Breaking News

ಚಿಕ್ಕೋಡಿ ಕೆ ಎಲ್ ಇ ಕಾಲೇಜಿಗೆ ನಾವೀನ್ಯ ಪ್ರಯೋಗಾಲಯ ರಚನೆಗೆ 1.25 ಕೋಟಿ ರೂಪಾಯಿ ಅನುದಾನ

Spread the love

ಚಿಕ್ಕೋಡಿಯ ಕೆ.ಎಲ್.ಇ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸಾಯನ್ಸ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವಿನೋದ ಬಿರಾದರ (ಪ್ರಿನ್ಸಿಪಾಲ್ ಇನವೆಸ್ಟಿಗೆಟರ್) ಹಾಗೂ ಇಲೆಕ್ಟ್ರಾನಿಕ್ಸ್ ಆಯ್ಯಂಡ್ ಕಮ್ಯುನಿಕೆಶನ್ ವಿಭಾಗದ ಪ್ರಾಧ್ಯಾಪಕರಾದ ಡಾ. ಸಂಜಯ ಪುಜಾರಿ (ಕೊ-ಪ್ರಿನ್ಸಿಪಾಲ್ ಇನವೆಸ್ಟಿಗೆಟರ್) ಇವರು ಪ್ರಸ್ತಾಪಿಸಿದ ಇಂಟೆಲಿಜೆನ್ಸ್ ಸಿಸ್ಟಮ್ ಆಯ್ಯಂಡ್ ಕಾಗ್ನಿಟಿವ್ ಕಂಪ್ಯೂಟಿಂಗ್ ವಿಷಯದ ನಾವೀನ್ಯ ಪ್ರಯೋಗಾಲಯ ರಚನೆಗೆ ಸಲ್ಲಿಸಿದ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ-ಬಿಟಿ ವಿಭಾಗವು ಲಿಪ್ ಯೋಜನೆಯಡಿ 1.25 ಕೋಟಿ ರೂಪಾಯಿ ಅನುದಾನವನ್ನು ಕಾಲೇಜಿಗೆ ನೀಡಿದ್ದು ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ದರ್ಶನಕುಮಾರ ಬಿಳ್ಳೂರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರೆತರ ಟೈರ್-2 ಹಾಗೂ ಟೈರ್-3 ನಗರಗಳಲ್ಲಿರುವವರ ಕಾಲೇಜುಗಳಿಗೆ ಕೌಶಲಗಳನ್ನ ಹೆಚ್ಚಿಸಲೂ ನೀಡುವಂಥಹ ಅನುದಾನವಾಗಿದೆ.
ಈ ಅನುದಾನದಡಿ ನಾವಿನ್ಯ ಪ್ರಯೋಗಾಲಯ ರಚನೆ, ಕೃಷಿ, ಆರೋಗ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರದವರಿಗೆ ಉಪಯೋಗವಾಗುವಂಥಹ ಸಂಶೋಧನೆ ಕೈಗೊಳ್ಳಲಾಗುವುದು.
ಇವರಿಗೆ ಪದ್ಮಶ್ರೀ ಪುರಸ್ಕøತ ಡಾ.ಪ್ರಭಾಕರ ಕೋರೆಯವರು ಹಾಗೂ ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.


Spread the love

About Laxminews 24x7

Check Also

ವಿದ್ಯಾರ್ಥಿಗಳ ಫಲಿತಾಂಶವನ್ನು ಮತ್ತಷ್ಟು ಉತ್ತಮಗೊಳಿಸಲು ಒಂದು ದಿನದ ಕಾರ್ಯಾಗಾರ

Spread the loveಚಿಕ್ಕೋಡಿ ನಗರದ ಪರಣ ನಾಗಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