ಕೋಲ್ಕತ್ತಾ: ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 58 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಮಮತಾ ಬ್ಯಾನರ್ಜಿ 84,709 ಮತಗಳನ್ನು ಪಡೆದಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಿಯಾಂಕಾ ತಿಬ್ರೇವಾಲ್ 26,320, ಸಿಪಿಎಂನ ಶ್ರೀಜಿಬ್ ಬಿಸ್ವಾಸ್ 4,201 ಮತಗಳನ್ನು ಪಡೆದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದ ಮಮತಾ ಸುವೇಂಧು ಅಧಿಕಾರಿಯ ವಿರುದ್ಧ ಸೋತಿದ್ದರು. ಮಂತ್ರಿಸ್ಥಾನವನ್ನು ಪಡೆದವರು 6 ತಿಂಗಳ ಒಳಗಡೆ ಚುನಾಯಿತರಾಗಬೇಕು. ಹೀಗಾಗಿ ಉಪಚುನಾವಣೆಯಲ್ಲಿ ಮಮತಾ …
Read More »ವಿಜಯನಗರ: ಕಲುಷಿತ ನೀರು ಸೇವನೆ ಪ್ರಕರಣ, ಐದಕ್ಕೇರಿದ ಸಾವಿನ ಸಂಖ್ಯೆ
ವಿಜಯನಗರ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಇತ್ತೀಚಿಗೆ ಕಲುಷಿತ ನೀರು ಕುಡಿದು ಓರ್ವ ಸಾವನ್ನಪ್ಪಿದ ಬೆನ್ನಲ್ಲೆ ಮತ್ತೇ ಮೂರು ಜನ ಮೃತಪಟ್ಟಿದ್ದು ಸಾವಿನ ಸಂಖ್ಯೆ 5 ಕ್ಕೇರಿದೆ. ಕಲುಷಿತ ನೀರು ಸೇವಿಸಿದ ಪರಿಣಾಮ ವಾಂತಿ ಬೇಧಿ ಚಿಕಿತ್ಸೆಗಾಗಿ ಬಳ್ಳಾರಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಹಾವನೂರು ಬಸಮ್ಮ, ಲಕ್ಷ್ಮಮ್ಮ, ಅಂಗೂರುಗಟ್ಟಿ ಗೋಣೆಪ್ಪ ಎಂಬಾತರು ಅಸುನೀಗಿದ್ದಾರೆ. ಜೊತೆಗೆ ಮೊನ್ನೆ ಬಂಧುಗಳ ಮನೆಗೆ ಭೇಟಿ ನೀಡಿದ ಮಹಾದೇವಪ್ಪ ಹೆಳ್ಳಪ್ಪ ಎಂಬುವವರು ಕೂಡ …
Read More »ಹೈವೇಯಲ್ಲಿ ದರೋಡೆಗಿಳಿದಿದ್ದ ಡಕಾಯಿತರಿಗೆ ಗೂಸಾ ನೀಡಿದ ಗ್ರಾಮಸ್ಥರು
