Breaking News

Uncategorized

ತಮಿಳುನಾಡಿನಲ್ಲಿ’ಮಮತಾ ಬ್ಯಾನರ್ಜಿʼಯನ್ನು ಮದುವೆಯಾದ ‘ಸೋಶಿಯಲಿಸಂʼ

ಚೆನ್ನೈ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಡ ಪಕ್ಷಗಳೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದಿದ್ದರೂ, ಮಮತಾ ಬ್ಯಾನರ್ಜಿ ಎಂಬ ಹೆಸರಿನ ಯುವತಿಯನ್ನು ಸೋಶಿಯಲಿಸಂ ಹೆಸರಿನ ಯುವಕನೋರ್ವ ಮದುವೆಯಾದ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಹೆಸರಿನ ಕಾರಣದಿಂದಾಗಿ ಈ ಮದುವೆ ವಿಚಾರ ರಾಷ್ಟ್ರಾದ್ಯಂತ ಸುದ್ದಿಯಾಗಿದೆ. ವಧು ಪಿ. ಮಮತಾ ಬ್ಯಾನರ್ಜಿ ಇಂಗ್ಲಿಷ್‌ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವ ಕುಟುಂಬದಿಂದ ಬಂದ ವಧುವಿನ ಹೆಸರನ್ನು ಈಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿರುವ …

Read More »

ಕೊರೊನಾದಿಂದ ಸಾವನ್ನಪ್ಪಿದ ತಂದೆಯ ಅಂತ್ಯಕ್ರಿಯೆ ಮಾಡಿದ ಪುತ್ರಿಯರು

ದಾವಣಗೆರೆ: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹವನ್ನು ಕುಟುಂಬಸ್ಥರು ಅಂಬುಲೆನ್ಸ್ ನಲ್ಲೇ ಬಿಟ್ಟುಹೋಗುವ ಪ್ರಕರಣಗಳನ್ನು ನೋಡಿದ್ದೇವೆ. ಕೆಲವರು ಅಪ್ಪನ ಹಣ ಬೇಕು, ಅಪ್ಪ ಬೇಡ ಎಂದವರೂ ಇದ್ದಾರೆ. ಇಂತಹವರ ಮಧ್ಯೆ ಕೋವಿಡ್ ನಿಂದ ಮೃತರಾದ ತಂದೆಯ ಶವದ ಅಂತ್ಯಕ್ರಿಯೆಯನ್ನು ಇಬ್ಬರು ಹೆಣ್ಣುಮಕ್ಕಳು ಮಾಡಿ ಜವಾಬ್ದಾರಿ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಗಾಂಧಿ ವೃತ್ತದಲ್ಲಿರುವ ಶಾಸ್ತ್ರೀ ಬೇಕರಿ ಮಾಲೀಕರಾದ ಶ್ರೀಕಂಠ ಅವರು ಕೋವಿಡ್ ನಿಂದ ಬಾಪೂಜಿ ಆಸ್ಪತ್ರೆಯಲ್ಲಿ ಅಸುನೀಗಿದ್ದು, ಅವರ ಇಬ್ಬರು …

Read More »

ಅಕ್ಕನ ಮದುವೆ ವೇದಿಕೆ ಮೇಲೆ ಭಾವನಿಗೇ ಕಿಸ್ ಕೊಟ್ಟ ನಾದಿನಿ! ವೈರಲ್ ಆಯ್ತು ವಿಡಿಯೋ

ಬೆಂಗಳೂರು: ಮದುವೆಯೆಂದರೆ ಅಲ್ಲಿ ಖುಷಿ, ಸಂಭ್ರಮವೆಲ್ಲ ಮಾಮೂಲಿ. ಅದೇ ಖುಷಿಯಲ್ಲಿ ಯಾರಾದರೂ ಒಬ್ಬ ಹೆಣ್ಣು ಮಗಳು ಓಡಿ ಬಂದು ಮದುಮಗನಿಗೇ ಮುತ್ತು ಕೊಟ್ಟುಬಿಟ್ಟರೆ? ಹೌದು. ಇಂತದ್ದೊಂದು ಘಟನೆ ನಿಜವಾಗಿಯೂ ನಡೆದಿದೆ. ಅಲ್ಲೊಂದು ಮದುವೆ ನಡೆಯುತ್ತಿತ್ತು. ನದ ದಂಪತಿಯನ್ನು ವೇದಿಕೆಯಲ್ಲಿ ಕೂರಿಸಿ ಕುಟುಂಬಸ್ಥರು ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಸಂಭ್ರಮದಲ್ಲಿದ್ದರು. ಈ ವೇಳೆ ಫೋಟೋಕ್ಕೆಂದು ದಂಪತಿ ಜತೆ ಕುಳಿತಿದ್ದ ವಧುವಿನ ತಂಗಿ ಒಮ್ಮೆಲೆ ಬಗ್ಗಿ ವರನಿಗೆ ಮುತ್ತು ಕೊಟ್ಟಿದ್ದಾಳೆ. ಇದ್ದಕ್ಕಿದ್ದಂತೆ ನಾದಿನಿ ಈ …

Read More »

ಬೆಳಗಾವಿ ಪೊಲೀಸರು ನಡೆಸಿ, 18 ಜನರನ್ನು ಬಂಧಿಸಿದ್ದಾರೆ.

