ಬೆಳಗಾವಿ: ಬೆಳಗಾವಿಯ ಹಿಂಡಲಗಾ ಸೆಂಟ್ರಲ್ ಜೈಲಿನ ಕೈದಿಯಿಂದಲೇ ಶನಿವಾರ ಬೆಳಗ್ಗೆ ನಿತಿನ್ ಗಡ್ಕರಿಗೆ ಕರೆ ಮಾಡಿ, ಬಾಂಬ್ ಇಟ್ಟು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಮಾಹಿತಿ ಸಿಕ್ಕ ಕೂಡಲೆ ಶನಿವಾರ ರಾತ್ರಿ ನಾಗ್ಪುರದ ಪೊಲೀಸ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಆದರೆ ಎಲ್ಲರನ್ನೂ ಕಾಡುತ್ತಿದ್ದ ಪ್ರಶ್ನೆ ಒಂದೇ. ಕೈದಿಯೊಬ್ಬ, ಕೇಂದ್ರ ಮಂತ್ರಿಗೆ ಜೈಲಿನಿಂದ ಕರೆ ಮಾಡಿದ್ದು ಹೇಗೆ ಎಂದು ಜೀವ ಬೆದರಿಕೆ ಸಂಬಂಧ ಮಹಾರಾಷ್ಟ್ರದ ನಾಗ್ಪುರದ …
Read More »IAS ಪಾಸ್ ಮಾಡಲು ಎಷ್ಟು ಗಂಟೆ ಓದಬೇಕು? ಸೆಲೆಬ್ರಿಟಿ ಅಧಿಕಾರಿ ಟೀನಾ ಡಾಬಿ ಕೊಟ್ಟ ಉತ್ತರ ವೈರಲ್
ನವದೆಹಲಿ: ಐಎಎಸ್ ಅಧಿಕಾರಿಯಾಗಲು ದಿನಕ್ಕೆ ಎಷ್ಟು ಗಂಟೆ ಅಧ್ಯಯನ ಮಾಡಬೇಕು ಎಂ ವಿದ್ಯಾರ್ಥಿನಿಯ ಪ್ರಶ್ನೆಗೆ ಸೆಲೆಬ್ರಿಟಿ ಐಎಎಸ್ ಅಧಿಕಾರಿ ಟೀನಾ ಡಾಬಿ ಅವರು ನೀಡಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಟೀನಾ ಡಾಬಿ ಅವರು ಪ್ರಸ್ತುತ ರಾಜಸ್ಥಾನದ ಜೈಸಲ್ಮೇರ್ನ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಯೋನಿರ್ ಜೈಸನ್ ಶಕ್ತಿ (ಮಹಿಳೆಯರು ಮೊದಲು) ಕಾರ್ಯಕ್ರಮದ ಭಾಗವಾಗಿ ಜೈಸಲ್ಮೇರ್ನ ಇಂಧಿರಾ ಗಾಂಧಿ ಇಂದೋರ್ ಸ್ಟೇಡಿಯಂನಲ್ಲಿ ವಿದ್ಯಾರ್ಥಿನಿಯರಿಗೆ ವೃತ್ತಿ ಸಮಾಲೋಚನೆ ಕುರಿತು ಹಮ್ಮಿಕೊಳ್ಳಲಾಗಿದ್ದ …
Read More »ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿದ್ಯಾರ್ಥಿನಿ- ಶಿಕ್ಷಕನ ‘ಖಾಸಗಿ’ ವಿಡಿಯೊ
ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಪ್ರೌಢಶಾಲೆಯ ಶಿಕ್ಷಕ, ವಿದ್ಯಾರ್ಥಿನಿಯ ಜತೆಗೆ ಇರುವ ‘ಖಾಸಗಿ ವಿಡಿಯೊ’ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ‘ಖಾಸಗಿ ಪ್ರೌಢಶಾಲೆಯ ಶಿಕ್ಷಕ ಅದೇ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಜತೆಗೆ ಸಲುಗೆ ಬೆಳೆಸಿದ್ದ. ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಪ್ರೀತಿಯಲ್ಲಿ ಬೀಳಿಸಿಕೊಂಡಿದ್ದ. ಕೆಲವು ತಿಂಗಳಿಂದ ಶಾಲಾ ಸಮಯದ ಬಳಿಕವೂ ವಿದ್ಯಾರ್ಥಿನಿಯನ್ನು ಶಾಲೆಯಲ್ಲೇ ಇರಿಸಿಕೊಳ್ಳುತ್ತಿದ್ದ. ಈಚೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿನಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದ. ಆ ಸಂದರ್ಭದಲ್ಲಿ ಇಬ್ಬರೂ …
