ಬೆಳಗಾವಿ: ಬೆಳಗಾವಿ ಚೆನ್ನಮ್ಮವೃತ್ತದಲ್ಲಿ ಪ್ರತಿಮೆ ಬಳಿಯಿರುವ ಕನ್ನಡ ಧ್ವಜ ಕಂಬ ಇದ್ದಕ್ಕಿದ್ದಂತೆ ಕಿರಿದಾದ ಘಟನೆ ಹಲವು ಅನುಮಾನಕ್ಕೆ ಕಾರಣವಾಗಿತ್ತು. ಇದು ಕಿಡಿಗೇಡಿಗಳ ಕೃತ್ಯವಿರಬೇಕು ಎಂಬ ಶಂಕೆ ಮೂಡಿತ್ತು. ಆದರೆ ಇದೀಗ ಕಬ್ಬಿನ ವಾಹನ ಡಿಕ್ಕಿಯಾಗಿ ಧ್ವಜ ಕಂಭಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಚೆನ್ನಮ್ಮನ ಪ್ರತಿಮೆ ಬಳಿಯಿರುವ ಕನ್ನಡ ಧ್ವಜ ಕಂಬ ರಾತ್ರಿ ಬೆಳಗಾಗುವಷ್ಟರಲ್ಲಿ ಕಿರಿದಾಗಿದ್ದು, ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಕಿಡಿಗೇಡಿಗಳು ಕಂಭವನ್ನು ಕತ್ತರಿಸಿ ಅಪಮಾನ ಮಾಡಿದ್ದಾರೆ ಎಂಬ …
Read More »ಧರ್ಮೇಗೌಡರ ಹಠಾತ್ ನಿಧನ; ಸಹಕಾರಿ ಕ್ಷೇತ್ರವೂ ಬಡವಾಗಿದೆ; ಸಂತಾಪ ಸೂಚಿಸಿದ ಸಚಿವ ರಮೇಶ್ ಜಾರಕಿಹೊಳಿ
ಬೆಂಗಳೂರು(ಡಿ.29): ಕರ್ನಾಟಕ ವಿಧಾನಪರಿಷತ್ತಿನ ಉಪಸಭಾಪತಿಯಾಗಿದ್ದ ಎಸ್ ಎಲ್ ಧರ್ಮೇಗೌಡ ರ ಹಠಾತ್ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಜ್ಜನ ವ್ಯಕ್ತಿಯಾಗಿದ್ದ ಧರ್ಮೇಗೌಡ ರು ಬೀರೂರು ಕ್ಷೇತ್ರದ ಶಾಸಕರಾಗಿಯೂ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಸಹಕಾರಿ ರಂಗದ ಹಿರಿಯ ಧುರೀಣರಾಗಿದ್ದರು. ಇತ್ತೀಚಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಉಪ ಸಭಾಪತಿಗಳಾಗಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೂಕ್ಷ್ಮ ಮನಸ್ಸಿನ ರಾಜಕಾರಿಣಿಯನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ …
Read More »ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಎಂಇಎಸ್ ಯುವ ಮೋರ್ಚಾ ಪ್ರತಿಭಟನೆ, ಪೊಲೀಸರೊಂದಿಗೆ ಜಟಾಪಟಿ
ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿರುವ ಕನ್ನಡಪರ ಸಂಘಟನೆಗಳ ಹೋರಾಟಗಾರರು, ಧ್ವಜವನ್ನು ತೆರವುಗೊಳಿಸದೇ ಅಲ್ಲಿಯೇ ಮುಂದುವರಿಸಬೇಕು ಎಂದು ಧರಣಿ ಮುಂದುವರಿಸಿದ್ದಾರೆ.. ಆದರೆ ಇನ್ನೊಂದೆಡೆ ಎಂಇಎಸ್ ಯುವ ಸಂಘಟನೆಯವರು ಧ್ವಜ ತೆರವುಗೊಳಿಸಬೇಕು ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಧ್ವಜ ತೆರವುಗೊಳಿಸಿ ಇಲ್ಲವೇ ಪರಿಣಾಮ ಎದುರಿಸಿ ಎಂದು ಸವಾಲು ಎಸೆದಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಪರ ಸಂಘಟನೆಗಳ …
Read More »ಧರ್ಮೇಗೌಡರ ಹಠಾತ್ ನಿಧನ ; ಸಂತಾಪ ಸೂಚಿಸಿದ ಸಚಿವ ರಮೇಶ್ ಜಾರಕಿಹೊಳಿ
ಬೆಂಗಳೂರು : ವಿಧಾನಪರಿಷತ್ತಿನ ಉಪ ಸಭಾಪತಿಯಾಗಿದ್ದ ಎಸ್. ಎಲ್ ಧರ್ಮೇಗೌಡ ರ ಹಠಾತ್ ನಿಧನಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಜ್ಜನ ವ್ಯಕ್ತಿಯಾಗಿದ್ದ ಧರ್ಮೇಗೌಡರು ಬೀರೂರು ಕ್ಷೇತ್ರದ ಶಾಸಕರಾಗಿಯೂ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಸಹಕಾರಿ ರಂಗದ ಹಿರಿಯ ಧುರೀಣರಾಗಿದ್ದರು. ಇತ್ತೀಚಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಉಪ ಸಭಾಪತಿಗಳಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸೂಕ್ಷ್ಮ ಮನಸ್ಸಿನ ರಾಜಕಾರಿಣಿಯನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದು ಸಂತಾಪ …
Read More »ಶಾಂಕಿಗ್ ನ್ಯೂಸ್ : ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ವಿಧಾನಪರಿಷತ್ ಉಪಸಭಾಪತಿ !
