ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡಿದ್ದು, ತಂದೆಯ ಅಂತಿಮ ಸಂಸ್ಕಾರಕ್ಕೆ ಮಗನೇ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಹುಬ್ಬಳ್ಳಿಯಲ್ಲಿ ಮೃತ ತಂದೆಯ ಅಂತ್ಯ ಸಂಸ್ಕಾರಕ್ಕೆ ಮಗ ಬಾರದಿರುವ ಹಿನ್ನೆಲೆಯಲ್ಲಿ ಚಿತೆಗೆ ಮಗಳೇ ಅಗ್ನಿ ಸ್ಪರ್ಶ ಮಾಡಿದ್ದಾರೆ. ತಂದೆಯ ಅಂತಿಮ ಸಂಸ್ಕಾರಕ್ಕೆ ಆಗಮಿಸಬೇಕಿದ್ದ ಮಗ ಲಾಕ್‍ಡೌನ್‍ನಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಸಿಲುಕಿದ್ದಾರೆ. ಹೀಗಾಗಿ ಅನಾರೋಗ್ಯದಿಂದ ಸಾವನ್ನಪ್ಪಿದ್ದ ತಂದೆ ಎನ್.ಎ. ಚವ್ಹಾನ್ ಅವರ ಅಂತಿಮ ಸಂಸ್ಕಾರವನ್ನು ಮಗನ ಅನುಪಸ್ಥಿತಿಯಲ್ಲಿ ಅವರ ಮಗಳಿಂದಲೇ ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ.
ಅಂತಿಮ ಕ್ರಿಯೆಗೆ ಚವ್ಹಾನ್ ಕುಟುಂಬದ ಐದಾರು ಜನರು ಮಾತ್ರ ಭಾಗಿಯಾಗಿದ್ದು, ಕೊರೊನಾ ಭಯಕ್ಕೆ ಅಂತ್ಯಸಂಸ್ಕಾರದಲ್ಲಿ ಜನರು ಸಹ ಭಾಗವಹಿಸಿರಲಿಲ್ಲ. ಹುಬ್ಬಳ್ಳಿಯ ಕೇಶ್ವಾಪುರದ ಮುಕ್ತಿ ಧಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.