Breaking News

ರಾಜಕೀಯ

ಅಂಗನವಾಡಿಗೆ ಅವಧಿ ಮೀರಿದ ಆಹಾರ ಪದಾರ್ಥ ಪೂರೈಕೆ?

ಬೆಂಗಳೂರು: ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಠಿಕ ಆಹಾರದ ಹೆಸರಿನಲ್ಲಿ ಬಳಕಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ಪೂರೈಸಿದೆಯೇ? ಹೌದು ಎನ್ನುತ್ತಿವೆ ತುಮಕೂರು ಜಿಲ್ಲೆಯ ಅಂಗನವಾಡಿಗಳಿಗೆ ಪೂರೈಕೆಯಾಗಿರುವ ಆಹಾರದ ಪಟ್ಟಣಗಳ ಮೇಲೆ ನಮೂದಾಗಿರುವ ದಿನಾಂಕಗಳು.   ತಿಪಟೂರು, ತುಮಕೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಅಂಗನವಾಡಿಗಳಿಗೆ ಪೂರೈಕೆಯಾಗಿರುವ ತೊಗರಿ ಬೇಳೆ, ಹೆಸರು ಕಾಳು ಮತ್ತು ಮಿಶ್ರಿತ ಪೌಷ್ಠಿಕ ಆಹಾರದ ಪೊಟ್ಟಣಗಳ ಮೇಲೆ ಪ್ಯಾಕ್ ಮಾಡಿದ ದಿನಾಂಕವನ್ನು 2022ರ ನವೆಂಬರ್‌ ಎಂದು ಅಚ್ಚು ಹಾಕಲಾಗಿದೆ. ಉಪಯೋಗಿಸಬಹುದಾದ …

Read More »

ಶಾಲೆಗೆ ಹೋಗಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಬೆಳಗಾವಿ: ಶಾಲೆಗೆ ಹೋಗಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಗುಜರಾತ್ ಮೂಲದ ಬಿ.ಕೆ. ಕಂಗ್ರಾಳಿಯ ನಿವಾಸಿ ಆಕಾಶ ಭರತಕುಮಾರ ದೋಂಡಿಯಾ (19) ಬಂಧಿತ. ತಾಲ್ಲೂಕಿನ ಗ್ರಾಮವೊಂದರ 14 ವರ್ಷದ ಬಾಲಕಿ ನಗರದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಬಾಲಕಿಯನ್ನು ಪುಸಲಾಯಿಸಿ ಸಲುಗೆ ಬೆಳೆಸಿದ ಆರೋಪಿ, ಗುಜರಾತಿಗೆ ಕರೆದೊಯ್ದು ಎರಡು ದಿನ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಮರಳಿ ಬೆಳಗಾವಿಗೆ ಬಂದು ತಂದೆಗೆ …

Read More »

ನಂದಗಡದಲ್ಲಿ ಈಗ ಸುಧಾರಣಾ ಪರ್ವ ಆರಂಭ

ನಂದಗಡ (ಖಾನಾಪುರ ತಾಲ್ಲೂಕು): ಕ್ರಾಂತಿಯ ನೆಲ, ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತ ತಾಲ್ಲೂಕಿನ ನಂದಗಡದಲ್ಲಿ ಈಗ ಸುಧಾರಣಾ ಪರ್ವ ಆರಂಭವಾಗಿದೆ. ಈ ಸ್ಥಳಕ್ಕೆ ಜಾಗತಿಕ ಗುರುತು ತಂದುಕೊಟ್ಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿ ಈಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.   ಹಲವು ವರ್ಷಗಳಿಂದ ನಂದಗಡ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಚನ್ನಮ್ಮನ ಕಿತ್ತೂರು, ಬೈಲಹೊಂಗಲದಲ್ಲಿ ಆದಂಥ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿಯೂ ಮಾಡಬೇಕು ಎಂದು ಜನ ದಶಕದಿಂದ ಹೋರಾಟ ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಶುಕ್ರದೆಸೆ …

Read More »

