ಧಾರವಾಡದಲ್ಲಿ ತಡ ರಾತ್ರಿ ವರುಣನ ಆರ್ಭಟ, ಗಾಳಿಮಳೆಗೆ ನೆಲ್ಲಕುರುಳಿದ ಬಿದ್ದ ಮರ…ಧಾರವಾಡ ಉಪ್ಪಿನ ಬೆಟಗೇರಿ ರಸ್ತೆಯ ಘಟನೆ, ತಡರಾತ್ರಿ ವಾಹನ ಸವಾರರ ಪರದಾಟ
ಧಾರವಾಡದಲ್ಲಿ ತಡ ರಾತ್ರಿ ವರುಣನ ರಾಯ ಅರ್ಭಟ ತೋರಿದ್ದು, ರೈತರ ಮೊಗದಲ್ಲಿ ಮಳೆರಾಯ ಮಂದಹಾಸ ಮೂಡಿಸಿದ್ರೆ ವಾಹನ ಸವಾರರು ಕೆಲಕಾಲ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬಿರುಗಾಳಿ ಸಮೇತ ಮಳೆಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು, ವಾಹನ ಸವಾರರು ಪರದಾಡಿದ್ದಾರೆ.
ಹೌದು ಕಳೆದ ಭಾನುವಾರ ತಡ ರಾತ್ರಿ ಧಾರವಡ ನಗರದ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಳೆರಾಯ ತನ್ನ ಅರ್ಭಟ ತೋರಿದ್ದಾನೆ. ಗಾಳಿ ಸಹಿತ ಮಳೆಯಾಗಿದ್ದು, ಬಿರುಗಾಳಿಗೆ ಧಾರವಾಡ ಉಪ್ಪಿನ ಬೆಟಗೇರಿ ರಸ್ತೆಯಲ್ಲಿ ಮರವೊಂದಿ ರಸ್ತೆಗೆ ಉರುಳಿ ಬಿದ್ದು ವಾಜನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಮರ ರಸ್ತೆಗೆ ಅಡ್ಡವಾಗಿ ಉರುಳಿ ಬಿದಿದ್ದರಿಂದ ಗೂಡ್ಸ್ ವಾಹಮ ಸವಾರರು ಬದಲಿ ರಸ್ತೆ ಮಾರ್ಗವಾ ತೆರಳಿದರು.
ಇನ್ನೂ ಮಧ್ಯಾಹ್ನದ ನಂತರ ಧಾರವಾಡ ನಗರ ಸೇರಿ ಗ್ರಾಮೀಣ ಭಾಗದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ವೇಳೆ ಮೋಡ ಮುಸುಕಿನ ವಾತಾವರಣ ಕಂಡುದು ನಂತರ ಗಾಳಿ ಸಮೇತ ಮಳೆರಾಯ ಅರ್ಭಟ ತೋರಿಸಿದ್ದಾನೆ. ಮಳೆರಾಯನ ಆಗಮನದಿಂದ ರೈತರ ಮೊಗದಲ್ಲಿ ಮಂದಹಾಸ ಮನೆ ಮಾಡಿತ್ತು.
ಇನ್ನೂ ರಸ್ತೆಗೆ ಅಡ್ಡಲಾಗಿ ಬಿದಿರುವ ಮರವನ್ನು ರೈತರೇ ಈಗ ತೆರವು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
Laxmi News 24×7