Breaking News

ರಾಷ್ಟ್ರೀಯ

ಬಸ್ ಡ್ರೈವರ್ ಆಗಿದ್ದ ಯಶ್ ತಂದೆ ಈಗ ನಿರ್ಮಾಪಕ;

ರಾಕಿಂಗ್ ಸ್ಟಾರ್ ಯಶ್ ಅವರ ತಂದೆ-ತಾಯಿ ಅರುಣ್ ಕುಮಾರ್ ಮತ್ತು ಪುಷ್ಪ ಅವರು ‘ಪಿಎ’ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಪೃಥ್ವಿ ಅಂಬಾರ್ ನಟಿಸುವ ಮೊದಲ ಸಿನಿಮಾಗೆ ಇವರು ಬಂಡವಾಳ ಹೂಡಲಿದ್ದಾರೆ ಎನ್ನಲಾಗಿದೆ. ಯಶ್ ಅವರು ಬಾಲಿವುಡ್‌ನ ‘ರಾಮಾಯಣ’ ಚಿತ್ರದ ನಿರ್ಮಾಪಕರಾಗಿದ್ದಾರೆ. ಈಗ ಅವರ ಕುಟುಂಬದವರೂ ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ (Yash) ಅವರು ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಈಗ ಕೇವಲ ನಟ ಮಾತ್ರ ಅಲ್ಲ ನಿರ್ಮಾಪಕ …

Read More »

ಲಾಂಗ್ ವೀಕೆಂಡ್​ಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ಸೌಲಭ್ಯ

ಹುಬ್ಬಳ್ಳಿ, ಏಪ್ರಿಲ್ 29: ಬಸವ ಜಯಂತಿ, ಕಾರ್ಮಿಕರ ದಿನಾಚರಣೆ ರಜೆ ಹಾಗೂ ವಾರಾಂತ್ಯದ ರಜೆಗಳ (Weekend Holidays) ಹಿನ್ನೆಲೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್​ಗಳ ಸೇವೆ (NWKRTC Special Buses) ಕಲ್ಪಿಸಲು ಮುಂದಾಗಿದೆ. ಈ ವಿಚಾರವಾಗಿ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ಹೆಚ್ಚುವರಿ ಬಸ್​ ಸಂಚಾರದ ಮಾಹಿತಿ ನೀಡಿದೆ. ಬೆಂಗಳೂರು (Bengalru) ಹಾಗೂ ಇತರ ಪ್ರಮುಖ ಸ್ಥಳಗಳಿಂದ ವಿಶೇಷ ಬಸ್​​ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಪ್ರಕಟಣೆ ತಿಳಿಸಿದೆ. 30 …

Read More »

ಜನಿವಾರ, ಮಾಂಗಲ್ಯ ತೆಗೆಯಿಸದೇ ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಲು ಅನುವು : ಕೇಂದ್ರ ಸಚಿವ ವಿ ಸೋಮಣ್ಣ

ಜನಿವಾರ, ಮಾಂಗಲ್ಯ ತೆಗೆಯಿಸದೇ ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಲು ಅನುವು : ಕೇಂದ್ರ ಸಚಿವ ವಿ ಸೋಮಣ್ಣ ಬೆಂಗಳೂರು : ದಿನಾಂಕ ಇಂದು (28), 29 ಮತ್ತು 30 ಏಪ್ರಿಲ್ 2025ರಂದು ರೈಲ್ವೆ ಇಲಾಖೆಯಲ್ಲಿ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿದೆ. ಇತರ ಎಲ್ಲಾ ಪರೀಕ್ಷಾ ನಿಯಮವನ್ನು ಪಾಲಿಸಿ, ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಸೂಚಿಸಲಾಗಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಅವರು ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ …

Read More »

ಪೊಲೀಸ್ ಎನ್‌ಕೌಂಟರ್ ನಲ್ಲಿ ಸಾವನ್ನಪ್ಪಿದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಕೇಸ್ ನ ಆರೋಪಿಯ ಮೃತದೇಹವನ್ನು ಸಮಾಧಿ ಮಾಡಲು ಹೈಕೋರ್ಟ್​ ಅನುಮತಿ ನೀಡಿದೆ.

ಬೆಂಗಳೂರು: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದು ಪೊಲೀಸ್ ಎನ್‌ಕೌಂಟರ್‌ ನಲ್ಲಿ ಸಾವನ್ನಪ್ಪಿದ ಬಿಹಾರದ ವಲಸೆ ಕಾರ್ಮಿಕ ರಿತೇಶ್ ಕುಮಾರ್ ಎಂಬಾತನ ಮೃತದೇಹವನ್ನು ಸಮಾಧಿ ಮಾಡಲು ಹೈಕೋರ್ಟ್ ಇಂದು ಅನುಮತಿ ನೀಡಿತು. ರಿತೇಶ್ ಕುಮಾರ್ ಮೃತದೇಹ ಇಡೀ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಮೃತದೇಹವನ್ನು ದಹನ ಮಾಡದಂತೆ ಹಾಗೂ ಸಂರಕ್ಷಿಸಿಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಪಿಯುಸಿಎಲ್ ಸಂಘಟನೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ …

