ಹಾಸನ ,ಸೆ.14- ಪಕ್ಷದ ಶಾಸಕರ ಕ್ಷೇತ್ರಗಳಿಗೆ ಸಹಕಾರ ಕೋರಿ ಮುಖ್ಯಮಂತ್ರಿಗಳನ್ನು ಭೇಟಿಯಾದರೆ ತಪ್ಪೇನು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಶಾಸಕರ ಕ್ಷೇತ್ರಗಳಿಗೆ ಸಹಾಯ ಕೋರಲ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು. ರಾಜಕೀಯ ಒತ್ತಡದಿಂದ ಕಾನೂನು ಬಾಹಿರ ಕೆಲಸಗಳನ್ನು ಮಾಡಿದರೆ ಅಂತಹ …
Read More »ಎತ್ತಿನಹೊಳೆ ಯೋಜನೆ ಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆ ಚುರುಕು:ರಮೇಶ್ ಜಾರಕಿಹೊಳಿ
ಹಾಸನ: ಎತ್ತಿನಹೊಳೆ ಯೋಜನೆ , ಭೂ ಸ್ವಾಧೀನ ಕುರಿತು ರೈತರು ಮತ್ತು ಕಾಫಿ ಬೆಳೆಗಾರರೊಂದಿಗೆ ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇಂದು ಚರ್ಚೆ ನಡೆಸಿದರು. ಇಲ್ಲಿನ ವಿಕಾಸ ಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಪ್ರಗತಿ ಪರಿಶೀಲನಾ ಸಭೆಗೆ ಹಾಸನ ಜಿಲ್ಲೆಯ ರೈತರು ಮತ್ತು ಕಾಫಿ ಬೆಳೆಗಾರರನ್ನು ಆಹ್ವಾನಿಸಿ, ಅವರೊಂದಿಗೆ ಯೋಜನೆಯ ಭೂ ಸ್ವಾಧೀನ, ಕಾಮಗಾರಿ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಚಿವರು ಚರ್ಚೆ ನಡೆಸಿದರು. …
Read More »ಹೊಳೆನರಸೀಪುರದ ಒಂಟಿ ಮನೆಯಲ್ಲಿ ಹುಕ್ಕಾಬಾರ್ – ಏಳು ಮಂದಿ ಬಂಧನ
ಹಾಸನ: ಒಂಟಿ ಮನೆಯೊಂದರಲ್ಲಿ ನಡೆಯುತ್ತಿದ್ದ ಹುಕ್ಕಾಬಾರ್ ಪಾರ್ಟಿ ಮೇಲೆ ದಾಳಿ ನಡೆಸಿದ ಹೊಳೆನರಸೀಪುರ ಪೊಲೀಸರು, ಏಳು ಮಂದಿ ಯುವಕರನ್ನು ಬಂಧಿಸಿದ್ದಾರೆ. ಜೊತೆಗೆ ಗಾಂಜಾ ಹಾಗೂ ಹುಕ್ಕಾ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಅಡಿಕೆರೆ ಗ್ರಾಮದಲ್ಲಿ, ಚನ್ನರಾಯಪಟ್ಟಣ ತಾಲೂಕು ಮೂಲದ ಎಚ್.ವಿ.ಸುಹಾಸ್ ನೇತೃತ್ವದಲ್ಲಿ ಹುಕ್ಕಾಬಾರ್ ನಡೆಯುತ್ತಿತ್ತು. ಸುಹಾಸ್ ಸೇರಿ ಆರು ಜನರ ಬಂಧನವಾಗಿದೆ. ಒಂಟಿ ಮನೆಯನ್ನು ಬಾಡಿಗೆ ಪಡೆದು ಅಲ್ಲಿ ಹುಕ್ಕಾಬಾರ್ ನಡೆಸುತ್ತಿದ್ದ ಸುಹಾಸ್ ತನ್ನದೇ ಗ್ರಾಹಕರನ್ನು …
Read More »ನಟಿ ರಾಗಿಣಿಗೆ ರಾಜಕೀಯ ಬೆಂಬಲ ಇದ್ದಿದ್ದರೆ ಅವರು ಅರೆಸ್ಟ್ ಆಗ್ತಿರಲಿಲ್
ಮಂಡ್ಯ: ನಟಿ ರಾಗಿಣಿಗೆ ರಾಜಕೀಯ ಬೆಂಬಲ ಇದ್ದಿದ್ದರೆ ಅವರು ಅರೆಸ್ಟ್ ಆಗ್ತಿರಲಿಲ್ಲ. ನಮ್ಮ ಯಾವುದೇ ಒಬ್ಬ ಮುಖಂಡ ಡ್ರಗ್ಸ್ ಮಾಫಿಯಾದಲ್ಲಿದ್ದರೆ ಅವರಿಗೆ ನಮ್ಮ ಸಹಕಾರ ಇಲ್ಲ. ಈ ವಿಚಾರದಲ್ಲಿ ಸರ್ಕಾರ ಹಿಟ್ ರನ್ ಮಾಡಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ಯಾವುದೇ ಮುಖಂಡ ಡ್ರಗ್ ಮಾಫಿಯಾದಲ್ಲಿದ್ದರೆ ಅವರಿಗೆ ನಮ್ಮ ಸಹಕಾರ ಇಲ್ಲ. ಡ್ರಗ್ಸ್ ದಂಧೆಯನ್ನ ಬುಡಸಮೇತ ಕೀಳುವವರೆಗೆ …
Read More »ಬೆಳ್ಳಂಬೆಳಗ್ಗೆ ಪೊಲೀಸ್ ಫೈರಿಂಗ್……………..