ಕೊತ್ವಾಲ ರಾಮಚಂದ್ರನ ಶಿಷ್ಯರ ಕಡೆಯಿಂದ ನಾವು ಪಾಠ ಕಲಿಯಬೇಕಿಲ್ಲ : ಯತ್ನಾಳ

ಕೊತ್ವಾಲ ರಾಮಚಂದ್ರನ ಶಿಷ್ಯರ ಕಡೆಯಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಿರುದ್ಧ ವಿಜಯಪುರ ನಗರ ಶಾಸಕ ಯತ್ನಾಳ ವಾಗ್ದಾಳಿ ನಡೆಸಿದರು‌. ಬಿಜೆಪಿಗೆ ರೌಡಿ ಶೀಟರ್ ಗಳ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರತಿಕ್ರಿಯೆ ನೀಡಿ ಕೊತ್ವಾಲ ರಾಮಚಂದ್ರ ಬೆಂಗಳೂರಿಗೆ ದೊಡ್ಡ ರೌಡಿ, ಅವನಿಗೆ ಸಿಗರೇಟ್ ತಂದು ಕೊಡುತ್ತಿದ್ದವರು ನಮಗೆ ಪಾಠ ಮಾಡುತ್ತಿದ್ದಾರೆ. ಬ್ಲೂ ಫೀಲಂ ನಡೆಸುವವರು ಬಿಜೆಪಿ ಬಗ್ಗೆ …

Read More »

ಶಿಗ್ಗಾವಿಯಲ್ಲಿ ಸಾರ್ವಜನಿಕ ಆಸ್ಪತ್ರೆಯನ್ನು ಉದ್ಘಾಟಿಸಿದC.M. ಬೊಮ್ಮಾಯಿ

ಹಾವೇರಿ ಜಿಲ್ಲೆಯ ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಯಿಂದ 250 ಹಾಸಿಗೆಗಳಿಗೆ ಮೆಲ್ದರ್ಜೆಗೇರಿಸುವ ಕಟ್ಟಡ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರು ಹಾಗೂ ಮತ್ತಿತರರು ಹಾಜರಿದ್ದರು.

Read More »

ಬೆಂಗಳೂರು, ಮೈಸೂರು ಬಳಿಕ ಬಳ್ಳಾರಿಯಲ್ಲಿಯೂ ಚಿರತೆ ಪ್ರತ್ಯಕ್ಷ; ಭಯಭೀತರಾದ ಪಿಜಿ ವಿದ್ಯಾರ್ಥಿಗಳು

ಬಳ್ಳಾರಿ: ಬೆಳಗಾವಿ, ಮೈಸೂರು, ಬೆಂಗಳೂರು ಬಳಿಕ ಇದೀಗ ಬಳ್ಳಾರಿಯಲ್ಲಿಯೂ ಚಿರತೆ ಪ್ರತ್ಯಕ್ಷವಾಗಿದೆ. ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಿಜಿ ಸೆಂಟರ್ ನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ.   ಸಂಡೂರು ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೆಂದ್ರದ ಪಿಜಿ ಸೆಂಟರ್ ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಕಳೆದ ಎರಡು ದಿನಗಳಿಂದ ಇದೇ ಭಾಗದಲ್ಲಿ ಓಡಾಟ ನಡೆಸಿದೆ. ಪಿಜಿ ಸೆಂಟರ್ ನ ಮೆಟ್ಟಿಲುಗಳ ಮೇಲೆ, ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿಯೇ ಚಿರತೆ ಓಡಾಡುತ್ತಿದ್ದು, ಈ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ …

Read More »

ವಿಜಯಪುರ: ಕೃಷಿ ಹೊಂಡಕ್ಕೆ ಬಿದ್ದು ಪುಟಾಣಿ ಸಹೋದರರು ಮೃತ್ಯು

ವಿಜಯಪುರ, ಡಿ.4: ಅಣ್ಣ-ತಮ್ಮಂದಿರಾದ ಬಾಲಕರಿಬ್ಬರು ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದಲ್ಲಿ ಶನಿವಾರ ನಡೆದಿದೆ. ರಮೇಶ್(9) ಮತ್ತು ಮಾಳಿಂಗರಾಯ(11) ಮೃತಪಟ್ಟ ಬಾಲಕರಾಗಿದ್ದಾರೆ. ಇವರಿಬ್ಬರು ಶನಿವಾರ ಶಾಲೆಯಿಂದ ಮನೆಗೆ ಬಂದ ಬಳಿಕ ದನಗಳನ್ನು ಮೇಯಿಸಲೆಂದು ತಮ್ಮ ಪಕ್ಕದ ಜಮೀನಿಗೆ ಹೋಗಿದ್ದರು. ಈ ವೇಳೆ ಅಲ್ಲಿರುವ ಕೃಷಿ ಹೊಂಡಕ್ಕೆ ನೀರು ಕುಡಿಯಲು ಹೋದಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆನ್ನಲಾಗಿದೆ. ಈ ಬಗ್ಗೆ ಬಸವನಬಾಗೇವಾಡಿ ಪೊಲೀಸ್ …