Read More »

ಲೋಕಾಯುಕ್ತ ಅಧಿಕಾರಿಗಳ ಭರ್ಜರಿ ಬೇಟೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ, ಉಪಾಧ್ಯಕ್ಷ, ಮೂವರು ಸದಸ್ಯರು

ಹಾವೇರಿ: ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಇ-ಸ್ವತ್ತು ಉತಾರ ಪೂರೈಸಲು ಲಂಚ ಸ್ವೀಕಾರ ಮಾಡುತ್ತಿದ್ದ ಗ್ರಾಮ ಪಂಚಾಯತ್​ ಪಿಡಿಒ ಸಹಿತ ಗ್ರಾಮ ಪಂಚಾಯತ್​ ಉಪಾಧ್ಯಕ್ಷ ಹಾಗೂ ಗ್ರಾಮ ಪಂಚಾಯತ್​ನ ಮೂವರು ಸದಸ್ಯರನ್ನು ಬಂಧಿಸಿದ್ದಾರೆ. ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮ ಪಂಚಾಯತ್ ಪಿಡಿಒ, ಉಪಾಧ್ಯಕ್ಷ ಹಾಗೂ ಗ್ರಾಮ ಪಂಚಾಯತ್​ನ ಮೂವರು ಸದಸ್ಯರು ಲೋಕಾಯುಕ್ತದಿಂದ‌ ಬಂಧಿತರಾದ ಆರೋಪಿಗಳು. ಪಿಡಿಒ ಕೆ.ಮಂಜುನಾಥ, ಉಪಾಧ್ಯಕ್ಷ ಮಲ್ಲಪ್ಪ ಬೂದಿಹಾಳ, ಗ್ರಾಮ ಪಂಚಾಯತ್ ಸದಸ್ಯರಾದ …

Read More »

ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸುವ ಬಿಜೆಪಿಗರಿಗೆ ಮಾನ ಮರ್ಯಾದೆಯಿಲ್ಲ…

ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸುವ ಬಿಜೆಪಿಗರಿಗೆ ಮಾನ ಮರ್ಯಾದೆಯಿಲ್ಲ… ಪೆಹಲ್’ಗಾಮ್ ಸುರಕ್ಷತೆ ವೈಫಲ್ಯ ಪ್ರಶ್ನಿಸಿದ್ದಕ್ಕೆ ನನ್ನ ವಿರುದ್ಧ ಅಪಪ್ರಚಾರ… ಬಿಜೆಪಿಗರ ಗೊಡ್ಡು ಬೆದರಿಕೆ – ಅಪಪ್ರಚಾರಕ್ಕೆ ಹೆದರುವವರು ನಾವಲ್ಲ; ಬೆಳಗಾವಿಯಲ್ಲಿ ಸಿಎಂ ಸಿದ್ಧರಾಮಯ್ಯ ದೇಶದಲ್ಲಿ ಎಲ್ಲದರ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದ್ದು, ರಾಜ್ಯದಲ್ಲಿ ಜನಾಕ್ರೋಶ ಯಾತ್ರೆ ನಡೆಸುವ ಬಿಜೆಪಿಗರಿಗೆ ಮಾನ ಮರ್ಯಾದೆಯೇ ಇಲ್ಲ. ಪೆಹಲ್’ಗಾಮ್’ನಲ್ಲಿ ಸುರಕ್ಷತೆಯ ವೈಫಲ್ಯವನ್ನು ಪ್ರಶ್ನಿಸಿದಾಗ ಸಿಎಂ ಸಿದ್ಧರಾಮಯ್ಯ ವಿರುದ್ಧ ಬಿಜೆಪಿಗರು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಗರ …

Read More »

ಧಾರವಾಡದಲ್ಲಿ ತಡ ರಾತ್ರಿ ವರುಣನ ಆರ್ಭಟ, ಗಾಳಿ‌ಮಳೆಗೆ ನೆಲ್ಲಕುರುಳಿದ ಬಿದ್ದ ಮರ…ಧಾರವಾಡ ಉಪ್ಪಿನ ಬೆಟಗೇರಿ ರಸ್ತೆಯ ಘಟನೆ, ತಡರಾತ್ರಿ ವಾಹನ ಸವಾರರ ಪರದಾಟ

