Breaking News

Uncategorized

4ನೇ ಮಹಡಿಯಿಂದ ಬಿದ್ದ ಮಗು – ತಂದೆ-ತಾಯಿ ನಿರ್ಲಕ್ಷ್ಯ; ಪುಟ್ಟ ಕಂದ ಜೀವನ್ಮರಣ ಹೋರಾಟ

ಬೆಂಗಳೂರು: ತಂದೆ-ತಾಯಿ ಮನೆಯ ಮುಂದೆ ಆಟವಾಡಲು ಬಿಟ್ಟಿದ್ದ ಪುಟ್ಟ ಕಂದನೊಬ್ಬ 4ನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕ ಆಡುಗೋಡಿಯಲ್ಲಿ ನಡೆದಿದೆ. ಆಗಸ್ಟ್‌ 15ರಂದು ಬೆಳಗ್ಗೆ 10.50ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಮಗು ಗ್ರಿಲ್‌ ಮೇಲೆ ಹತ್ತಿದ್ದು, ಆಯತಪ್ಪಿ 4ನೇ ಮಹಡಿಯಿಂದ ಕೆಳಗೆ ಬಿದ್ದಿದೆ. ಕೆಳಗೆ ಬಿದ್ದ ಬಳಿಕ ಮಗು ಬೌನ್ಸ್ ಆಗಿ ಮತ್ತೆ …

Read More »

ಇಬ್ಬರಿಗೂ ಅತಿಯಾದ ಕೋಪ – ಟೆಕ್ಕಿ ದಂಪತಿ ದುರಂತ ಅಂತ್ಯಕ್ಕೆ ಕಾರಣ ರಿವೀಲ್

ಬೆಂಗಳೂರು: ಕೋಪ ಸೆರಗಲ್ಲಿ ಬೆಂಕಿ ಕಟ್ಟಿಕೊಂಡ ಹಾಗೆ ಎಂಬ ಮಾತು ಅದೆಷ್ಟು ಸತ್ಯ ಅಲ್ವಾ? ಈ ಮಾತಿಗೆ ಪೂರಕವಾಗಿದೆ ಬೆಂಗಳೂರಿನ ಈ ಟೆಕ್ಕಿ ದಂಪತಿಯ ದುರಂತ ಅಂತ್ಯ ಪ್ರಕರಣ. ಇತ್ತೀಚೆಗೆ ರಾಜಗೋಪಾಲ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರ ಹಿಂದಿನ ಕಾರಣ ರಿವೀಲ್ ಆಗಿದೆ. ಇಬ್ಬರಿಗೂ ಅತಿಯಾದ ಕೋಪವೇ ಈ ದುರಂತಕ್ಕೆ ಕಾರಣ ಎಂಬುದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಟೆಕ್ಕಿ ಸುಮಂತ್ ಜೈನ್ …

Read More »

ನಾನೀಗ ಸಿಎಂ ಅಲ್ಲ, ಅದಕ್ಕಾಗಿ ಹೆಚ್ಚು ಮಾತಾಡ್ತಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ನಾನೀಗ ಸಿಎಂ ಅಲ್ಲ, ಅದಕ್ಕಾಗಿ ಹೆಚ್ಚು ಮಾತನಾಡುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಹೇಳಿದ್ದಾರೆ. ಸಿದ್ದರಾಮಯ್ಯ ಸೈಲೆಂಟ್ ಆಗಿದ್ದಾರೆ ಎಂಬ ಚರ್ಚೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಎಲ್ಲಿ ಸೈಲೆಂಟ್ ಆಗಿದ್ದೇನೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ್ದೇನೆ. ನಿನ್ನೆ ಅಧಿವೇಶನದಲ್ಲಿ ಭಾಗಿ ಆಗಿದ್ದೇನೆ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಆದರೆ ನಾನು ಹೆಚ್ಚು ಮಾತಾಡುತ್ತಿಲ್ಲ ಅಷ್ಟೇ. ನಾನೀಗ ಮುಖ್ಯಮಂತ್ರಿ ಅಲ್ಲ, ಹಾಗಾಗಿ ಜವಬ್ದಾರಿ ಇಲ್ಲ …

Read More »

