ಸತ್ತಿಗೇರಿ: ನರೇಂದ್ರ ಮೋದಿ ನೇತತ್ವದ ಕೇಂದ್ರ ಸರ್ಕಾರ 12 ವರ್ಷಗಳ ಯಶಸ್ವಿ ಆಡಳಿತಾವಧಿಯಲ್ಲಿ ಜಾರಿಗೊಳಿಸಿರುವ ಜನಪರ, ಅಭಿವದ್ಧಿ ಕಾರ್ಯ ಕುರಿತು ಕಾರ್ಯಕರ್ತರು ಜನರಿಗೆ ಮಾಹಿತಿ ತಲುಪಿಸಬೇಕು ಎಂದು
ಬಿಜೆಪಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ ತಿಳಿಸಿದರು.
ಇಟ್ನಾಳ, ಗುಡಮಕೇರಿ ಗ್ರಾಮಗಳಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗ್ರಾಮಮಟ್ಟದ ಪಕ್ಷದ ಹಿರಿಯ ಕಾರ್ಯಕರ್ತರ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದರು.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಮಹತ್ವ ವಿವರಿಸಿ, ಅರ್ಹ ಮತದಾರರ ಹೆಸರು ಸೇರ್ಪಡೆ, ಅಗತ್ಯ ತಿದ್ದುಪಡಿ ಹಾಗೂ ಮತದಾರರ ಪಟ್ಟಿ ನಿಖರತೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಕೋರಿದರು. ಪಕ್ಷದ ಸಂಘಟನೆ, ಬಲವರ್ಧನೆ, ಮುಂಬರುವ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಕುರಿತು ಹಿರಿಯ ಕಾರ್ಯಕರ್ತರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ಎಪಿಎಂಸಿ ಮಾಜಿ ಅಧ್ಯಕ್ಷ ಬಸಯ್ಯಜ್ಜ ಹಿರೇಮಠ, ತಾಪಂ ಮಾಜಿ ಅಧ್ಯಕ್ಷ ಜಗದೀಶ ಕೌಜಗೇರಿ, ಬಿಎಲ್‌ಒ ಈರಣ್ಣ ಚಂದರಗಿ, ಮಂಡಲ ಉಪಾಧ್ಯಕ್ಷರಾದ ಮಹಾಂತೇಶ ಗೋಡಿ, ಸಂಜೀವಕುಮಾರ ನವಲಗುಂದ, ಯುವ ಮೋರ್ಚಾ ಅಧ್ಯಕ್ಷ ಕಷ್ಣಮೂರ್ತಿ ತೊರಗಲ್ಲ, ಮುಖಂಡರಾದ ಬಸವರಾಜ ಪೂಜೇರ, ಮಲ್ಲಿಕಾರ್ಜುನ ಯರಗಟ್ಟಿ, ಮಲ್ಲಿಕಾರ್ಜುನ ಸವದತ್ತಿ, ಮೋಹನ ಪಾಟೀಲ, ರುದ್ರಪ್ಪ ಚಂದರಗಿ, ನಿಂಗಪ್ಪ ವಗ್ಗರ, ಸಿದ್ದನಗೌಡ ಪಾಟೀಲ, ಬೀರಪ್ಪ ಜಂಗಟಿ, ಆನಂದ ಲಮಾಣಿ, ಈರಣ್ಣ ವೀರಶೆಟ್ಟಿ, ವೆಂಕಟೇಶ ದೇವರಡ್ಡಿ, ಚೇತನ ಜಕಾತಿ, ಬಸನಗೌಡ ಪಾಟೀಲ, ಪರ್ವತಗೌಡ ಪಾಟೀಲ, ಗೌಡಪ್ಪ ಸವದತ್ತಿ ಇತರರಿದ್ದರು.
Laxmi News 24×7