ಧಾರವಾಡದಲ್ಲಿ ತಡ ರಾತ್ರಿ ವರುಣನ ಆರ್ಭಟ, ಗಾಳಿ‌ಮಳೆಗೆ ನೆಲ್ಲಕುರುಳಿದ ಬಿದ್ದ ಮರ…ಧಾರವಾಡ ಉಪ್ಪಿನ ಬೆಟಗೇರಿ ರಸ್ತೆಯ ಘಟನೆ, ತಡರಾತ್ರಿ ವಾಹನ ಸವಾರರ ಪರದಾಟ ಧಾರವಾಡದಲ್ಲಿ ತಡ ರಾತ್ರಿ ವರುಣನ‌ ರಾಯ ಅರ್ಭಟ ತೋರಿದ್ದು, ರೈತರ ಮೊಗದಲ್ಲಿ ಮಳೆರಾಯ ಮಂದಹಾಸ ಮೂಡಿಸಿದ್ರೆ ವಾಹನ ಸವಾರರು ಕೆಲಕಾಲ‌ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ‌ಬಿರುಗಾಳಿ ಸಮೇತ ಮಳೆಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು, ವಾಹನ ಸವಾರರು ಪರದಾಡಿದ್ದಾರೆ.‌ ಹೌದು ಕಳೆದ ಭಾನುವಾರ ತಡ ರಾತ್ರಿ …

Read More »

ಶಾಸಕ ಬಸನಗೌಡ ಪಾಟೀಲ, ಯತ್ನಾಳ ವಿರುದ್ಧ ಒಮ್ಮೆ ಸ್ಪರ್ಧಿಸುವ ಇರಾದೆ ಇದೆ:ಸಚಿವ ಶಿವಾನಂದ ಪಾಟೀಲ

ಶಾಸಕ ಬಸನಗೌಡ ಪಾಟೀಲ, ಯತ್ನಾಳ ವಿರುದ್ಧ ಒಮ್ಮೆ ಸ್ಪರ್ಧಿಸುವ ಇರಾದೆ ಇದೆ:ಸಚಿವ ಶಿವಾನಂದ ಪಾಟೀಲ ವಿಜಯಪುರ : ಕೆಲ ದಿನಗಳ ಹಿಂದೆ ಅಣ್ಣ ಬಸವಣ್ಣನವರ ಕುರಿತು ಅಪಮಾನಕರ ರೀತಿ ಮಾತನಾಡಿದ್ದ ಹುಚ್ಚು ಮನಸ್ಥಿತಿಯ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇದೀಗ ಇಸ್ಲಾಂ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಪ್ರವಾದಿ ಮಹಮ್ಮದ್ ಪೈಗಂಭರ ಕುರಿತು ಅವಮಾನಕರ ಮಾತನಾಡಿದ್ದಾರೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ …

Read More »

ಹೊಲದಲ್ಲಿ ಪೂಜೆಗೆ ತೆರಳಿದ್ದ ಮಗ ಸಿಡಿಲಿಗೆ ಬಲಿ

ರಾಯಚೂರು: ಸಿಡಿಲು ಬಡಿದು‌ ಮಗ ಸಾವನ್ನಪ್ಪಿ, ತಾಯಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಕೆ.ಗುಡದಿನ್ನಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಸಾಯಣ್ಣ(55) ಸಿಡಿಲಿಗೆ ಬಲಿಯಾದ ವ್ಯಕ್ತಿಯೆಂದು ಗುರುತಿಸಲಾಗಿದೆ. ಅವರ ತಾಯಿ ಲಕ್ಷ್ಮಮ್ಮ ಗಾಯಗೊಂಡಿದ್ದಾರೆ. ಅಮಾವಾಸ್ಯೆ ಹಿನ್ನೆಲೆಯಲ್ಲಿ ತಾಯಿ, ಮಗ ಜಮೀನಿನಲ್ಲಿನ ತಾಯಮ್ಮನ ಗುಡಿಗೆ ಪೂಜೆ ಸಲ್ಲಿಸಲು ಹೋಗಿದ್ದರು. ಈ ಸಮಯದಲ್ಲಿ ಸಿಡಿಲು ಅಪ್ಪಳಿಸಿ ಸಾಯಣ್ಣ ಗುಡಿಯಲ್ಲೇ ಸಾವನ್ನಪ್ಪಿದ್ದಾರೆ. ತಾಯಿ 70 ವರ್ಷದ ಲಕ್ಷ್ಮಮ್ಮಗೆ ಗಂಭೀರ ಗಾಯಗಳಾಗಿದ್ದು, ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. …

Read More »

ರಿಕ್ಕಿ ರೈ ಮೇಲಿನ ಗುಂಡಿನ ದಾಳಿ: ವಿಚಾರಣೆಗೆ ಹಾಜರಾದ ಮುತ್ತಪ್ಪ ರೈ ಎರಡನೇ ಪತ್ನಿ

ರಾಮನಗರ: ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣದ ಎರಡನೇ ಆರೋಪಿಯಾಗಿರುವ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ಅವರು ವಿಚಾರಣೆಗಾಗಿ ಬಿಡದಿ ಪೊಲೀಸ್ ಠಾಣೆಗೆ ಭಾನುವಾರ ಹಾಜರಾಗಿದ್ದರು. ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಅನುರಾಧ ಅವರು ಎ2 ಆರೋಪಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಭಾನುವಾರ ತಮ್ಮ ವಕೀಲರ ಜೊತೆ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಬಿಡದಿ …

Read More »