ಗ್ರಾಮೀಣ ಭಾಗದ ಜನತೆಗೆ ಉದ್ಯೋಗ ನೀಡದಿದ್ರೆ ಪಿಡಿಒ ಅಮಾನತು: ಶಿವರಾಜ್ ತಂಗಡಗಿ ಎಚ್ಚರಿಕೆ

ಕೊಪ್ಪಳ: ಮನರೇಗಾದ ಬದಲಾದ ರೂಪ ವಿಬಿ ಜಿ ರಾಮ್ ಜಿ  ಯೋಜನೆಯಡಿ ಗ್ರಾಮೀಣ ಭಾಗದ ಜನತೆಗೆ ಉದ್ಯೋಗ ನೀಡದಿದ್ದಲ್ಲಿ ಪಿಡಿಒ  ವಿರುದ್ಧ ಕ್ರಮ ಜರುಗಿಸುವುದಾಗಿ ಸ್ಥಳೀಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದರು. ಕೊಪ್ಪಳದ (Koppal) ಕನಕಗಿರಿ ತಾಲೂಕಿನ ಬೊಮ್ಮಾಸಾಗರ ತಾಂಡದಲ್ಲಿ ಇಂದು ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ಸಾರ್ವಜನಿಕರ ಕೊಂದು ಕೊರತೆ ಅಲಿಸಿ ಮಾತನಾಡಿದ ಸಚಿವರು, ಮಳೆ …

Read More »

ಟ್ರಾಫಿಕ್‌ ಪೊಲೀಸ್‌ ಮೇಲೆ ಜೆಡಿಎಸ್‌ ನಾಯಕನ ದರ್ಪ

ಬೆಂಗಳೂರು: ನಗರದಲ್ಲಿ ಟ್ರಾಫಿಕ್‌ ಪೊಲೀಸ್‌ ಮೇಲೆ ಜೆಡಿಎಸ್‌ ನಾಯಕ ಗೊಟ್ಟಿಗೆರೆ ಮಂಜ ದರ್ಪ ತೋರಿರುವ ಘಟನೆ ನಡೆದಿದೆ. ‘ನನ್ನ ಗಾಡಿಯನ್ನೇ ಸ್ಟಾಪ್‌ ಮಾಡ್ತೀಯಾ’ ಅಂತ ಟ್ರಾಫಿಕ್‌ ಪೊಲೀಸ್‌ ಮೇಲೆ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜ ಹಲ್ಲೆಗೆ ಯತ್ನಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಸಿಬ್ಬಂದಿ ಕೊರಳ ಪಟ್ಟಿ ಹಿಡಿದು ಜಗಳ ಮಾಡುತ್ತಿರುವ ದೃಶ್ಯದ ವೀಡಿಯೋ ಹರಿದಾಡಿದೆ. ಗೊಟ್ಟಿಗೆರೆ ಬಳಿ ಟ್ರಾಫಿಕ್ ಸಿಬ್ಬಂದಿ ನಿಂತಿದ್ದರು. ಈ ವೇಳೆ ಕೊಟ್ಟಿಗೆರೆ ಮಂಜ ಎಂಬವರ ವಾಹನವನ್ನು ಪೊಲೀಸ್ …

Read More »

ಚಾ.ನಗರದಲ್ಲಿ ಮೂವರು ತಮಿಳಿಗರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ: ತಮಿಳುನಾಡು ಸಿಎಂ ಖಂಡನೆ

ಚೆನ್ನೈ: ಚಾಮರಾಜನಗರ ಜಿಲ್ಲೆಯಲ್ಲಿ ಅರಣ್ಯಾಧಿಕಾರಿಗಳು ಮೂವರು ತಮಿಳಿಗರಿಗೆ ಗುಂಡಿಕ್ಕಿ ಹತ್ಯೆ ಮಾಡಿರುವುದು ಖಂಡನೀಯ ಎಂದು ತಮಿಳುನಾಡು ಸಿಎಂ ವಿಜಯ್ ಹೇಳಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ವಿಜಯ್, ‘ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹಳ್ಳಿಗಳಲ್ಲಿ ವಾಸಿಸುತ್ತಿದ್ದ ತಮಿಳರಾದ ಆಂಥೋನಿ ಸಾಮಿ, ಜಾನ್ ರೋಸ್ ಪೀಟರ್ ಮತ್ತು ಕುಮಾರ್ ಅವರನ್ನು ಆಗಸ್ಟ್ 15 ರ ಮುಂಜಾನೆ ಕಾವೇರಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿಕ್ಕಿ ಕೊಂದರು. …

Read More »