ಬೆಂಗಳೂರು: ಕಾಡಿನಲ್ಲಿ ಟೆಂಟ್ ಹಾಕಿ ಹೆದ್ದಾರಿಯಲ್ಲಿ ಪ್ರಯಾಣಿಸುವ ಸವಾರರ ದರೋಡೆಗಿಳಿದಿದ್ದ ಡಕಾಯಿತರಿಗೆ ಗ್ರಾಮಸ್ಥರು ಗೂಸಾ ನೀಡಿದ ಘಟನೆ ನಗರದ ಹೊರವಲಯದ ಬೆಂಗಳೂರು-ಶಿವಮೊಗ್ಗ ಹೈವೆಯಲ್ಲಿ ನಡೆದಿದೆ. ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗಗಳಲ್ಲಿ ಹೋಗುವ ಪ್ರಯಾಣಿಕರನ್ನ ಟಾರ್ಗೆಟ್ ಮಾಡ್ತಿದ್ದ ಗ್ಯಾಂಗ್ ವಾಹನಗಳನ್ನು ಅಡ್ಡಗಟ್ಟಿ ಕಾರಿನ ಗ್ಲಾಸ್ ಗಳನ್ನ ಒಡೆದು ದರೋಡೆ ಮಾಡುತ್ತಿದ್ದರೆಂಬ ಆರೋಪ ಕೇಳಿ ಬಂದಿದೆ. ಆರೋಪಿಗಳು ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ಕಳ್ಳರು ಗುಬ್ಬಿ ಫಾರೆಸ್ಟ್ ನಲ್ಲಿ ಟೆಂಟ್ …
Read More »ತುಳಿತಕೊಳ್ಳಪಟ್ಟ ದಲಿತ ಸಮುದಾಯದ ಸ್ವಾಭಿಮಾನದ ಬದುಕಿಗಾಗಿ ಕಾರ್ಯ ನಿರ್ವಹಿಸುವ ಮಹದಾಸೆ ನಿರೀಕ್ಷಿಸಲು ಸಾಧ್ಯ: ಅಶೋಕ ಪೂಜಾರಿ
ಗೋಕಾಕ : 3, ಸ್ವಾತಂತ್ರ್ಯ ಭಾರತದ ಸಂವಿಧಾನ ಶಿಲ್ಪಿ ಡಾ,ಬಾಬಾಸಾಹೇಬ ಅಂಬೇಡ್ಕರ್ ಅವರ ಪರ್ವ ಕಾಲದಲ್ಲಿ ನಾವಿದ್ದೇವೆ. ಸ್ವಾತಂತ್ರ್ಯ ಮತ್ತು ಸಮಾನತೆ ಬದುಕು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾದ ನ್ಯಾಯ ಸಮ್ಮತ ಆಡಳಿತ ವ್ಯವಸ್ಥೆ, ಸ್ತ್ರೀ ಸ್ವಾತಂತ್ರ್ಯ ಸಮಗ್ರ ಶಿಕ್ಷಣ, ಎಲ್ಲರಿಗೂ ಸಮ ಬಾಳು ಮತ್ತು ಸಮಪಾಲು ಮುಂತಾದ ಉದಾತ್ತ ದ್ಧ್ಯೆಯಗಳೊಂದಿಗೆ ಸಾಂದರ್ಭಿಕ ತಿದ್ದುಪಡಿಗಳ ಅವಕಾಶಗಳೊಂದಿಗೆ ರಚಿಸಲ್ಪಟ್ಟಿರುವ ದೇಶದ ಸಂವಿಧಾನ ಭಾರತೀಯರ ಧರ್ಮ ಗ್ರಂಥವಗಬೇಕೆಂದು ಪ್ರೋ ಎ. ವಾಯ. ಪಂಗಣ್ಣವರ …
Read More »ಶ್ವಾನದ ತಲೆಗೆ ಸಿಲುಕಿದ ಪ್ಲಾಸ್ಟಿಕ್ ಬಾಟಲಿ ; ಅಗ್ನಿಶಾಮಕ ಸಿಬಂದಿಯಿಂದ ರಕ್ಷಣೆ
ತೆಕ್ಕಟ್ಟೆ : ಕಳೆದ ಮೂರು ದಿನಗಳಿಂದ ಶ್ವಾನದ ತಲೆಗೆ ಆಕಸ್ಮಿಕವಾಗಿ ಪ್ಲಾಸ್ಟಿಕ್ ಬಾಟಲಿ ಸಿಲುಕಿ ಪರದಾಡುತ್ತಿದ್ದು, ಕುಂದಾಪುರ ಅಗ್ನಿಶಾಮಕ ದಳದ ಸಿಬಂದಿಗಳ ಸಮಯ ಪ್ರಜ್ಞೆಯಿಂದಾಗಿ ರಕ್ಷಿಸಿದ ಘಟನೆ ಅ.2 ರಂದು ಸಂಭವಿಸಿದೆ. ಘಟನೆ : ಹಿರಿಯ ಪರಿಸರವಾದಿ ಕೊರ್ಗಿ ವಿಠಲ್ ಶೆಟ್ಟಿ ಅವರು ಅ.2 ರಂದು ತಮ್ಮ 76ನೇ ಹುಟ್ಟು ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಕೋಣಿ ಮಾನಸ ಜ್ಯೋತಿಯ ವಿಶೇಷ ಚೇತನ ಮಕ್ಕಳಿಗಾಗಿ ಹಣ್ಣು ಹಂಪಲು ವಿತರಣೆಗೆಂದು ತೆರಳಿದ ಸಂದರ್ಭದಲ್ಲಿ …