ಹಾಸನ: ಕಳೆದ ಭಾನುವಾರದಂದು ಚನ್ನರಾಯಪಟ್ಟಣದಲ್ಲಿ ನಡೆದ ಜೋಡಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆದರೆ ಕೊಲೆ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಎರಡೇ ದಿನದಲ್ಲಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯ ವೇಳೆಯಲ್ಲಿ ಆರೋಪಿಯು ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ. ಈ …
Read More »ಕಾಮದಾಹ ತೀರಿಸದ್ದಕ್ಕೆ ಕಲ್ಲು ಎತ್ತಾಕಿ ಕೊಂದು ಅತ್ಯಾಚಾರ…………..
ಹಾಸನ: ಸೋಮವಾರ ರಾತ್ರಿ ರಸ್ತೆ ಪಕ್ಕದಲ್ಲೇ ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕಾಮದ ದಾಹ ತೀರಿಸಲು ಒಪ್ಪದ ನಿರ್ಗತಿಕ ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ, ಬಳಿಕ ಕಾಮುಕ ಅತ್ಯಾಚಾರ ಎಸಗಿದ್ದಾನೆ .ನಗರದ ಬಿಎಂ ರಸ್ತೆಯಲ್ಲಿನ ಎನ್‍ಆರ್ ವೃತ್ತದ ಸಮೀಪವಿರುವ ಶ್ರೀ ಕನ್ನಿಕಾ ಪರಮೇಶ್ವರಿ ಸಹಕಾರಿ ಬ್ಯಾಂಕ್ ಎದುರು ಕೊಲೆ ನಡೆದಿತ್ತು. ಮಹಿಳೆ ಸುಮಾರು 45 ವರ್ಷದವಳಾಗಿದ್ದರು. ತನ್ನ …
Read More »ಕೊರೊನಾ ವಾರಿಯರ್ ಗಳನ್ನ ಅಶ್ಲೀಲ ಪದಗಳಿಂದ ನಿಂದಿಸಿದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಹಾಸನ: ಕೊರೊನಾ ವಾರಿಯರ್ ಗಳನ್ನ ಅಶ್ಲೀಲ ಪದಗಳಿಂದ ನಿಂದಿಸಿದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಅಶ್ಲೀಲವಾಗಿ ತಮ್ಮನ್ನು ನಿಂದಿಸಿದ ಕುಟುಂಬಸ್ಥರ ವಿರುದ್ಧ ವೈದ್ಯಕೀಯ ಸಿಬ್ಬಂದಿ ಆಕ್ರೋಶ ಹೊರ ಹಾಕಿದ್ದಾರೆ. ಆಲೂರು ತಾಲೂಕಿನ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರ ಮನೆ ಸೀಲ್‍ಡೌನ್ ಮಾಡಲು ಅಧಿಕಾರಿಗಳು ತೆರಳಿದ್ದರು. ಆದ್ರೆ ಮನೆಯವರು ಒಂದು ವರದಿಯಲ್ಲಿ ನೆಗೆಟಿವ್ ಎಂದಿದೆ. ಮತ್ತೊಂದು ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ ಎಂದು ವರದಿಯ …
Read More »ಡಾಕ್ಟರ್ ನಿವೇದಿತಾ ಮತ್ತು ಡಾಕ್ಟರ್ ಸವಿತಾ ಅವರು ಹಾಸನ ರಕ್ತನಿಧಿಗೆ ಬಂದು ಬಿ – ನೆಗೆಟಿವ್ ರಕ್ತವನ್ನು ರಕ್ತದಾನ ಮಾಡಿ ಜೀವ ಉಳಿಸುವ ಕೆಲಸ ಮಾಡಿದ್ದಾರೆ .