ಒಬ್ಬ ಅಮೆರಿಕ ಸೈನಿಕನ ಕೊಂದರೆ 28.63 ಲಕ್ಷ ಬಹುಮಾನ: ಇರಾನ್‌ ಘೋಷಣೆ

ಟೆಹ್ರಾನ್: ಅಮೆರಿಕದ ಒಬ್ಬ ಸೈನಿಕನನ್ನು ಕೊಂದರೆ 30,000 ಡಾಲರ್ (ಅಂದಾಜು 28.63 ಲಕ್ಷ ರೂ.) ಬಹುಮಾನ ನೀಡಲಾಗುವುದು. ಮಹಿಳೆಯರು ಈ ಕೆಲಸ ಮಾಡಿದರೆ ಡಬಲ್‌ ಬಹುಮಾನ ಕೊಡಲಾಗುವುದು ಎಂದು ಇರಾನ್‌ ಘೋಷಿಸಿದೆ. ಸೈನಿಕರನ್ನು ಸೆರೆಹಿಡಿಯುವವರಿಗೂ 30,000 ಡಾಲರ್ ಬಹುಮಾನ ನೀಡುವುದಾಗಿ ಇರಾನ್ ಸೇನಾ ಮುಖ್ಯಸ್ಥ ಅಮೀರ್ ಹತಾಮಿ ಘೋಷಿಸಿದ್ದಾರೆ. ಯಾರಾದರೂ ಆಕ್ರಮಣಕಾರಿ ಅಮೆರಿಕನ್ ಮಿಲಿಟರಿ ಸಿಬ್ಬಂದಿಯನ್ನು ಕೊಂದು ಅಥವಾ ಸೆರೆಹಿಡಿದು ಹಸ್ತಾಂತರಿಸಿದರೆ, ಅವರಿಗೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸೈನ್ಯದಿಂದ 30,000 …

Read More »

ಚಾಮರಾಜನಗರದಲ್ಲಿ ಮೂವರ ಎನ್‌ಕೌಂಟರ್ ಕೇಸ್‌ – ಮೃತರ ಜೊತೆಗೆ ಹೋಗಿದ್ದ ಮಹಿಮಾದಾಸ್ ನಾಪತ್ತೆ

ಚಾಮರಾಜನಗರ: ಮೂವರ ವಿರುದ್ಧ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಲಿ ಸತ್ಯ ಮಾತ್ರ ಬಯಲಾಗಿಲ್ಲ. ಅರಣ್ಯ ಇಲಾಖೆ ಬೇಟೆಯಾಡಿದ್ದವರ ಹತ್ಯೆ ಮಾಡಿದ್ವಿ ಅಂದ್ರೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ದನಗಾಹಿಗಳ ಹತ್ಯೆ ನಡೆಸಲಾಗಿದೆ ಅಂತಿದ್ದಾರೆ. ಇನ್ನೂ ಮೂವರ ಜೊತೆ ಹೋಗಿದ್ದ ಮಹಿಮಾ ದಾಸ್ ಕೂಡ ನಾಪತ್ತೆಯಾಗಿದ್ದಾನೆ. ಇತ್ತ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಸುಳಿವು ಕೂಡ ಸಿಕ್ತಿಲ್ಲ. ಹೌದು. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಮೂರು ಜನರ ಶೂಟೌಟ್ …

Read More »

ಮಹಾನಗರ ಪಾಲಿಕೆ ನಿರ್ಲಕ್ಷೃಕ್ಕೆ ತಕ್ಕ ಪಾಠ

ಬೆಳಗಾವಿ :ಕನ್ನಡ ಭಾಷೆ ಪರ ಗಟ್ಟಿ ನಿಲುವಳಿ ಕೈಗೊಳ್ಳಲು ಉದ್ದೇಶ ಪೂರಕವಾಗಿಯೇ ನಿರ್ಲಕ್ಷೃ ಮಾಡುತ್ತಿರುವ ಮಹಾನಗರ ಪಾಲಿಕೆ ಆಡಳಿತ ಮಂಡಳಿ ವಿರುದ್ಧ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಎಚ್ಚರಿಕೆ ನೀಡಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ಪರ ಸಂಘಟನೆಗಳ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ,ಗಡಿ ವಿಷಯದಲ್ಲಿ ಪಕ್ಷ, ರಾಜಕೀಯ ವಿಷಯ ಮುಖ್ಯವಲ್ಲ. ನಾಡಿಗೆ ಬದ್ಧರಾಗಿ ಆಡಳಿತ …

Read More »

ಅನಧಿಕೃತ ಮೋಟಾರ್, ಪೈಪ್ ತೆರವುಗೊಳಿಸಿ

ಗೋಕಾಕ: ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪೈಪ್‌ಲೈನ್ ಹಾಗೂ ಮೋಟಾರ್‌ಗಳನ್ನು ರೈತರು ಕೂಡಲೇ ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪೊಲೀಸ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮವಹಿಸಲಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಸಿದರು. ಗೋಕಾಕ ತಾಲೂಕಿನ ಕಪರಟ್ಟಿ ಕ್ರಾಸ್ ಬಳಿ ಗುರುವಾರ ಘಟಪ್ರಭಾ ಬಲದಂಡೆ ಕಾಲುವೆ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಸಭೆಯಲ್ಲಿ ಮಾತನಾಡಿ, ಕಾಲುವೆ ಕೊನೆಯ ಭಾಗದ ರೈತರಿಗೂ ಸಮರ್ಪಕವಾಗಿ ನೀರು ತಲುಪಿಸುವ ಅಗತ್ಯವಿದೆ. ಎಲ್ಲ …

Read More »