ಚಿಕ್ಕಮಗಳೂರು : ಜೆಡಿಎಸ್ ದಿಂದ ವಿಧಾನ ಪರಿಷತ್ ಉಪಸಭಾಪತಿಯಾಗಿದ್ದ ಎಸ್.ಎಲ್.ಧರ್ಮೇಗೌಡ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಡೂರು ತಾಲ್ಲೂಕಿನ ಗುಣಸಾಗರದ ಸಮೀಪ ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಿಗ್ಗೆ ವರದಿಯಾಗಿದ್ದು, ನಾಡಿನ ಜನತೆಯನ್ನು ಬೆಚ್ಚಿ ಬಿಳುವಂತೆ ಮಾಡಿದೆ. ಈಚೆಗೆ ವಿಧಾನ ಪರಿಷತ್ ನಲ್ಲಿ ಸಭಾಪತಿ ಸ್ಥಾನದಲ್ಲಿ ಕುಳಿತ ವೇಳೆ ಕಾಂಗ್ರೆಸ್ ನಾಯಕರು ಎಳೆದುಕೊಂಡು ಹೊರ ನಡೆದಿದ್ದರು. ಅಲ್ಲಿ ನಡೆದ ಗಲಾಟೆಯಿಂದ ನೊಂದು ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತಿದ್ದರು ಖಚಿತ …
Read More »ಡಿ. 31ರೊಳಗೆ ಐಟಿಆರ್ ಫೈಲಿಂಗ್ ಮಾಡದಿದ್ದಲ್ಲಿ 10,000 ರೂ. ದಂಡ
ಈ ವರ್ಷ ಡಿಸೆಂಬರ್ 31ನೇ ತಾರೀಕು ಆದಾಯ ತೆರಿಗೆಯ ಐಟಿಆರ್ ಫೈಲಿಂಗ್ ಗಡುವು ಮುಕ್ತಾಯ ಆಗುತ್ತದೆ. ಒಂದು ವೇಳೆ ಅಷ್ಟರೊಳಗೆ ಫೈಲಿಂಗ್ ಆಗಲಿಲ್ಲ ಅಂದರೆ ಏನಾಗುತ್ತದೆ ಗೊತ್ತಾ? ಕಳೆದ ವರ್ಷಕ್ಕೂ ಈ ಸಲಕ್ಕೂ ವ್ಯತ್ಯಾಸ ಇದೆ. ಕಳೆದ ವರ್ಷದಲ್ಲಿ ಏನಾದರೂ ಗಡುವು ಮುಗಿದ ಕೆಲ ತಿಂಗಳ ನಂತರ ಫೈಲಿಂಗ್ ಮಾಡಿದರೂ ಅದಕ್ಕೆ ದಂಡ ಅಂತ 5000 ರುಪಾಯಿ ಹಾಕಲಾಗುತ್ತಿತ್ತು. ಈ ವರ್ಷ ಆ ಮೊತ್ತ 10,000 ರುಪಾಯಿ ಆಗಿದೆ. ಅಂದ …
Read More »ಬೆಂಗಳೂರಿನ ಮೂವರಿಗೆ ರೂಪಾಂತರ ಸೋಂಕು ದೃಢ: ಸಚಿವ ಡಾ.ಸುಧಾಕರ್ ಜ. 1 ರಿಂದ ಶಾಲಾ ಆರಂಭಕ್ಕೆ ತೊಂದರೆ ಇಲ್ಲ!!
ಬೆಂಗಳೂರು: ಇಂಗ್ಲೆಂಡ್ನಲ್ಲಿ ಪತ್ತೆಯಾದ ಮ್ಯೂಟಂಟ್ ಕೊರೊನಾ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, 6 ಮಂದಿಯಲ್ಲಿ ರೂಪಾಂತರ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಬೆಂಗಳೂರಿನಲ್ಲಿ ಮೂವರಿಗೆ ವೈರಸ್ ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 10 ಲ್ಯಾಬ್ ಇದೆ. ಇಂಗ್ಲೆಂಡ್ನಿಂದ ಬಂದ 1614 ಜನರ ಪೈಕಿ 26 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜೆನೆಟಿಕ್ ಸೀಕ್ವೆನ್ಸಿಂಗ್ ಆದ …
Read More »ಔಷಧಿ ಬದಲು ಕ್ರಿಮಿನಾಶಕ ಕುಡಿದು ಗ್ರಾ.ಪಂ ಅಭ್ಯರ್ಥಿ ಸಾವು..!