ಬೆಳಗಾವಿ : ಇಲ್ಲಿನ ಖಂಜರ ಗಲ್ಲಿಯಲ್ಲಿ ನಿನ್ನೆ ರಾತ್ರಿ ಜೂಜು ಅಡ್ಡೆ ಮೇಲೆ ದಾಳಿ ಬೆಳಗಾವಿ ಪೊಲೀಸರು ನಡೆಸಿ, 18 ಜನರನ್ನು ಬಂಧಿಸಿದ್ದಾರೆ. ಜುಬೆರ ಶಕಿಲ ಸುಬೆದಾರ,  ಆರೀಪ ಜಿಲಾನಿ ಖೊತ್ವಾಲ್ , ಅಯಾಜ್ ಬಾಬು ಖತಿಬ್ , ಅಬ್ದುಲ್ ಸಲಾಮ್ ಮೈಬುಸಾಬ ಬಾಳೆಕುಂದ್ರೀ, ಸೊಹೆಲ್ ಅಕ್ತರ ಮುಲ್ಲಾ, ಷರಿಪ್ ದಸ್ಥಗಿರಸಾಬ ಮುಲ್ಲಾ, ಅಬುತಾಲಿಪ್ ಗೌಸ್ ಶೆಕ್, ಆಸಿಪ್ ಯುಸುಪಖಾನ್ ಸಯ್ಯದ, ಆಯೂಬಖಾನ್ ಕರಿಂಖಾನ ಪಠಾಣ , ವಾಸಿಂ ಆಯೂಬ್ ಸೌದಾಗರ್ …

Read More »

ಅಥಣಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಗ್ರಾಪಂ. ಸದಸ್ಯ ಸಾವು

ಅಥಣಿ : ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹತ್ತಿದ ಪರಿಣಾಮ ಗ್ರಾಪಂ. ಸದಸ್ಯ ಸಾವನ್ನಪ್ಪಿದ ಘಟನೆ ನಡೆದಿದೆ. ಶಿರಗುಪ್ಪಿ ಗ್ರಾಮದ ಸೋಮೇಶ್ ಶಿವಾನಂದ ಪಾಟೀಲ ( 32 ) ಮೃತ ಗ್ರಾಪಂ ಸದಸ್ಯ . ಹಳೆ ಮನೆಯ ದುರಸ್ತಿ ಕಾರ್ಯ ನಡೆದಿದ್ದರಿಂದ ಮನೆಯವರೆಲ್ಲ ಬೇರೆ ಮನೆಯಲ್ಲಿ ಇದ್ದರು . ಇವರು ಮಾತ್ರ ಮನೆಯ ಚಾವಣಿಯ ಮೇಲೆ ಮಲಗಿದ್ದರು . ಏಕಾಏಕಿ …

Read More »

ಬಿಜೆಪಿಯವರು ವ್ಯಾಪಾರಸ್ಥರು; ಕೇಂದ್ರ ಸರ್ಕಾರ ಜನರ ರಕ್ತ ಹೀರುವ ಕಾರ್ಯ ಮಾಡುತ್ತಿದೆ- ಉಮಾಶ್ರೀ

ಬನಹಟ್ಟಿ: ತೈಲ ಬೆಲೆ ಹಾಗೂ ಅದರ ಉತ್ಪನ್ನಗಳ ಬೆಲೆಗಳ ಏರಿಕೆಯಿಂದಾಗಿ ದೇಶದ ರೈತರು, ವ್ಯಾಪಾರಸ್ಥರು ಕೂಲಿ ಕಾರ್ಮಿಕರು ದಾರುಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಇವರೆಲ್ಲರ ಮೇಲೆ ಕಾಳಜಿ ಇಲ್ಲ. ಕೇಂದ್ರ ಸರ್ಕಾರದವರು ಸೇವಕರಲ್ಲ, ಅವರು ವ್ಯಾಪಾರಿಗಳು. ಅವರು ಜನರ ರಕ್ತ ಹೀರುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವೆ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರರಾದ ಉಮಾಶ್ರೀ ಆರೋಪಿಸಿದರು. ಅವರು ಶನಿವಾರ ಬನಹಟ್ಟಿಯ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ …

Read More »

