Breaking News

ರಾಜ್ಯ

ಪ್ರತಿಯೊಂದು ಕೆಲಸ ಮಾಡಲು ಪೋಲಿಸರಿಗೆ ಸಾರ್ವಜನಿಕರ ಸಹಕಾರಬೇಕು

ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಗೋಕಾಕ ಉಪ ವಿಭಾಗದಲ್ಲಿ ಸುಮಾರು 5 ವರ್ಷಗಳ ಹಿಂದಿನಿಂದ ಕಳೆದುಹೋದ ಮೊಬೈಲಗಳನ್ನು,ಕಳ್ಳತನವಾಗಿದ್ದ ಪಂಪಸೇಟ್ ಮತ್ತು ಆಭರಣಗಳನ್ನು ಪತ್ತೆ ಹಚ್ಚಿ ಬೆಳಗಾವಿ ಎಸ್, ಪಿ, ಕೆ.ರಾಮರಾಜನ್ ಇವರು ವಾರಸುದಾರರಿಗೆ ಮರಳಿ ಹಸ್ತಾಂತರಿಸಿದರು. ನಂತರ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ಎಸ್, ಪಿ ಕೆ ರಾಮರಾಜನ್ ಇವರು ಪ್ರತಿಯೊಂದು ಕೆಲಸಗಳನ್ನು ಪೋಲಿಸ್ ಇಲಾಖೆಯವರು ಮಾಡಬೇಕಾದರೆ ಅದಕ್ಕೆ ಸಾರ್ವಜನಿಕರ ಸಹಕಾರ ಅವಶ್ಯಬೇಕೆಂದು ಮಾದ್ಯಮದ ಮೂಲಕ …

Read More »

ಸವದಿ ಬಿಜೆಪಿ ಬರಲು ಬಿಡಲ್ಲ ; ಬಂದರೂ ನಾವೇನಂತ ತೋರಿಸುತ್ತೇವೆ – ಗುಡುಗಿದ ರಮೇಶ್‌ ಜಾರಕಿಹೊಳಿ

  ಅಥಣಿ : ಬಿಜೆಪಿ ತೊರೆದು ಕಾಂಗ್ರೆಸ್ ನಿಂದ ಶಾಸಕರಾದ ಲಕ್ಷ್ಮಣ ಸವದಿ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ ಮರಳಿ ಬರುವುದಿಲ್ಲ, ಒಂದು ವೇಳೆ ಬಿಜೆಪಿಗೆ ಬಂದರೆ ನಾವು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಮಂಗಳವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ಲಕ್ಷ್ಮಣ ಸವದಿ ಅವರು ಪಕ್ಷವನ್ನು ಬಿಟ್ಟು ಬಿಜೆಪಿ ನಾಯಕರ ಬಗ್ಗೆ ಮತ್ತು ಮತಕ್ಷೇತ್ರದ ಜನರಿಗೆ …

Read More »

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಮಧ್ಯಾಹ್ನ 3ಕ್ಕೆ ವೆಬ್‌ಸೈಟ್‌ನಲ್ಲಿ ರಿಸಲ್ಟ್ ಲಭ್ಯ

ಬೆಂಗಳೂರು: ನಾಳೆ (ಏ.9) ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ಪ್ರಕಟವಾಗಲಿದ್ದು, ಮಧ್ಯಾಹ್ನ 3ಕ್ಕೆ ವೆಬ್‌ಸೈಟ್‌ನಲ್ಲಿ ರಿಸಲ್ಟ್ ಲಭ್ಯವಾಗಲಿದೆ. ಈ ಮೊದಲು ಸುದ್ದಿಗೋಷ್ಠಿ ನಡೆಸಿ ಬಳಿಕ ಫಲಿತಾಂಶ ಪ್ರಕಟವಾಗುತ್ತಿತ್ತು. ಆದರೆ ಈ ಬಾರಿ ಮೊದಲು ವೈಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಸುದ್ದಿಗೋಷ್ಠಿ ನಡೆಯಲಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಸಚಿವ ಮಧು ಬಂಗಾರಪ್ಪ ಅವರು ಸಂಜೆ 6:15ಕ್ಕೆ ಫಲಿತಾಂಶದ ಬಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇಲಾಖೆ ವೆಬ್‌ಸೈಟ್ https://karresults.nic.in ಫಲಿತಾಂಶ ಲಭ್ಯವಾಗಲಿದೆ ಜೊತೆಗೆ …

Read More »

