ಚಿಕ್ಕಮಗಳೂರು: ಅನುಮತಿ ಪಡೆದು ಹೋಗಬೇಕು ಎಂದು ಹೇಳಲು ಪಾದರಾಯನಪುರ ಜಮೀರ್ ಅಹ್ಮದ್ ಅವರ ಫಾದರ್ ಪ್ರಾಪರ್ಟಿ ಅಲ್ಲ ಎಂದು ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವಾಗ ವಿಧಾನಸಭೆಗೆ ಬಂದಿದೇನೋ ಅವಾಗಲೇ ಜಮೀರ್ ಅಹ್ಮದ್ ಕೂಡ ಬಂದಿರೋದು. ಹೀಗಾಗಿ ಜಮೀರ್ ಅವರಿಗೆ ಒಂದು ಕಾನೂನು ನನಗೊಂದು ಕಾನೂ ಇಲ್ಲ. ಈ ದೇಶದ ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯವಾಗುತ್ತದೆ. ಈಗಾಗಲೇ ಮುಖ್ಯಮಂತ್ರಿಗಳು ಅವನು ಯಾವ ಸೀಮೆಯ ತೋತಪ್ಪ ನಾಯಕ ಎಂದು ಹೇಳಿದ್ದಾರೆ. ನಾನು ಅದೇ ಪ್ರಶ್ನೆ ಕೇಳಬೇಕಾಗುತ್ತದೆ. ನೀನು ನನ್ನಂತೆಯೇ ಓರ್ವ ಶಾಸಕ ಎಂದು ಜಮೀರ್ ವಿರುದ್ಧ ಕಿಡಿಕಾರಿದರು.
224 ಮಂದಿ ಶಾಸಕರಲ್ಲಿ ನೀನೂ ಒಬ್ಬ. ಈ 224 ಜನರಲ್ಲಿ ಅನಮತಿ ಪಡೆದು ಹೋಗಬೇಕು ಅಂದರೆ ಅಲ್ಲಿಗೆ ನೀನೇನು ಮಹಮ್ಮದ್ ಆಲಿ ಜಿನ್ನಾ ಎಂದು ಅಂದುಕೊಂಡಿದ್ದೀಯಾ..?. ಪಾದರಾಯನ ಪುರ ಜಮೀರ್ ಫಾದರ್ ಪ್ರಾಪರ್ಟಿ ಅಲ್ವಲ್ಲ. ಫಾದರ್ ಪ್ರಾಪರ್ಟಿ ಆದರೂ ದೇಶದೊಳಕ್ಕೆ ಬಂದರೆ ಅದು ದೇಶದ ನಿಯಮಕ್ಕೆ ಬದ್ಧನಾಗಿರಬೇಕು ಎಂದು ಗರಂ ಆದರು.