Breaking News

ಧರ್ಮಸ್ಥಳ ಕಾರ್ ಮ್ಯೂಸಿಯಂಗೆ ಜರ್ಮನ್ ನಿರ್ಮಿತ ಹಳೆಯ ಕಾರು ಕೊಡುಗೆ

Spread the love

ಧರ್ಮಸ್ಥಳ ; ಅಸ್ಟ್ರೀಯಾದಲ್ಲಿ ಸುಮಾರು 50 ವರ್ಷಗಳಿಂದ ಅಶ್ರಮ ನಿರ್ಮಿಸಿ ಯೋಗ ಹಾಗೂ ಧರ್ಮಪ್ರಚಾರ ಮಾಡುತ್ತಿರುವ ವಿಶ್ವಗುರು ಮಹಾಮಂಡಲೇಶ್ವರ್ ಪರಮಹಂಸ ಮಹೇಶ್ವರಾನಂದ ಸ್ವಾಮೀಜಿಗಳು ಕಾರೊಂದನ್ನು ಧರ್ಮಸ್ಥಳ ಕಾರ್ ಮ್ಯೂಸಿಯಂಗೆ ಕೊಡುಗೆಯಾಗಿ ನೀಡಿದ್ದಾರೆ.

ಕಳೆದ 3 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಯೋಗ ಮಹಾಸಮ್ಮೇಳನಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾರ್ ಮ್ಯೂಸಿಯಂಗೆ ಭೇಟಿ ನೀಡಿ ತಮಗೆ ಆಸ್ಟ್ರೀಯಾದ ಕೌನ್ಸಿಲರ್ ಕೊಡುಗೆಯಾಗಿ ನೀಡಿದ್ದ 1972 ಮಾಡಲïನ ಮರ್ಸಿಡೀಸ್ ಬೆನ್ಜ್ ಕಂಪನಿಯ 2-80 ಎಂಬ ಸುಸ್ಥಿತಿಯಲ್ಲಿರುವ ಕಾರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಕೀ ನೀಡುವ ಮೂಲಕ ಹಸ್ತಾಂತರಿಸಿದರು.

ರ್ಮಸ್ಥಳ ಕ್ಷೇತ್ರದ ಪರವಾಗಿ ಸ್ವಾಮೀಜಿಯವರನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಡಿ.ಹರ್ಷೇಂದ್ರ ಕುಮಾರ್, ವೀರೇಂದ್ರ ಹೆಗ್ಗಡೆಯವರ ಆಪ್ತ ಸಹಾಯಕ ವೀರೂ ಶೆಟ್ಟಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