Read More »ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಬಿಡುಗಡೆಯಲ್ಲಿ ಏರುಪೇರು
ಕೊರೋನಾ ಆರಂಭವಾದಾಗಿನಿಂದ ನೌಕರರ ವೇತನ ಬಿಡುಗಡೆಯಲ್ಲಿ ಏರುಪೇರಾಗುತ್ತಿದೆ. ಕಳೆದ ಒಂದು ವರ್ಷದಿಂದ ನಿಗದಿತ ದಿನಕ್ಕೆ ವೇತನ ಸಿಗುತ್ತಿಲ್ಲ. ಜುಲೈ ತಿಂಗಳ ವೇತನವನ್ನು ಆಗಸ್ಟ್ ಕೊನೆಯ ವಾರದಲ್ಲಿ ಪಾವತಿಸಲಾಗಿತ್ತು. ಆಗಸ್ಟ್ ತಿಂಗಳ ಶೇ.50ರಷ್ಟು ವೇತನವನ್ನು ಗೌರಿ-ಗಣೇಶ ಹಬ್ಬಕ್ಕೂ ಮುನ್ನ ಬಿಡುಗಡೆಗೊಳಿಸಲಾಗಿತ್ತು. ಈಗ ಅಕ್ಟೋಬರ್ ಬಂದರೂ ಆಗಸ್ಟ್ ತಿಂಗಳ ಬಾಕಿ ಶೇ.50ರಷ್ಟುವೇತನ ನೀಡಿಲ್ಲ. ಇದೀಗ ಮಹಾಲಯ ಅಮಾವಾಸ್ಯೆ, ದಸರಾ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ನೌಕರರಿಗೆ ಹಣದ ಅಗತ್ಯವಿದೆ.
Read More »ಟಾಪ್ 10 ಸುದ್ದಿಗಳ ಕ್ವಿಕ್ರೌಂಡಪ್ ATM ಕೇಂದ್ರದಲ್ಲಿ ಯುವತಿಯ ಭರ್ಜರಿ ಡ್ಯಾನ್ಸ್
1. ದೀದಿ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಿಷ್ಯ ಕೆಲವೇ ಕ್ಷಣಗಳಲ್ಲಿ ನಿರ್ಧಾರವಾಗಲಿದೆ. ಭವಾನಿಪುರ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದೆ. ಭವಾನಿಪುರ ಕ್ಷೇತ್ರದಲ್ಲಿ ಕಳೆದ ಗುರುವಾರ ಮತದಾನ ನಡೆದು, ಶೇಕಡಾ 57ರಷ್ಟು ಮತದಾನವಾಗಿತ್ತು. ಅದರಂತೆ ಇಂದು ಬೆಳಿಗ್ಗೆ 8 ಗಂಟೆಗೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶಗಳು ಟ್ರೆಂಡ್ ಆಧಾರದ ಮೇಲೆ ಸ್ಪಷ್ಟವಾಗುತ್ತವೆ. ಇನ್ನು ಭವಾನಿಪುರ …
Read More »ಆಗಸ್ಟ್‌ನಲ್ಲಿ 20 ಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಿದ್ದ ವಾಟ್ಸಾಪ್
