Breaking News

ಶ್ರೀಶೈಲದಿಂದ‌ ವಾಪಸ್ ಬರುವಾಗ ಕ್ರೂಸರ್ ಅಪಘಾತ ; ಬೆಳಗಾವಿ ಮೂಲದ ಮೂವರು ಸಾವು

Spread the love

ಬೆಳಗಾವಿ : ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆದುಕೊಂಡು ಮರಳಿ ಬರುವ ವೇಳೆ ಕ್ರೂಸರ್ ವಾಹನ‌ ಹಾಗೂ ಲಾರಿ‌ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಚಿಕ್ಕೋಡಿ ಮೂಲದ ಮೂವರು ಮೃತಪಟ್ಟ ಘಟನೆ ಆಂದ್ರಪ್ರದೇಶದ ಮಾರ್ಕಪುರಂ ಜಿಲ್ಲೆಯ ತಿಪ್ಪಾಯಪಾಲೆಂ ಬಳಿ ಸೋಮವಾರ ಸಂಭವಿಸಿದೆ.

ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಪಟ್ಟಣದ ಅಜಿತ್ ಸಾತವಾರ ( 28), ಗೌರವ್ (40) ಹಾಗೂ ಅಲಕಾ ಶಿಂಧೆ (60) ಮೃತಪಟ್ಟ ದುರ್ದೈವಿಗಳು. ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ 14 ಜನ ಕ್ರೂಸರ್ ವಾಹನದಲ್ಲಿ ತೆರಳಿದ್ದರು.

ದೇವರ ದರ್ಶನ ಪಡೆದುಕೊಂಡು ಮರಳುವ ವೇಳೆ ಮಾರ್ಕಪುರಂ ಜಿಲ್ಲೆಯ ತಿಪ್ಪಾಯಪಾಲೆಂ ಬಳಿ ಕರ್ನೂಲ್‌ನಿಂದ ನಲ್ಗೊಂಡಕ್ಕೆ ಹಸಿ ಬಾಳೆಹಣ್ಣು ಸಾಗಿಸುತ್ತಿದ್ದ ಲಾರಿ ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು
ಅವರನ್ನು ಚಿಕಿತ್ಸೆಗಾಗಿ ನಂದ್ಯಾಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾರ್ಕಪುರಂನ ವೃತ್ತ ನಿರೀಕ್ಷಕ ಪಿ. ಸುಬ್ಬಾರಾವ್ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿ ಮದುವೆ – ಲಾಡ್ಜ್‌ನಲ್ಲಿ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಂದು ಗಂಡ ಪರಾರಿ

Spread the loveಚಿಕ್ಕಬಳ್ಳಾಪುರ: ಪತ್ನಿಯನ್ನು ಲಾಡ್ಜ್‌ಗೆ  ಕರೆದುಕೊಂಡು ಬಂದ ಪತಿ, ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