ಸತ್ತವರ ಪಟ್ಟಿಯಲ್ಲೆ ಹೆಸರು ದಾಖಲಿಸದೆ ಶವ ನೀಡಿದ ಚಾಮರಾಜನಗರ ಆಸ್ಪತ್ರೆ

ಚಾಮರಾಜನಗರ: ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್‌ ದುರಂತದ ಘಟನೆ ಭಾರಿ ಕೋಲಾಹಲವನ್ನೇ ಸೃಷ್ಟಿಸಿತ್ತು. ಆದರೆ ಈ ದುರಂತ ಮತ್ತೆ ಮರುಕಳಿಸಿದೆ. ಆಕ್ಸಿಜನ್‌ ಕೊರತೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ತಪ್ಪನ್ನು ಮುಚ್ಚಿಹಾಕಲು ರಾತ್ರೋರಾತ್ರಿ ಸಂಬಂಧಿಕರಿಗೆ ಶವ ಕೊಟ್ಟು ಕೈ ತೊಳೆದುಕೊಂಡಿದ್ದಾರೆ ಆಸ್ಪತ್ರೆ ಅಧಿಕಾರಿಗಳು. 36 ವರ್ಷ ವಯಸ್ಸಿನ ಕೊಳ್ಳೇಗಾಲ ತಾಲೋಕು ಮುಡಿಗುಂಡಂ ಗ್ರಾಮದ ಜಯಶಂಕರ್ ಮೃತಪಟ್ಟಿದ್ದು, ಅಚ್ಚರಿಯ ಸಂಗತಿ ಎಂದರೆ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಪಟ್ಟಿಯಲ್ಲಿ ಇವರ ಹೆಸರನ್ನು ಸೇರಿಸಿಲ್ಲ. ಮಧ್ಯರಾತ್ರಿಯೇ ಶವ ತೆಗೆದುಕೊಂಡು …

Read More »

ಪೆಟ್ರೋಲ್, ಡೀಸೆಲ್ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಗೋಕಾಕ್ ನಲ್ಲಿ ನಾಳೆ ಪ್ರತಿಭಟನೆ: ಸತೀಶ ಜಾರಕಿಹೊಳಿ

ಗೋಕಾಕ: ಪೆಟ್ರೋಲ್, ಡೀಸೆಲ್ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಗೋಕಾಕ್ ನಲ್ಲಿ ನಾಳೆ ಪ್ರತಿಭಟನೆ ನಡೆಯಲಿದ್ದು, ನಾನು ಕೂಡ ಭಾಗವಹಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ತಿಳಿಸಿದರು. ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರತಿ ದಿನ ತೈಲ ಬೆಲೆಯನ್ನು ಏರಿಕೆ ಮಾಡುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ, ಪಕ್ಷದಿಂದ ದೇಶಾದ್ಯಂತ ಪ್ರತಿಭಟನೆ ಮಾಡಲಾಗುತ್ತಿದೆ. …

Read More »

ಬಡಪತ್ರಕರ್ತನ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ….?

ಕೋವಿಡ್ ಗೆ ಬಲಿಯಾದ ಹಿರಿಯ ಪತ್ರಕರ್ತ ಸಂಜೀವಕುಮಾರ ನಾಡಿಗೇರ ಕುಟುಂಬಕ್ಕೆ ಒಂದು ಲಕ್ಷ ರೂ. ವೈಯಕ್ತಿಕ ಧನಸಹಾಯ       ಬೆಳಗಾವಿ: ಎಷ್ಟೇ ಅಧಿಕಾರ, ಶ್ರೀಮಂತಿಕೆ ಇದ್ದರೂ ಬಡವರ ಸಂಕಷ್ಟಕ್ಕೆ ಮಿಡಿಯುವ ಮನಸ್ಸಿರುವುದು ಮುಖ್ಯ. ಹೃದಯ ಶ್ರೀಮಂತಿಕೆ, ಉದಾರ ಮನೋಭಾವದವರಲ್ಲಿ ಮಾತ್ರ ಇಂತಹ ಗುಣ ಕಾಣಲು ಸಾಧ್ಯ. ಇಂತಹ ಅಪರೂಪದ ರಾಜಕಾರಣಿಗಳ ಸಾಲಿನಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತೊಮ್ಮೆ ಸಾಬೀತುಪಡಿಸಿದರು. ಹಾದು, ಪತ್ರಿಕಾರಂಗದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ …

Read More »

ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅವರ ಪ್ರವಾಸದ ವಿವರ ಇಂತಿದೆ. ಸತೀಶ ಜಾರಕಿಹೊಳಿ….

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಜೂನ್ 11 ರಿಂದ ಜೂ.14 ರವರೆಗೂ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅವರ ಪ್ರವಾಸದ ವಿವರ ಇಂತಿದೆ.   ಜೂ.11 ಹಾಗೂ 13 ರಂದು ಗೋಕಾಕನಲ್ಲಿ ಇರಲಿದ್ದಾರೆ. 14 ರಂದು ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆ ಹಾಗೂ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.   14 ರಂದು ಮಧ್ಯಾಹ್ನ 12ಕ್ಕೆ ಅಥಣಿ ತಾಲೂಕು ಆಸ್ಪತ್ರೆ, ಮಧ್ಯಾಹ್ನ 2 ಗಂಟೆಗೆ ಅಥಣಿ ತಾಲೂಕಿನ ಐನಾಪುರ, …

Read More »