Breaking News
Home / ಜಿಲ್ಲೆ / ಬೆಂಗಳೂರು / ಮಹಿಳೆ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಬೇಡಿ, ಬೇಕಿದ್ದರೆ ನನ್ನ ಅರ್ಧ ಸಂಬಳವನ್ನು ನೀಡುತ್ತೇನೆ ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ.

ಮಹಿಳೆ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಬೇಡಿ, ಬೇಕಿದ್ದರೆ ನನ್ನ ಅರ್ಧ ಸಂಬಳವನ್ನು ನೀಡುತ್ತೇನೆ ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ.

Spread the love

ಬೆಂಗಳೂರು: ಹಲವರು ಮದ್ಯದಂಗಡಿ ಯಾವಾಗ ತೆರೆಯುತ್ತೆ ಎಂದು ಕಾಯುತ್ತಿದ್ದಾರೆ. ಇನ್ನು ಕೆಲವರು ಮದ್ಯದಂಗಡಿ ತೆರೆಯುವಂತೆ ಸರ್ಕಾರಕ್ಕೆ ದುಂಬಾಲು ಬಿದ್ದಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಬೇಡಿ, ಬೇಕಿದ್ದರೆ ನನ್ನ ಅರ್ಧ ಸಂಬಳವನ್ನು ನೀಡುತ್ತೇನೆ ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಮುಖ್ಯಮಂತ್ರಿಗಳಿಗೆ ನನ್ನದೊಂದು ಮನವಿ. ಎಣ್ಣೆ ಅಂಗಡಿ ತೆರೆಯಲು ಅವಕಾಶ ನೀಡಬೇಡಿ. ಏಕೆಂದರೆ ಮದ್ಯ ಕುಡಿದು ನಮ್ಮ ಅಪ್ಪ-ಅಮ್ಮ ದಿನವೂ ಜಗಳವಾಡುತ್ತಾರೆ. ಗಲಾಟೆ ಮಾಡಿ ಅಕ್ಕಪಕ್ಕದವರಿಗೆ ತೊಂದರೆ ಕೊಡುತ್ತಾರೆ. ಹೀಗಾಗಿ ನೆರೆಮನೆಯವರು ರಾತ್ರೋರಾತ್ರಿ ನಮಗೆ ಫೋನ್ ಮಾಡಿ ನಿಮ್ಮ ಪೋಷಕರು ಗಲಾಟೆ ಮಾಡುತ್ತಿದ್ದಾರೆ ಎಂದು ದೂರುತ್ತಾರೆ ಎಂದು ಮಹಿಳೆ ಹೇಳಿದ್ದಾರೆ.

ಅಲ್ಲದೇ ನಾನು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಬರುವ ಸಂಬಳದಲ್ಲಿ ಅರ್ಧದಷ್ಟು ಹಣವನ್ನ ಸರ್ಕಾರಕ್ಕೆ ಕೊಡುತ್ತೇನೆ. ದಯವಿಟ್ಟು ಎಣ್ಣೆ ಅಂಗಡಿ ತೆರೆಯಲು ಅವಕಾಶ ಕೊಡಬೇಡಿ. ಈ ಕಾಲಕ್ಕೆ ನಾವು ಅನುಭವಿಸುತ್ತಿರುವುದು ಸಾಕು. ನಮ್ಮ ಮಕ್ಕಳ ಕಾಲದಲ್ಲಿ ಎಣ್ಣೆಯಿಂದ ಯಾವುದೇ ತೊಂದರೆ ಆಗದೇ ಇರಲಿ ಎನ್ನುವುದು ಅನ್ನ ಅಭಿಪ್ರಾಯ ಎಂದು ಮಹಿಳೆ ಮನವಿ ಮಾಡಿಕೊಂಡಿದ್ದಾರೆ.


Spread the love

About Laxminews 24x7

Check Also

ಫಲಕದಲ್ಲಿ ಕಾಮಗಾರಿ ಸಿಸಿ ರಸ್ತೆ ಮಾಯ ಕಳಪೆ ಚರಂಡಿ ಕಾಮಗಾರಿ ಪಂಚಾಯತರಾಜ ಇಂಜಿನಿಯರಿಂಗನ ಬ್ರಹ್ಮಾಂಡ ಭ್ರಷ್ಟಾಚಾರ

Spread the loveಬೆಳಗಾವಿ: ಫಲಕದಲ್ಲಿ ಕಾಮಗಾರಿ ಸಿಸಿ ರಸ್ತೆ ಮಾಯ ಕಳಪೆ ಚರಂಡಿ ಕಾಮಗಾರಿ ಪಂಚಾಯತರಾಜ ಇಂಜಿನಿಯರಿಂಗನ ಬ್ರಹ್ಮಾಂಡ ಭ್ರಷ್ಟಾಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