ನಕಲಿ ಸಿಗರೆಟ್ ಮಾರಾಟ : ಸುಮಾರು ₹40 ಲಕ್ಷ ಮೌಲ್ಯದ ಮಾಲು ವಶ

ಬೆಂಗಳೂರು,ಏ.08:-ಗಾಂಧಿನಗರದಲ್ಲಿ ಸಿಗುವ ಸಿಗರೇಟ್ ಸೇದ್ತಿದ್ರೆ ಹುಷಾರ್ ಫಾರಿನ್ ಸಿಗರೇಟ್ ಅಂತ ಸೇದಿದ್ರೆ ನಿಮ್ಮ ಆರೋಗ್ಯ ಕೆಡೋದು ಗ್ಯಾರಂಟಿ ಗಾಂಧಿನಗರದಲ್ಲಿ ತಯಾರಾಗುತ್ತಿತ್ತು ನಕಲಿ ಫಾರಿನ್ ಸಿಗರೇಟ್ ಗಾಂಧಿನಗರದ ಜಿನ್ನಾಗರಮ್ಮದೇವಿ ದೇವಸ್ಥಾನದ ಬಳಿಯೇ ನಡೆಯುತ್ತಿತ್ತು ಅಕ್ರಮ ಉಪ್ಪಾರಪೇಟೆ ಪೊಲೀಸರಿಂದ ಲಕ್ಷಾಂತರ ರೂಪಾಯಿ ಬೆಲೆಯ ನಕಲಿ ಸಿಗರೇಟ್ ಪತ್ತೆ ತಯಾರು ಮಾಡೋ ಗೋಡೌನ್ ಕಂಡು ಪೊಲೀಸರೇ ಶಾಕ್ ಕನಕನ ಕಿಂಡಿಯನ್ನು ಮೀರಿಸುವ ರೀತಿ ಇದೆ ನಕಲಿ ಸಿಗರೇಟ್ ತಯಾರು ಮಾಡುವ ಸೀಕ್ರೆಟ್ ರೂಮ್ ಬ್ರಾಂಡೆಂಡ್ …

Read More »

ಕೌಟುಂಬಿಕ ಕಲಹಕ್ಕೆ ಬಲಿಯಾದ ಪತಿ

ಬೆಂಗಳೂರು,ಏ.08:- ಕೌಟುಂಬಿಕ ಕಲಹಕ್ಕೆ ಬಲಿಯಾದ ಪತಿ ತೌಹಿದ್ ಪಾಷ ಮೃತ ವ್ಯಕ್ತಿ ತೌಹಿದ್ ಪಾಷ ಕುಟುಂಬಸ್ಥರಿಂದ ಕೊಲೆ ಆರೋಪ ಪತ್ನಿ ಸುಹಾನ, ಅತ್ತೆ, ಮಾವನ ಮೇಲೆ ಕೊಲೆ ಆರೋಪ ಕಳೆದ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಜೋಡಿ ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿದ್ದ ತೌಹಿಬ್ ಪಾಷ, ಸುಹಾನ ಮದುವೆಯಾಗಿ ಎರಡು ತಿಂಗಳಿನಿಂದಲೇ ಕೌಟುಂಬಿಕ ಕಲಹ ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ ಹೆಂಡತಿ, ಅತ್ತೆ ಮಾವನ ಜೊತೆ …

Read More »

ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ : ವದಂತಿಗಳಿಗೆ ಕಿವಿಗೊಡಬೇಡಿ- ಸಾರ್ವಜನಿಕರಿಗೆ ಕರೆ*

​ಬೆಂಗಳೂರು,ಏ.08:- ರಾಜ್ಯದ ವಿವಿಧ ಆಟೋ ಗ್ಯಾಸ್ ಬಂಕ್‌ಗಳಲ್ಲಿ ಅನಿಲದ ದಾಸ್ತಾನು ಕೊರತೆಯಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ, ಕಳೆದ ಕೆಲವು ದಿನಗಳಿಂದ ಆಟೋ ಮಾಲೀಕರು ಮತ್ತು ಚಾಲಕರು ಬಂಕ್‌ಗಳ ಮುಂದೆ ಸುದೀರ್ಘ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು …

Read More »

ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ; ಪೋಕ್ಸೋ ಕಾಯ್ದೆಯಡಿ ವಿವಾಹಿತ ಮಹಿಳೆಯ ಬಂಧನ!