ನವದೆಹಲಿ, ಅಕ್ಟೋಬರ್ 02: ಒಂದೇ ತಿಂಗಳಲ್ಲಿ 20 ಲಕ್ಷ ಖಾತೆಗಳನ್ನು ವಾಟ್ಸಾಪ್ ನಿಷೇಧಿಸಿರುವ ಮಾಹಿತಿ ಲಭ್ಯವಾಗಿದೆ. ಆಗಸ್ಟ್‌ನಲ್ಲಿ ತಿಂಗಳಲ್ಲಿ ವಾಟ್ಸ್ಆಯಪ್ ಕುರಿತಾಗಿ ಖಾತೆ ಬೆಂಬಲ (105), ನಿಷೇಧ ಮನವಿ (222), ಇತರ ಬೆಂಬಲ (34), ಉತ್ಪನ್ನ ಬೆಂಬಲ (42) ಮತ್ತು ಸುರಕ್ಷತೆ (17) ಗಳ ವಿಚಾರವಾಗಿ 420 ಬಳಕೆದಾರರ ವರದಿಗಳನ್ನು ಸ್ವೀಕರಿಸಲಾಗಿದೆ ಎಂದು ವಾಟ್ಸಾಪ್ ಅನುಸರಣೆ ಡೇಟಾ ತೋರಿಸಿದೆ. ಆದಾಗ್ಯೂ, 421 ವರದಿಗಳ ಪೈಕಿ, ವಾಟ್ಸಾಪ್ 41 ಖಾತೆಗಳ ವಿರುದ್ಧ …
Read More »ದೀದಿ ಭವಿಷ್ಯ ಇಂದೇ ನಿರ್ಧಾರ : ಭವಾನಿಪುರ ಉಪಚುನಾವಣೆ ಮತ ಎಣಿಕೆ ಆರಂಭ
ಕೋಲ್ಕತ್ತಾ: ಭವಾನಿಪುರದಲ್ಲಿ ದೀದಿ ಭವಿಷ್ಯ ಇಂದು ನಿರ್ಧಾರವಾಗಲಿದೆ. ಭವಾನಿಪುರ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಭಾನುವಾರ ಬೆಳಗ್ಗೆಯಿಂದ ಆರಂಭವಾಗಿದೆ. ಕಳೆದ ಗುರುವಾರ ಮತದಾನ ನಡೆದಿದ್ದು, ಮತದಾನ ಶೇ 57ರಷ್ಟು ಮಾತ್ರ ನಡೆದಿದೆ. ಬೆಳಗ್ಗೆ 8 ಗಂಟೆಗೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯಿಂದ ವಕೀಲೆ, ಬಿಜೆಪಿ ಯೂತ್ ವಿಂಗ್ ಅಧ್ಯಕ್ಷೆಯಾಗಿದ್ದ ಪ್ರಿಯಾಂಕಾ ತಿಬ್ರೆವಾಲಾ ಕಣದಲ್ಲಿದ್ದಾರೆ. …
Read More »ಪೊಲೀಸರೆಂದು ಹೆದರಿಸಿ ಹಣ ವಸೂಲಿ! ಕೊಪ್ಪಳದಲ್ಲಿ ಇಬ್ಬರು ಬಂಧನ
ಕೊಪ್ಪಳ: ಪೊಲೀಸರ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗದಗ ಮೂಲದ ಸಂಜಯ ಕೊಪ್ಪದ ಮತ್ತು ನರಗುಂದ ಮೂಲದ ಸಂಜು ಛಲವಾದಿ ಬಂಧಿತ ಆರೋಪಿಗಳು. ಬಂಧಿತರು ಆಗಸ್ಟ್ 15ರಂದು ಭೀಮೇಶ್ ಎಂಬುವವರ ಬೈಕ್ ತಡೆದು 1,000 ರೂ. ವಸೂಲಿ ಮಾಡಿದ್ದರು. ಈ ಘಟನೆ ಕೊಪ್ಪಳ ಹೊರವಲಯದಲ್ಲಿ ನಡೆದಿತ್ತು. ಭೀಮೇಶ್ ಬೈಕ್ನಲ್ಲಿ ಮುನಿರಾಬಾದ್ಗೆ ಹೊರಟಾಗ ಹಣ ವಸೂಲಿ ಮಾಡಿದ್ದರು. ಜೊತೆಗೆ ಎಟಿಎಂ ಪಿನ್ ಪಡೆದು 1,500 ರೂ. ಡ್ರಾ …
Read More »
Laxmi News 24×7