Read More »ಗಾಂಧಿ-ಗೋಡ್ಸೆ ಟ್ರೇಲರ್ ಬಿಡುಗಡೆ; ಕುತೂಹಲ ಮೂಡಿಸಿರುವ ರಾಜ್ಕುಮಾರ್ ಸಂತೋಷಿ ಸಿನಿಮಾ
ಘಾಯಲ್’, ‘ದಾಮಿನಿ’, ‘ಬರ್ಸಾತ್’, ‘ಖಾಕೀ’ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳನ್ನು ನಿರ್ದೇಶಿಸಿರುವ ರಾಜ್ಕುಮಾರ್ ಸಂತೋಷಿ ಆಕ್ಷನ್ ಕಟ್ ಹೇಳಿರುವ ಸಿನಿಮಾ ‘ಗಾಂಧಿ ಗೋಡ್ಸೆ : ಏಕ್ ಯುದ್ಧ್’. ಕೆಲವು ದಿನಗಳ ಹಿಂದಷ್ಟೇ ಟೀಸರ್ ಮೂಲಕ ಸದ್ದು ಮಾಡಿದ್ದ ಈ ಚಿತ್ರ, ಇದೀಗಿ ಟ್ರೇಲರ್ ಮುಖೇನ ಮತ್ತೊಮ್ಮೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ, ಚಿತ್ರದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ನಾಥೂರಾಮ್ ಗೋಡ್ಸೆ ನಡುವಿನ ಸೈದ್ಧಾಂತಿಕ ಸಂಘರ್ಷ, ವೈಚಾರಿಕ ಭಿನ್ನಾಭಿಪ್ರಾಯಗಳ ಬಗ್ಗೆ ನೇರವಾಗಿ ಬೆಳಕು …
Read More »ಮಟಮಟ ಮಧ್ಯಾಹ್ನ ಮಲಗಿದ ಸ್ಥಿತಿಯಲ್ಲೇ ಹೆಣವಾದ ಕೊಪ್ಪಳದ ಪ್ರೇಮಿಗಳು! ಬೆಚ್ಚಿಬಿದ್ದ ಸ್ಥಳೀಯರು
ಕೊಪ್ಪಳ: ಕುಕನೂರು ತಾಲೂಕಿನ ಬಳಗೇರಿ ಗ್ರಾಮದ ಮನೆಯೊಂದರಲ್ಲಿ ಚಾಪೆ ಮೇಲೆ ಮಲಗಿದ ಸ್ಥಿತಿಯಲ್ಲೇ ರಕ್ತದ ಮಡುವಿನಲ್ಲಿ ಯುವಕ ಮತ್ತು ಯುವತಿ ಶವ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಬಳಿಗೇರಿ ಗ್ರಾಮದ ಸುಮಾ ಮತ್ತು ಪ್ರಕಾಶ ಭಜಂತ್ರಿ ಮೃತ ದುರ್ದೈವಿಗಳು. ಇಂದು(ಶನಿವಾರ) ಮಧ್ಯಾಹ್ನ ಇವರಿಬ್ಬರೂ ದುರಂತ ಅಂತ್ಯ ಕಂಡಿದ್ದಾರೆ. ಪ್ರೀತಿ ಮಾಡುವಂತೆ ಸುಮಾಳ ಹಿಂದೆ ಪ್ರಕಾಶ ಭಜಂತ್ರಿ ದುಂಬಾಲು ಬಿದ್ದಿದ್ದ. ಈ ವಿಷಯ ಹುಡುಗಿ ಮನೆಯವರಿಗೂ ತಿಳಿದಿತ್ತು. ಇದಕ್ಕೆ ಮನೆಯವರು …
Read More »ವೇಷದ ಜತೆಗೆ ಭಾಷೆಯನ್ನೂ ಬದಲಾಯಿಸಿದ್ದ ಸ್ಯಾಂಟ್ರೋ ರವಿ! ಈತನ ಮಾತು ಕೇಳಿ ಪೊಲೀಸರೇ ಅರೆಕ್ಷಣ ಗಲಿಬಿಲಿ