ಛತ್ತೀಸ್‌ಗಢ,ಏ.08 :- ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತ ಬಾಲಕನೊಂದಿಗೆ ಸ್ನೇಹ ಬೆಳೆಸಿ, ಆತನನ್ನು ಹೋಟೆಲ್ ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ ಆರೋಪದ ಮೇಲೆ ವಿವಾಹಿತ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಛತ್ತೀಸ್‌ಗಢದ ಕಬೀರಧಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಬಾಲಕನ ಮೇಲೆ ಅತ್ಯಾಚಾರ ಎಸಗಿದ 26 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಆಕೆಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಮಹಿಳೆ 16 ವರ್ಷದ ಬಾಲಕನ ಮೇಲೆ ಭಾವನಾತ್ಮಕ ಒತ್ತಡ ಮತ್ತು …

Read More »

ಕಡಿಮೆ ಬಡ್ಡಿಗೆ 52 ಕೋಟಿ ಸಾಲ ನೀಡುವುದಾಗಿ 75 ಲಕ್ಷ ವಂಚನೆ.

ಚಿತ್ರದುರ್ಗ:ಕಡಿಮೆ ಬಡ್ಡಿಗೆ 52 ಕೋಟಿ ಸಾಲ ನೀಡುವುದಾಗಿ 75 ಲಕ್ಷ ವಂಚನೆ. ಖೋಟಾನೋಟು ಕಿಂಗ್ ಪಿನ್ ಚಂದ್ರಶೇಖರ್ ಹಾಗೂ ರೋಹನ್ ಸಲ್ಡಾನ್ ಅರೆಸ್ಟ್. ಮಹಾರಾಷ್ಟ್ರ ಮೂಲದ ವ್ಯಕ್ತಿಗೆ 75 ಲಕ್ಷ ರೂಪಾಯಿ ವಂಚಿಸಿದ್ದ ವಂಚಕರು. ಚಿತ್ರದುರ್ಗದ ಪೈನಾನ್ಸ್ ಮೂಲಕ 52 ಕೋಟಿ ಸಾಲ ಕೊಡುವುದಾಗಿ ನಂಬಿಸಿದ್ದ ವಂಚಕರು. ಸಾಲ ಸ್ಯಾಂಕ್ಷನ್ ಮಾಡಲು 75 ಲಕ್ಷ ಖರ್ಚಾಗುತ್ತದೆ ಎಂದು ನಂಬಿಸಿದ್ದ ಗ್ಯಾಂಗ್. 50 ಲಕ್ಷ RTGS ಹಾಗೂ 25 ಲಕ್ಷ ಕ್ಯಾಶ್ …

Read More »

ಏಪ್ರಿಲ್‌ 9ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಪ್ರಕಟ

ಬೆಂಗಳೂರು: ಫೆಬ್ರವರಿ – ಮಾರ್ಚ್ ತಿಂಗಳಲ್ಲಿ ನಡೆದಿದ್ದ ದ್ವೀತಿಯ ಪಿಯುಸಿ ಪರೀಕ್ಷೆ-1  ಫಲಿತಾಂಶಕ್ಕೆ ಪರೀಕ್ಷಾ ಮಂಡಳಿ ಅಂತಿಮ ದಿನಾಂಕ ಪ್ರಕಟಿಸಿದೆ. ಏಪ್ರಿಲ್‌ 9 ರಂದು (ಗುರುವಾರ) ಬೆಳಗ್ಗೆ ಫಲಿತಾಂಶ ಪ್ರಕಟವಾಗಲಿದೆ. ಇಂದು ಫಲಿತಾಂಶ  ಪ್ರಕಟವಾಗಬೇಕಿತ್ತು‌‌‌ ಕಾರಣವೇ ಇಲ್ಲದೇ ಬೋರ್ಡ್ ಫಲಿತಾಂಶ ಪ್ರಕಟ ಮುಂದೂಡಿಕೆ ಮಾಡಿತ್ತು. ಈ ಬೆನ್ನಲ್ಲೇ ಫಲಿತಾಂಶ ಪ್ರಕಟಿಸಲು ಅಂತಿಮ ದಿನಾಂಕವನ್ನೂ ಬಿಡುಗಡೆ ಮಾಡಿದೆ. ಏಪ್ರಿಲ್ 9ರ ಬೆಳಗ್ಗೆ ಸಚಿವರು ನಡೆಸುವ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮಧ್ಯಾಹ್ನದ ನಂತ್ರ …

Read More »

ವಿಜಯಪುರ ನಗರದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ ‘ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಮೇಳ’*

ವಿಜಯಪುರ…ವಿಜಯಪುರ ನಗರದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ ‘ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಮೇಳ’* : ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ಹಾಗೂ ದಲಿತ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ನಗರದ ದರ್ಬಾ‌ರ್ ಮೈದಾನದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ ‘ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಮೇಳ’ ನಡೆಯಲಿದೆ ಎಂದು ಪುಸ್ತಕ ಮೇಳದ ಆಯೋಜಕ, ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ತಿಳಿಸಿದರು. ವಿಜಯಪುರ ನಗರದಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, …

Read More »