮಗಳ ಫೋಟೋ, ಧೋನಿ ಅವರ ವಿಡಿಯೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಕೂಡ ಧೋನಿ ಅವರ ವಿಡಿಯೋವನ್ನು ಸಾಕ್ಷಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಧೋನಿ ಇನ್‍ಸ್ಟಾಗ್ರಾಮ್‍ನಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳುಲು ಹೀಗೆ ಮಾಡುತ್ತಾಳೆ ಎಂದು ಹೆಂಡತಿಯನ್ನು ಕಾಲೆಳೆದಿದ್ದರು. ಆಗ ಸಾಕ್ಷಿ ನಿಮ್ಮ ಹಿಂಬಾಲಕರೆಲ್ಲರೂ ನನ್ನ ಫಾಲೋವರ್ಸ್ ಅಲ್ಲವೇ ಎಂದು ಹೇಳಿದ್ದರು.

ಸದ್ಯ ಕ್ರಿಕೆಟ್‍ನಿಂದ ಕೊಂಚ ದೂರ ಉಳಿದಿರುವ ಧೋನಿ, ತಮ್ಮ ಮಡದಿಯ ಜೊತೆ ಹಲವಾರು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಪತ್ನಿ ಸಾಕ್ಷಿ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧೋನಿ ಸ್ಟೇಜ್ ಹತ್ತುವುದಕ್ಕೆ ನಾಚಿಕೊಂಡಿದ್ದರು. ಆಗ ಮಧ್ಯೆ ಬಂದ ಸಾಕ್ಷಿ ಧೋನಿ ಅವರನ್ನು ಸ್ಟೇಜ್ ಮೇಲೆ ಹೋಗುವಂತೆ ಹೇಳಿ ಕಳುಹಿಸಿದ್ದರು. ಹೆಂಡತಿಯ ಮಾತಿನಂತೆ ಸ್ಟೇಜ್ ಹತ್ತಿದ್ದ ಧೋನಿ ಅವರ ನಾಚಿಕೆಯ ವಿಡಿಯೋ ವೈರಲ್ ಕೂಡ ಆಗಿತ್ತು.

ಕಳೆದ ವರ್ಷ ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋಲಿನ ನಂತರ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಇದಾದ ನಂತರ ಭಾರತೀಯ ಸೇನೆಯಲ್ಲಿ ಕೆಲ ಕಾಲ ಸೇವೆ ಸಲ್ಲಿಸಿದ ಧೋನಿ. ಐಪಿಎಲ್ 13ನೇ ಆವೃತ್ತಿಯಲ್ಲಿ ಆಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇದಕ್ಕಾಗಿ ಚೆನ್ನೈಗೆ ಬಂದು ಅಭ್ಯಾಸ ಕೂಡ ಮಾಡಿದ್ದರು. ಆದರೆ ಕೊರೊನಾ ವೈರಸ್‍ನಿಂದಾಗಿ ಐಪಿಎಲ್ ಮುಂದಕ್ಕೆ ಹೋಗಿದೆ.

ಈ ನಡುವೆ ಧೋನಿ ಮತ್ತೆ ಕ್ರಿಕೆಟ್‍ಗೆ ಮರಳುತ್ತಾರ ಇಲ್ಲ ವಿದಾಯ ಘೋಷಿಸುತ್ತಾರಾ ಎಂಬ ಪ್ರಶ್ನೆಗಳು ಮೂಡಿವೆ. ಈ ವಿಚಾರವಾಗಿ ಮಾತನಾಡಿದ್ದ ವಿರೇಂದ್ರ ಸೆಹ್ವಾಗ್, ಕೆ.ಎಲ್.ರಾಹುಲ್ ಹಾಗೂ ರಿಷಬ್ ಪಂತ್ ಅವರು ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೆ.ಎಲ್.ರಾಹುಲ್ ಕೂಡ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಅವರನ್ನು ತಂಡದಿಂದ ಹೊರಹಾಕುವುದು ಕಷ್ಟ. ಎಂ.ಎಸ್.ಧೋನಿ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ನಂತರ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಹೀಗಾಗಿ ಅವರು ತಂಡಕ್ಕೆ ಮರಳುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದರು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