ಮೈಸೂರು: ಅತ್ಯಾಚಾರ, ಪತ್ನಿಗೆ ವಂಚನೆ ಪ್ರಕರಣದ ಆರೋಪಿ ಸ್ಯಾಂಟ್ರೋ ರವಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಗುಜರಾತ್ನ ಅಹಮದಾಬಾದ್ನಲ್ಲಿ ತಲೆಮರೆಸಿಕೊಂಡಿದ್ದ. 11 ದಿನದ ಬಳಿಕ ಪೊಲೀಸರು ಆತನನ್ನು ಪತ್ತೆ ಮಾಡಿ ಮೈಸೂರಿಗೆ ಕರೆತಂದಿದ್ದಾರೆ. ಬಂಧನದ ವೇಳೆಯೂ ಅಹಮದಾಬಾದ್ನಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದ. ಪೊಲೀಸರಿಗೆ ತನ್ನ ಗುರುತು ಸಿಗಬಾರದು ಎಂಬ ಕಾರಣಕ್ಕೆ ಆತ ತನ್ನ ವೇಷ ಬದಲಾಯಿಸಿದ್ದು ಮಾತ್ರವಲ್ಲದೆ ಭಾಷೆಯನ್ನೂ ಬದಲಾಯಿಸಿದ್ದ! ತಲೆಯ ವಿಗ್ ತೆಗೆದು ಮೀಸೆ ಬೋಳಿಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನ ಗುರುತಿರುಸುವುದು ಕಷ್ಟವಾಗಿತ್ತು. …
Read More »ಸ್ಯಾಂಟ್ರೋ ರವಿ ಸೇರಿ ಮೂವರು ಜೈಲುಪಾಲು
ಮೈಸೂರು: ಅತ್ಯಾಚಾರ, ಪತ್ನಿಗೆ ವಂಚನೆ ಪ್ರಕರಣದ ಆರೋಪಿ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸ್ಯಾಂಟ್ರೋ ರವಿ ಜೊತೆಗೆ ಸಹಚರರಾದ ರಾಮ್ ಜೀ ಸತೀಶ್ ಕೂಡ ಜೈಲು ಪಾಲಾಗಿದ್ದಾರೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಲ್ಲಿ ಗುಜರಾತ್ನ ಅಹಮದಾಬಾದ್ನಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನ 11 ದಿನದ ಬಳಿಕ ಅಂದರೆ ನಿನ್ನೆ(ಜ.13) ಕರ್ನಾಟಕ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸಿ ಮೈಸೂರಿಗೆ ಕರೆತಂದಿದ್ದಾರೆ. ಪ್ರಾಥಮಿಕ ವಿಚಾರಣೆ ನಡೆಸಿ …
Read More »ಸರ್ವಾಧಿಕಾರಿ ಶಕ್ತಿಗಳಿಗೆ ಸೋಲಾಗಲಿ. ಎನ್ನುತ್ತಲೇ ಕಾಂಗ್ರೆಸ್ ಸೇರ್ಪಡೆಯಾದ ವೈಎಸ್‌ವಿ ದತ್ತ, ಎಚ್.ನಾಗೇಶ್
ಬೆಂಗಳೂರು: ಜೆಡಿಎಸ್ನ ಮಾಜಿ ಶಾಸಕ ವೈಎಸ್‌ವಿ ದತ್ತಾ, ಪಕ್ಷೇತರ ಶಾಸಕ ಎಚ್.ನಾಗೇಶ್, ಮೈಸೂರು ಮೂಡ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಅವರು ಶನಿವಾರ ಕಾಂಗ್ರೆಸ್ ಸೇರ್ಪಡೆಯಾದರು. ಇವರನ್ನು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರ ಕೂಗಿದರು. ವೈಎಸ್‌ವಿ ದತ್ತ ಮಾತನಾಡಿ, ಇದು ಮಾತನಾಡುವ ಸಮಯವಲ್ಲ, ಕೆಲಸ ಮಾಡುವ ಸಮಯ. ಕಳೆದ ಹಲವು …
Read More »ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರತಂಡದಿಂದ ಸಂಕ್ರಾಂತಿಗೆ ಡಿಫರೆಂಟ್ ವಿಷ್!
