Breaking News

ಚಿಕ್ಕೋಡಿಯ ಸಿಟಿಇ ಸಂಸ್ಥೆಯ ಡಿ.ಕೆ.ಶಹಾ ಪ್ರಾಥಮಿಕ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಯಂತ್ರ ಕೊಡುಗೆ; ಗಣ್ಯರಿಂದ ಸತ್ಕಾರ

Spread the love

ಚಿಕ್ಕೋಡಿ:ಪಟ್ಟಣದ ಪ್ರಥಮ ದರ್ಜೆಯ ಗುತ್ತಿಗೆದಾರರು, ಸಮಾಜ ಹಿತಚಿಂತಕರು ಹಾಗೂ ಪ್ರತಿಷ್ಠಿತ ಸಿ.ಟಿ.ಇ. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ವಿಜಯ ಎಸ್. ಮಾಂಜರೇಕರ ಅವರ ೭೮ನೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಗಸಿ.ಟಿ.ಇ. ಸಂಸ್ಥೆಯ ಅಂಗಸಂಸ್ಥೆಯಾದ ಶ್ರೀಮತಿ ಡಿ.ಕೆ. ಶಹಾ ಕನ್ನಡ ಮತ್ತು ಮರಾಠಿ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ದಾನವಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮೊದಲು ಸಿ.ಟಿ.ಇ. ಸಂಸ್ಥೆಯ ಅಧ್ಯಕ್ಷರಾದ ಸಿ.ಬಿ. ಕುಲಕರ್ಣಿ, ನಿರ್ದೇಶಕರು ಮತ್ತು ಕಾರ್ಯದರ್ಶಿಗಳಾದ ಅರುಣ ಎಸ್. ಕುಲಕರ್ಣಿ, ನಿರ್ದೇಶಕರಾದ ಸತೀಶ ಬಿ. ಕುಲಕರ್ಣಿ, ಓಂಕಾರ ಎಸ್. ಕುಲಕರ್ಣಿ, ಆಡಳಿತಾಧಿಕಾರಿಗಳಾದ ಎಸ್.ಜಿ. ಜಹಾಗೀರದಾರ, ಸಹ-ಕಾರ್ಯದರ್ಶಿಗಳಾದ ಮಿಥುನ ಎಸ್. ದೇಶಪಾಂಡೆ ಅವರು ಸತ್ಕಾರ ವಿಜಯ ಮಾಂಜ್ರೇಕರಯವರನ್ನು ಸತ್ಕರಿಸಿ ಗೌರವಿಸಿದರು.

ಇದೇ ವೇಳೆ ವಿಜಯ ಮಾಂಜರೇಕರ ಅವರ ಧರ್ಮಪತ್ನಿ ಶೋಭಾ ವ್ಹಿ. ಮಾಂಜರೇಕರ,ಮಗನಾದ ಖ್ಯಾತ ಉದ್ಯಮಿಗಳಾದ ಸಂಕೇತ ಎಸ್. ಮಾಂಜರೇಕರ, ಸೊಸೆ ಗೌರಿ ಎಸ್. ಮಾಂಜರೇಕರ ಮತ್ತು ಕುಟುಂಬದ ಎಲ್ಲ ಸದಸ್ಯರು ಸೇರಿ ಮಾನ್ಯರಿಗೆ ಸತ್ಕಾರ ಮಾಡಿದರು. ಚಿಕ್ಕೋಡಿಯ ಪ್ರತಿಷ್ಠಿತ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಿ.ಟಿ.ಇ. ಸಂಸ್ಥೆಯ ಎಲ್ಲ ಅಂಗಸಂಸ್ಥೆಗಳ ಮುಖ್ಯಸ್ಥರು ಕೂಡ ಮಾಂಜರೇಕರ ಅವರನ್ನು ಆತ್ಮೀಯವಾಗಿ ಸತ್ಕರಿಸಿದರು.

ಸತ್ಕಾರ ಸ್ವೀಕರಿಸಿ ಮಾತನಾಡಿದ ೭೮ ವರ್ಷದ ಹಿರಿಯರಾದ ವ್ಹಿ.ಎಸ್. ಮಾಂಜರೇಕರ ಅವರು, “ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಅನಿವಾರ್ಯವಾಗಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಯುವ ಪೀಳಿಗೆಯು ದಿನಾಲು ನಿಯಮಿತವಾಗಿ ವ್ಯಾಯಾಮ ಮತ್ತು ಧ್ಯಾನ ಮಾಡಿಕೊಳ್ಳುವುದರ ಮೂಲಕ ತಮ್ಮ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬೇಕು” ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಸತ್ಕರಿಸಲಾಯಿತು. ಗಣಿತ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದ ಕು. ಸ್ವಾತಿ ಎಸ್. ಜೋಶಿ, ಬುಲ್‌ಬುಲ್ ವಿಭಾಗದಲ್ಲಿ ರಾಷ್ಟ್ರಮಟ್ಟದ ಪ್ರತಿಷ್ಠಿತ ‘ಗೋಲ್ಡನ್ ಏರೋ ಅವಾರ್ಡ್’ ಪ್ರಶಸ್ತಿ ಮುಡಿಗೇರಿಸಿಕೊಂಡ ಶ್ರಾವಣಿ ಆರ್. ಅಜ್ಜನಕಟ್ಟಿ ಹಾಗೂ ಆರ್. ಎಂ. ಬಾಲಿಕಾ ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಕೊಡುಗೆಯಾಗಿ ನೀಡಿದ ಎಚ್.ಎಸ್. ಕುಲಕರ್ಣಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.


Spread the love

About Laxminews 24x7

Check Also

ಗ್ಯಾರಂಟಿ ಪರಿಷ್ಕರಣೆ ಅನಿವಾರ್ಯ, ಆದರೆ ನಿಲ್ಲಿಸಲ್ಲ: ಸಚಿವ ಸತೀಶ್ ಜಾರಕಿಹೊಳಿ

Spread the loveಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಅಥವಾ ಪುನರ್ ಪರಿಶೀಲನೆ ಕುರಿತು ಲೋಕೋಪಯೋಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