Breaking News

ಸುಳ್ಳು ಹೇಳೋದ್ರಲ್ಲಿ ಸಿದ್ದರಾಮಯ್ಯ ನಿಸ್ಸೀಮರು: ಸಿ.ಟಿ.ರವಿ

Spread the love

ಬೆಂಗಳೂರು: ಮೆಟ್ರೋ  ದರ ಏರಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಮೆಟ್ರೋ ದರ ಏರಿಕೆ ಕುರಿತು ಬಿಜೆಪಿ ಹೋರಾಟ ಮಾಡಲಿದೆ ಅಂತ ಬಿಜೆಪಿ ನಾಯಕ ಸಿ.ಟಿ ರವಿ  ತಿಳಿಸಿದ್ದಾರೆ.

ಮೆಟ್ರೋ ದರ ಏರಿಕೆ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸುಳ್ಳು ಹೇಳೋದ್ರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖ. ಸುಳ್ಳು ಬೆಳಗ್ಗೆ ಪ್ರಾರಂಭ ಮಾಡಿ‌ ಅಂತ್ಯ ಮಾಡೋದು ಸುಳ್ಳಿನಿಂದಲೇ ಅಂತ‌ ಕಿಡಿಕಾರಿದರು. 

ಮೆಟ್ರೋ ದರ ಏರಿಕೆ ಸಂಬಂಧ ಪಿ.ಸಿ ಮೋಹನ್ ವಿವರವಾಗಿ ಪತ್ರ ಬರೆದಿದ್ದರು. ಮೆಟ್ರೋ ಲಾಭದಲ್ಲಿ ನಿಮಗೆ ಪಾಲು ಇಲ್ಲವಾ ಸಿದ್ದರಾಮಯ್ಯ ಅವರೇ? ಸಮಿತಿ ಅಧ್ಯಕ್ಷ ಯಾರ್ ಆಗಬೇಕು ಅಂತ ಶಿಫಾರಸು ಮಾಡೋರು ಯಾರು? ಸಂಸದರು ಹೇಳಿದ ಹಾಗೆ ಮೆಟ್ರೋ ದರ ಏರಿಕೆ ಬಗ್ಗೆ ಬಿಜೆಪಿ ಹೋರಾಟ ಮಾಡುತ್ತದೆ ಅಂತ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