Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ದಿನಗೂಲು ಕಾರ್ಮಿಕರಿಗೆ ಲಾಕ್‌ಡೌನ್ ನಿಂದ ತುಂಬ ಸಂಕಷ್ಟವಾಗುತ್ತಿದೆ ಹೀಗಾಗಿ ಅವರ‌ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು

ದಿನಗೂಲು ಕಾರ್ಮಿಕರಿಗೆ ಲಾಕ್‌ಡೌನ್ ನಿಂದ ತುಂಬ ಸಂಕಷ್ಟವಾಗುತ್ತಿದೆ ಹೀಗಾಗಿ ಅವರ‌ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು

Spread the love

ಗೋಕಾಕ: ಕೊರೋನಾ ಸೊಂಕೀತರ ಸಂಖ್ಯೆ ಹೆಚ್ಚಿಗೆ ಆದಲ್ಲಿ ಲಾಕಡೌನ್ ಮುಂದುವರೆಸಲಿ, ಆದರೆ ನಿರ್ಬಂಧ ಹೆರದೆ ದಿನಗೂಲಿ ಕಾರ್ಮಿಕರಿಗೆ, ಕೃಷಿಕರಿಗೆ ಮತ್ತು ಕೆಲವು ಕಾರ್ಖಾನೆಗಳನ್ನು ಬಿಟ್ಟು ಪಾಸ್ ವ್ಯವಸ್ಥೆ ಮಾಡಿ ಅನೂಕೂಲ ಮಾಡಿಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
 ಸಮೀಪದ ಕೊಣ್ಣೂರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರ ಜೊತೆ ಚರ್ಚಿಸಿ ಅಲ್ಲಿನ ಕುಂದುಕೊರತೆಗಳನ್ನು ವಿಚಾರಿಸಿ ಮಾಸ್ಕ ವಿತರಿಸಿದ ಬಳಿಕ ಮಾದ್ಯಮದವರಿಗೆ ಉತ್ತರಿಸಿದ ಅವರು ದಿನಗೂಲು ಕಾರ್ಮಿಕರಿಗೆ ಲಾಕ್‌ಡೌನ್ ನಿಂದ ತುಂಬ ಸಂಕಷ್ಟವಾಗುತ್ತಿದೆ ಹೀಗಾಗಿ ಅವರ‌ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಸಾರ್ವಜನಿಕ ಸಭೆ,ಸಮಾರಂಭಗಳನ್ನು ಬಂದ್ ಮಾಡಬೇಕು.ಕೊರಾನಾ ತಡೆಗಟ್ಟಲು ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಅನೂಕೂಲವಾಗುಂತಹ ಕೆಲಸ ರಾಜ್ಯ ಸರ್ಕಾರ ಮಾಡಬೇಕಾಗಿದೆ. ನಮ್ಮ ಪಕ್ಷದ ವತಿಯಿಂದ ಒಂದು ಲಿಸ್ಟ್ ಮಾಡಿ ಬಡವರಿಗೆ ತಲುಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಕೊಡುತ್ತೇವೆ ಎಂದರು.
ಎಲ್ಲ ಮುಖ್ಯಂತ್ರಿಗಳನ್ನು ಕೇಳಿ ಅವರ ಸಲಹೆಗಳನ್ನು ಪಡೆದು ಲಾಕಡೌನ್ ಮಾಡಬೇಕಿತ್ತು ತರಾತುರಿಯಲ್ಲಿ ಮಾಡಿದ್ದರಿಂದ ಸಮಸ್ಯೆಗಳು ಆಗಿ ಮಾಸ್ಕ್ ಕೂಡ ಎನ್,ಜಿ,ಓ ಗಳು ಕೊಡುವಂತಾಗಿದೆ ಎಂದು ಟೀಕಿಸಿದರು.
ಇಂತಹ ಪರಿಸ್ಥಿಯಲ್ಲಿ ಕೆಲವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಆದರೆ ಕೆಲವರು ತಮ್ಮಷ್ಟಕ್ಕೆ ತಾವೆ ಡಿಸ್ಟೇನ್ಸ್ ಕಾಯ್ದುಕೊಂಡು ಮನೆಯಲ್ಲಿ ಇದ್ದಾರೆಂದು ಟಾಂಗ್ ನೀಡಿದರು.


Spread the love

About Laxminews 24x7

Check Also

ಪಕ್ಷದಿಂದ ಟಿಕೆಟ್‌ ಘೋಷಣೆಯ ಮರುದಿನವೇ ಪ್ರಚಾರ’- ಶೆಟ್ಟರ್‌

Spread the loveಹುಬ್ಬಳ್ಳಿ:ಪಕ್ಷದಿಂದ ಟಿಕೆಟ್ ಅಧಿಕೃತವಾಗಿ ಘೋಷಣೆಯಾದ ಮರು ದಿನದಿಂದಲೇ ಬೆಳಗಾವಿಯಲ್ಲಿ ಪ್ರಚಾರ ಮಾಡಲಾಗುವುದು. ಒಂದೆರಡು ದಿನಗಳಲ್ಲಿಯೇ ಘೋಷಣೆ ಮಾಡುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