Breaking News

ರಾಜ್ಯದ ವಿವಿಧ ಜಿಲ್ಲಾ ಕೋರ್ಟ್‌ಗಳಿಗೆ ಹುಸಿ ಬಾಂಬ್ ಬೆದರಿಕೆ

Spread the love

ಬೀದರ್/ಚಾಮರಾಜನಗರ/ಬಾಗಲಕೋಟೆ: ರಾಜ್ಯದ ವಿವಿಧ ಜಿಲ್ಲೆಗಳ ನ್ಯಾಯಾಲಯಗಳಿಗೆ ಹುಸಿ ಬಾಂಬ್ ಬೆದರಿಕೆ ಮೇಲ್ ಬಂದಿದೆ.

ಇಂದು (ಜೂ.27) ಹಾವೇರಿ, ಧಾರವಾಡ, ಕೊಡಗು, ಬೀದರ್, ಬಾಗಲಕೋಟೆ ಹಾಗೂ ಚಾಮರಾಜನಗರದ ಜಿಲ್ಲಾ ನ್ಯಾಯಾಲಯಗಳಿಗೆ ಹುಸಿ ಬಾಂಬ್ ಬೆದರಿಕೆ ಮೇಲ್ ಬಂದಿದೆ.

ಬೀದರ್ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಹಾಗೂ ತಹಶೀಲ್ದಾರ್ ಕಚೇರಿಯ ಇ-ಮೇಲ್‌ಗೆ ಹುಸಿ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಈ ಹಿನ್ನೆಲೆ ಬೀದರ್ ಪೊಲೀಸರು ಹೈ ಅಲರ್ಟ್ ಆಗಿದ್ದು, ಮಾರ್ಕೆಟ್ ಪೊಲೀಸರಿಂದ ನ್ಯಾಯಾಲಯದಲ್ಲಿ ತಪಾಸಣೆ ಮಾಡಲಾಗುತ್ತಿದೆ. ಜೊತೆಗೆ ಸ್ಥಳಕ್ಕೆ ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರೀಯ ದಳದಿಂದ ತೀವ್ರ ತಪಾಸಣೆ ಮಾಡಲಾಗುತ್ತಿದೆ. ಸದ್ಯ ಪೊಲೀಸರು ಹುಸಿ ಬಾಂಬ್ ಕರೆಯಾ? ಅಥವಾ ನಿಜವೊ? ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

ಶುಕ್ರವಾರ (ಜೂ.26) ಸಂಜೆ 7 ಗಂಟೆಗೆ ಇಮೇಲ್ ಸಂದೇಶ ಬಂದಿದೆ. ಇಂದು 11 ಗಂಟೆಗೆ ರೆಕಾರ್ಡ್ ರೂಂನಲ್ಲಿರುವ ಕಂಪ್ಯೂಟರ್‌ನಲ್ಲಿ ಜಿಲ್ಲಾ ನ್ಯಾಯಾಲಯದ ಅಧಿಕೃತ ಇ-ಮೇಲ್ ಚೆಕ್ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಆತಂಕದಲ್ಲಿ ಕೋರ್ಟ್‌ನಿಂದ ವಕೀಲರು ಹಾಗೂ ಸಾರ್ವಜನಿಕರು ಹೊರಬಂದಿದ್ದಾರೆ.

ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ ಮೇಲ್ ಬಂದಿದ್ದು, ಸಿಲಿಕಾನ್ ಡೈನಾಮೈಟ್ ಬಾಂಬ್‌ಗಳನ್ನು ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. durga.thevidiya.stalin@atomicmail.io ಎಂಬ ಅನುಮಾನಾಸ್ಪದ ಐಡಿಯಿಂದ ಮೇಲ್ ಬಂದಿದೆ. ರೆಕಾರ್ಡ್ ರೂಮ್‌ನಲ್ಲಿ ಮೂರು ಬಾಂಬ್ ಹಾಗೂ ಮೊದಲ ಮಹಡಿಯ ಇ-ಸೇವಾಕೇಂದ್ರದಲ್ಲಿ ಎರಡು ಬಾಂಬ್ ಇಡಲಾಗಿದ್ದು, ಟೈಮ್ ಬಾಂಬ್ ಮಧ್ಯಾಹ್ನ 2:10ಕ್ಕೆ ಬ್ಲಾಸ್ಟ್ ಆಗಲಿದೆ ಎಂದು ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ. ನಕಲಿ ಡೊಮೇನ್ ಆದರೂ ಕೂಡ ಜಿಲ್ಲಾ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ಕೋರ್ಟ್ ಆವರಣ, ಜಡ್ಜ್ ಹಾಲ್ ಹಾಗೂ ವಿವಿಧ ಕೊಠಡಿ ಸೇರಿ ಇಡೀ ಕೋರ್ಟ್ ತಪಾಸಣೆ ನಡೆಸಿದ್ದಾರೆ.

ಇನ್ನೂ ಚಾಮರಾಜನಗರ ಜಿಲ್ಲಾ ಕೋರ್ಟ್‌ಗೆ ಮತ್ತೇ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಜಿಲ್ಲಾ ನ್ಯಾಯಾಲಯದ ಅಧಿಕೃತ ಇಮೇಲ್‌ಗೆ ಬೆದರಿಕೆ ಬಂದಿದ್ದು, ಪೊಲೀಸರು ತಪಾಸಣೆ ನಡೆಸಿದ್ದಾರೆ. ಇನ್ನೂ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಬೀಡುಬಿಟ್ಟಿದ್ದು, ಕೋರ್ಟ್ ಆವರಣ ತಪಾಸಣೆ ಮಾಡಲಾಗಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