Breaking News

ಕೊರೋನಾ: ಲಸಿಕೆ ಸಂಶೋಧನೆ ಯಶಸ್ವಿ ಹಂತ ತಲುಪಿದೆ,ಶುಭ ಸುದ್ದಿ ಪ್ರಕಟಿಸಿದ ಡೊನಾಲ್ಡ್ ಟ್ರಂಪ್

Spread the love

ಕೊರೋನಾ: ಲಸಿಕೆ ಸಂಶೋಧನೆ ಯಶಸ್ವಿ ಹಂತ ತಲುಪಿದೆ,ಶುಭ ಸುದ್ದಿ ಪ್ರಕಟಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಜಗತ್ತಿನ ಎಲ್ಲ ದೇಶಗಳು ಭಯದಿಂದ ಬೊಬ್ಬೆ ಹೊಡೆಯುವಂತೆ ಮಾಡಿರುವ ಕೊರೊನಾ ವೈರಸ್ ವಿರುದ್ಧ ಹೋರಾಡಲು ವಿಶ್ವದ ಎಲ್ಲ ದೇಶಗಳ ಮುಖ್ಯಸ್ಥರು ಕೈಜೋಡಿಸುತ್ತಿದ್ದಾರೆ. ಕೊರೊನಾ ವೈರಸ್ ಮಹಾಮಾರಿಗೆ ಔಷಧಿ ಕಂಡುಹಿಡಿಯುವ ಪ್ರಯತ್ನ ಮುಂದುವರಿಸಿದ್ದಾರೆ. ಈ ನಿಟ್ಟಿನಲ್ಲಿ ಜಗತ್ತಿನ ಜನರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಹ ಸುದ್ದಿಯೊಂದನ್ನು ಅಮೆರಿಕಾ ನೀಡಿದೆಕೊರೊನಾ ವೈರಸ್ ಗೆ ಪ್ರತಿರೋಧ ಒಡ್ಡುವಂತಹ ಲಸಿಕೆಯೊಂದರ ಸಂಶೋಧನಾ ಪ್ರಕ್ರಿಯೆ ಬಹುತೇಕ ಯಶಸ್ವಿ ಹಂತ ತಲುಪಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾ

ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಸಂಯೋಜನೆಯೊಂದಿಗೆ ಅಮೆರಿಕಾ ವಿಜ್ಞಾನಿಗಳು ರೂಪಿಸಿರುವ ಈ ಲಸಿಕೆಗೆ ಕೊರೊನೊ ವೈರಸ್ ನಿಗ್ರಹಿಸುವ ಸಾಧ್ಯತೆಯಿದೆ ಹೇಳಿದ್ದಾರೆಈ ಮಾರಕ ವೈರಸ್ ಅನ್ನು ಜಗತ್ತಿನಿಂದ ಕೊನೆಗಾಣಿಸಲು ಹೈಡ್ರಾಕ್ಸಿಕ್ಲೋರೋಕ್ವಿನ್ ಪರಿಣಾಮಕಾರಿ ಕೆಲಸ ಮಾಡುತ್ತದೆ ಎಂದು ತಜ್ಞ ವೈದ್ಯರು ಖಚಿತಪಡಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆಈ ಪ್ರಯೋಗ ಯಶಸ್ವಿಯಾದರೆ ಜಾಗತಿಕ ವೈದ್ಯಕೀಯ ಇತಿಹಾಸದಲ್ಲಿ ಒಂದು ಅದ್ಭುತ ಸಂಶೋಧನೆಯಾಗಲಿದ್ದು ಮಹತ್ವದ ತಿರುವು ಪಡೆದುಕೊಳ್ಳಲಿದೆ ಎಂದು ಟ್ವೀಟರ್ ನಲ್ಲಿ ಪ್ರಕಟಿಸಿದ್ದಾರೆ.


Spread the love

About Laxminews 24x7

Check Also

ಬಿಜೆಪಿ ಅಧೋಗತಿಗೆ ತಳ್ಳಿದ್ದ ಸಾರಿಗೆ ನಿಗಮಗಳಿಗೆ ‘ಶಕ್ತಿ ಯೋಜನೆ’ ಶಕ್ತಿ ತುಂಬಿದೆ

Spread the love ಬೆಂಗಳೂರು, ನವೆಂಬರ್ 02: ಶಕ್ತಿ ಯೋಜನೆ ಮರು ಪರಿಶೀಲಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳುತ್ತಿದ್ದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