ಹಾಸನ: ಇಂದು ಹಾಸನದ ಎಸ್.ಡಿ.ಎಂ.ಎ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಂಕ್ರಪ್ಪ ಎಂಬುವರಿಗೆ ರಕ್ತದ ಅಂಶ ಕಡಿಮೆ ಇರುವ ಕಾರಣ ಬಿ – ನೆಗೆಟಿವ್ ರಕ್ತ ಅವಶ್ಯಕತೆ ಇದೆ ಎಂದು ಹಾಸನದಲ್ಲಿ ಇರುವ ಎಲ್ಲಾ ರಕ್ತ ನಿಧಿಗಳಿಗೆ ಭೇಟಿ ನೀಡಿದರು ಕೂಡ ಬಿ – ನೆಗೆಟಿವ್ ರಕ್ತ ದೊರೆಯಲಿಲ್ಲ. ಹಾಗೂ ಶಂಕ್ರಪ್ಪ ಅವರು ಬೆಂಗಳೂರಿನವರಾಗಿದ್ದಾರೆ ಅವರ ಸಂಬಂಧಿಕರು ಕೂಡ ಬೇಗ ಮುಂದೆ ಬರಲು ಆಗದ ಕಾರಣ , ಅಲ್ಲೇ ಕಾರ್ಯನಿರ್ವಹಿಸುತ್ತಿದ್ದ ಡಾಕ್ಟರ್ಸ್ …
Read More »ಸಚಿವರ ಎದುರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡು ನೂಕಾಟ, ತಳ್ಳಾಟ
ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರ ಎದುರೇ ಬಿಜೆಪಿ ಕಾರ್ಯಕರ್ತರು ಕಿತ್ತಾಡಿಕೊಂಡ ಘಟನೆ ಅರಸಿಕೇರೆಯ ಚಲುವನಹಳ್ಳಿಯಲ್ಲಿ ಗುರುವಾರ ನಡೆದಿದೆ. ಮೂಲ ಬಿಜೆಪಿ ಕಡೆಗಣಿಸಲಾಗುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದು, ಸಚಿವರ ಎದುರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡು ನೂಕಾಟ, ತಳ್ಳಾಟ ಮಾಡಿಕೊಂಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಚಿವ ಗೋಪಾಲಯ್ಯ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಕುಮಾರ್ ಕಾರ್ಯಕರ್ತರ ಸಮಾಧಾನ ಪಡೆಸಲು ಹರಸಾಹಸ ಪಟ್ಟ ಪ್ರಸಂಗ …
Read More »ಮುಸುಕಿನ ಜೋಳ ಬೆಳೆದು ಆರ್ಥಿಕ ಸಂಕಷ್ಟಕೊಳಗಾದ ರೈತರು
ಹಾಸನ : ಕೋವಿಡ್-19ನ ಲಾಕ್‌ಡೌನ್ ಸಮಸ್ಯೆಯಿಂದ ಮುಸುಕಿನ ಜೋಳ ಬೆಳೆದು ಆರ್ಥಿಕ ಸಂಕಷ್ಟಕೊಳಗಾದ ಪ್ರತಿ ರೈತರಿಗೆ ನೇರವಾಗಿ 5,000 ರು.ಗಳನ್ನು ನೇರ ನಗದು ವರ್ಗಾವಣೆ ಮಾಡುವ ಯೋಜನೆಯಾಗಿದ್ದು, ಹಾಸನ ಜಿಲ್ಲೆಯಲ್ಲಿ ಒಟ್ಟು 48,255 ರೈತರಿಗೆ ನೇರ ನಗದು ವರ್ಗಾವಣೆ ಮಾಡಿರುವುದಾಗಿ ಸಚಿವ ಗೋಪಾಲಯ್ಯ ಹೇಳಿದರು. ಜಿಲ್ಲಾ ಪಂಚಾಯತ್ ವತಿಯಿಂದ ಒಟ್ಟು 22 ಇಲಾಖೆಗಳಿಗೆ ಈಗಾಗಲೇ 112 ಕೋಟಿ ರು. ಬಿಡುಗಡೆಯಾಗಿದ್ದು, 105 ಕೋಟಿ ರು. ವೆಚ್ಚ ಮಾಡಲಾಗಿದೆ. 2019-20ನೇ ಸಾಲಿನಲ್ಲಿ …
Read More »