Read More »

ವಂಶೋದ್ಧಾರಕ್ಕಾಗಿ ಸೊಸೆಯೊಂದಿಗೆ ಸೆಕ್ಸ್ ಗೆ ಮುಂದಾದ ಮಾವ: ದೂರು ಕೊಡುವ ಬದಲು ಸುಫಾರಿ ಕೊಟ್ಟ ಬೀಗರು

ಹಾಸನ: ಸೊಸೆಗೆ ಲೈಂಗಿಕ ಕಿರುಕುಳ ನೀಡಿದ ಮಾವ ಕೊಲೆಯಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಕೋಪದ ಕೈಗೆ ಬುದ್ಧಿ ಕೊಟ್ಟ ಬೀಗರು ಬಂಧಿತರಾಗಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯ ರಾಗಿಕಾವಲು ಗ್ರಾಮದ ಕೆರೆ ಬಳಿ ನವೆಂಬರ್ 13ರಂದು ದೊಡ್ಡಹಳ್ಳಿ ತಮ್ಮೇಗೌಡನ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ತಮ್ಮೇಗೌಡನ ಬೀಗರನ್ನು ಬಂಧಿಸಿದ್ದಾರೆ. ವಿಕಲಚೇತನ ಮಗನಿಗೆ ಮದುವೆ ಮಾಡಿದ್ದ ತಮ್ಮೇಗೌಡ ಅಜ್ಜನಾಗುವ ಕನಸು ಕಂಡಿದ್ದ. …

Read More »

ಸಿದ್ದಾರಾಮಯ್ಯಗೆ ನನ್ನ ಕ್ಷೇತ್ರ ಬಿಟ್ಟು ಕೊಡುತ್ತೇನೆ: ಸಂತೋಷ ಲಾಡ್

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರೇ ಅವರಿಗೆ ಕ್ಷೇತ್ರ ಬಿಟ್ಟು ಕೊಡುವೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು. ರವಿವಾರ ‌ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜ್ಯದ ಹಲವೆಡೆಗಳಲ್ಲಿ ಅನೇಕರು ಆಹ್ವಾನಿಸುತ್ತಿದ್ದಾರೆ. ಈ ದಿಸೆಯಲ್ಲಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅದು ಅವರಿಗೆ ಬಿಟ್ಟ ವಿಷಯ. ಒಂದು ವೇಳೆ ಕಲಘಟಗಿಯಿಂದಲೂ ಸ್ಪರ್ಧಿಸಲು ಇಚ್ಛಿಸಿದರೆ ಆ ಕ್ಷೇತ್ರ ಬಿಟ್ಟುಕೊಡುವೆ …

Read More »

ಪ್ರೀತಿಸಿ ಮದುವೆಯಾಗಿ ಒಟ್ಟಿಗೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ದಂಪತಿ ಬಂಧನ

ಬೆಂಗಳೂರು: ಒಂಟಿ ‌ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ದಂಪತಿಯನ್ನು ನಗರದ ಜ್ಞಾನಭಾರತಿ ಠಾಣಾ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.   ನಾಗರಾಜ ಹಾಗೂ ರಮ್ಯಾ ಬಂಧಿತ ದಂಪತಿ. ಬೈಕ್ ಕಳ್ಳನೊಬ್ಬನ ಮೂಲಕ ನಾಗರಾಜ್ ಹಾಗೂ ರಮ್ಯಾಗೆ ಪರಿಚಯ ಆಗಿತ್ತು.   ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ದಿನಕಳೆದಂತೆ ಇಬ್ಬರ ನಡುವೆ ಪ್ರೇಮಾಂಕುವಾಗಿ ಮದುವೆಯಾಗಿದ್ದರು.   ಮದುವೆಯಾದ ಬಳಿಕ ಇಬ್ಬರು ಒಟ್ಟಿಗೆ ಕಳ್ಳತನ ಮಾಡಲು ಆರಂಭಿಸಿದರು. ಒಂಟಿ …

Read More »