ಬೆಂಗಳೂರು: ಯಾವಾಗಲೂ ತನ್ನ ವೈಶಿಷ್ಟ್ಯದೊಂದಿಗೇ ಗಮನ ಸೆಳೆಯುವ ನಟ-ನಿರ್ದೇಶಕ ಉಪೇಂದ್ರ, ಇದೀಗ ತಮ್ಮ ನಿರ್ದೇಶನದ ಹೊಸ ಸಿನಿಮಾ ‘ಯುಐ’ ತಂಡದಿಂದ ಸಂಕ್ರಾಂತಿ ಶುಭಾಶಯ ಕೋರುವುದರಲ್ಲೂ ಡಿಫರೆಂಟ್ ಎನಿಸಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾದ ಟೈಟಲ್ಗಳೇ ಡಿಫರೆಂಟ್ ಆಗಿರುತ್ತವೆ. ಅದೇ ರೀತಿ ಅವರು ನಿರ್ದೇಶನ ಮಾಡುತ್ತಿರುವ ನೂತನ ಸಿನಿಮಾ ಹೆಸರೇ ‘ನಾಮ’ದ ರೂಪದಲ್ಲಿದ್ದು ಘೋಷಣೆ ಆದಾಗಲೇ ಭಾರಿ ಗಮನ ಸೆಳೆಯಲಾಗಿತ್ತು. ದೇವರ ನಾಮದ ರೂಪದಲ್ಲಿ ವಿನ್ಯಾಸ ಮಾಡಲಾಗಿರುವ ಈ ಚಿತ್ರದ ಶೀರ್ಷಿಕೆಯನ್ನು …
Read More »2024ರಲ್ಲಿ ಮೋದಿ ಸರ್ಕಾರಕ್ಕೆ ಬಹುಮತ ಪಡೆಯುವುದೂ ಕಷ್ಟವಾಗಬಹುದು: ಶಶಿ ತರೂರ್
ಕೋಯಿಕ್ಕೋಡ್: 2019ರ ಲೋಕಸಭಾ ಚುನಾವಣೆಯಲ್ಲಿನ ವಿಜಯವನ್ನು 2024 ರಲ್ಲಿ ಪುನರಾವರ್ತಿಸಲು ಬಿಜೆಪಿಗೆ ಅಸಾಧ್ಯ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ. ಲೋಕಸಭೆಯಲ್ಲಿ ಆಡಳಿತ ಪಕ್ಷ ಬಿಜೆಪಿಯು 50 ಸ್ಥಾನಗಳನ್ನು ಕಳೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಶುಕ್ರವಾರ ಇಲ್ಲಿ ನಡೆದ ಕೇರಳ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ತಿರುವನಂತಪುರಂ ಸಂಸದರು, ಬಿಜೆಪಿಯ ಪ್ರಾಬಲ್ಯದ ಬಗ್ಗೆ ಮಾತನಾಡುವ ವೇಳೆ ಅವರು ಅನೇಕ ರಾಜ್ಯಗಳನ್ನು ಕಳೆದುಕೊಂಡಿರುವುದು ಸಹ ಸತ್ಯ. ಕೇಂದ್ರದಲ್ಲಿ ಅಧಿಕಾರವನ್ನು ಕಳೆದುಕೊಳ್ಳುವುದು ಅಸಾಧ್ಯವೇನಲ್ಲ …
Read More »
Laxmi News 24×7