ಆತ ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ವಿಧಿಯ ಬರಹವೇ ಬೇರೆಯಾಗಿತ್ತು. ಇನ್ನೇನು ಗೆದ್ದೇ ಗೆಲ್ಲುತ್ತೇನೆ ಎಂದುಕೊಂಡಿದ್ದ ಆತ ಸಾವಿಗೀಡಾಗಿದ್ದಾರೆ. ಈ ಘಟನೆ ನಡೆದಿರೋದು ಬಂಟ್ವಾಳ ತಾಲೂಕಿನ ಕಾವಳಮುಡೂರು ಗ್ರಾಮದಲ್ಲಿ ಈ ಗ್ರಾಮದ ಅರ್ಗತ್ಯಾರು ನಿವಾಸಿ ಜಯಂತ ಪ್ರಭು ಮೃತ ದುರ್ದೈವಿ. ಹೌದು, ಬಾಯಿ ಹುಣ್ಣಾಗಿದೆ ಎಂದು ಅದಕ್ಕೆ ಸಂಬಂಧಪಟ್ಟ ಔಷಧಿ ಬದಲು ಖಾಲಿ ಬಾಟಲಿಯಲ್ಲಿ ತುಂಬಿಟ್ಟಿದ್ದ ಕ್ರಿಮಿನಾಶಕ ಕುಡಿದು ಸಾವನ್ನಪ್ಪಿದ್ದಾರೆ. ಆ ಕ್ರಿಮಿನಾಶಕವನ್ನು ಅಲ್ಪ ಪ್ರಮಾಣದಲ್ಲಿ …
Read More »ಗ್ರಾ ಪಂಚುನಾವಣೆಯ ಮತ ಎಣಿಕೆ ನಗರದಲ್ಲಿ ಸಾರ್ವಜನಿಕ ಸಂಚಾರ ಮಾರ್ಗಗಳನ್ನು ಬದಲಾಯಿಸಲಾಗಿದೆ
ಬೆಳಗಾವಿ – ಗ್ರಾಮ ಪಂಚಾಯತಿಗಳ ಚುನಾವಣೆಯ ಮತ ಎಣಿಕೆ ಕಾರ್ಯವು ಬುಧವಾರ ನಗರದ ಬಿ.ಕೆ. ಮಾಡೆಲ್ ಹೈಸ್ಕೂಲ್‌ನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕ ಸಂಚಾರ ಮಾರ್ಗಗಳನ್ನು ಬದಲಾಯಿಸಲಾಗಿದೆ. ಅಂದು ಬೆಳಗ್ಗೆ 6 ಗಂಟೆಯಿಂದ ಮತಗಳ ಎಣಿಕೆಯ ಕಾರ್ಯ ಮುಗಿದು, ಮತ ಎಣಿಕೆಗೆ ಆಗಮಿಸಿದ ಅಭ್ಯರ್ಥಿ ಹಾಗೂ ಕಾರ್ಯಕರ್ತರು ನಿರ್ಗಮಿಸುವರೆಗೂ ಮಾರ್ಗ ಬದಲಾವಣೆಯಾಗಲಿದೆ. ಚುನಾವಣೆ ಮತ ಎಣಿಕೆ ಕರ್ತವ್ಯದ ಮೇಲಿರುವ ವಾಹನಗಳನ್ನು ಹೊರತು ಪಡಿಸಿ ಇನ್ನುಳಿದ ಎಲ್ಲ ಮಾದರಿಯ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ …
Read More »ಅಂಧ ವಿದ್ಯಾರ್ಥಿನಿ ಗೌರಮ್ಮ ಈ ಅಂಧ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಸಣ್ಣ ಸಹಾಯ ಮಾಡಿ
ರಾಣೆಬೆನ್ನೂರು – ರಾಣೇಬೆನ್ನೂರು ನಗರದ ಅಂಧರ ಜೀವ ಬೆಳಕು ಸಂಸ್ಥೆಯ ಅಂಧ ವಿದ್ಯಾರ್ಥಿನಿ ಗೌರಮ್ಮ ಬಾರಕೇರ ಇಲ್ಲಿನ ಸರಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಇತ್ತೀಚಿಗೆ ಜರುಗಿದ ಪದವಿ ಪರೀಕ್ಷೆಯಲ್ಲಿ ಶೇ.80 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾಳೆ. ಮೂಲತಃ ಬೀಳಗಿ ತಾಲೂಕು ಯರಕಲ್ ನವಳಾದ ಈ ವಿದ್ಯಾರ್ಥಿನಿ ಈಚೆಗೆ ತನ್ನ ತಾಯಿಯನ್ನೂ ಕಳೆದುಕೊಂಡಿದ್ದಾಳೆ. ಓದಿನಲ್ಲಿ ತುಂಬಾ ಆಸಕ್ತಿ ಹೊಂದಿರುವ ಈಕೆ ಆರ್ಥಿಕವಾಗಿ ಕಷ್ಟದಲ್ಲಿದ್ದಾಳೆ. ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ (ಎಂಎ) ಸಮಾಜಶಾಸ್ತ್ರ ವಿಭಾಗಕ್ಕೆ ಪ್ರವೇಶ …
Read More »
Laxmi News 24×7